ಬಳ್ಳಾರಿ ನಗರದ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ನಾಗರಿಕ ಸಮಿತಿ ಪ್ರತಿಭಟನೆ
ಬಳ್ಳಾರಿ, 10 ಮಾರ್ಚ್ (ಹಿ.ಸ.) : ಆ್ಯಂಕರ್ : ಬಳ್ಳಾರಿ ನಗರದ ಜ್ವಲಂತ ಸಮಸ್ಯೆಗಳ ಕುರಿತು ಅಧಿಕಾರಿಗಳ ಗಮನ ಸೆಳೆಯಲು ಬಳ್ಳಾರಿ ನಾಗರಿಕ ಹೋರಾಟ ಸಮಿತಿಯು ಮಹಾನಗರಪಾಲಿಕೆಯ ಆವರಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ, ಪಾಲಿಕೆಯ ಆಯುಕ್ತರಿಗೆ ಮನವಿ ಸಲ್ಲಿಸಿದೆ. ಬಿಎನ್‍ಹೆಚ್‍ಎಸ್ ಸಂಚಾಲಕ ಆರ್. ಸೋಮಶೇಖರಗೌಡ
ಬಳ್ಳಾರಿ ನಗರದ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ನಾಗರಿಕ ಸಮಿತಿ ಪ್ರತಿಭಟನೆ


ಬಳ್ಳಾರಿ ನಗರದ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ನಾಗರಿಕ ಸಮಿತಿ ಪ್ರತಿಭಟನೆ


ಬಳ್ಳಾರಿ ನಗರದ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ನಾಗರಿಕ ಸಮಿತಿ ಪ್ರತಿಭಟನೆ


ಬಳ್ಳಾರಿ, 10 ಮಾರ್ಚ್ (ಹಿ.ಸ.) :

ಆ್ಯಂಕರ್ : ಬಳ್ಳಾರಿ ನಗರದ ಜ್ವಲಂತ ಸಮಸ್ಯೆಗಳ ಕುರಿತು ಅಧಿಕಾರಿಗಳ ಗಮನ ಸೆಳೆಯಲು ಬಳ್ಳಾರಿ ನಾಗರಿಕ ಹೋರಾಟ ಸಮಿತಿಯು ಮಹಾನಗರಪಾಲಿಕೆಯ ಆವರಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ, ಪಾಲಿಕೆಯ ಆಯುಕ್ತರಿಗೆ ಮನವಿ ಸಲ್ಲಿಸಿದೆ.

ಬಿಎನ್‍ಹೆಚ್‍ಎಸ್ ಸಂಚಾಲಕ ಆರ್. ಸೋಮಶೇಖರಗೌಡ ಅವರು ಪ್ರತಿಭಟನೆಯ ನೇತೃತ್ವವಹಿಸಿ, ಬೇಸಿಗೆಯಲ್ಲಿ ಸಮರ್ಪಕ ಶುದ್ಧವಾದ ಕುಡಿಯುವ ನೀರು ಪೂರೈಸಬೇಕು. ವಿದ್ಯುತ್ ಕಡಿತವನ್ನು ಕಡಿಮೆ ಮಾಡಲು ಎಕ್ಸ್‍ಪ್ರೆಸ್ ಲೈನ್ ವ್ಯವಸ್ಥೆಯನ್ನು ಕುಡಿಯುವ ನೀರು ಪೂರೈಕೆಗೆ ನೀಡಬೇಕು.

ಬೀದಿ ನಾಯಿ, ಬಿಡಾಡಿ ದನಗಳ ಹಾವಳಿ ತಪ್ಪಿಸಲು ತುರ್ತಾಗಿ ಕ್ರಮಕೈಗೊಳ್ಳಬೇಕು. ವಡ್ಡರಬಂಡ ಹತ್ತಿರ ರಾಜಕಾಲುವೆ ಸೇತುವೆಯನ್ನು ತುರ್ತಾಗಿ ನಿರ್ಮಿಸಬೇಕು. ರಾಧಿಕಾ ಥಿಯೇಟರ್ ಎದುರಗುಡೆ, ಸಂಗಮ್ ಥಿಯೇಟರ್ ಮುಂದಿನ ರಸ್ತೆಗಳನ್ನು ದುರಸ್ತಿ ಮಾಡಬೇಕು ಎಂದು ಅವರು ಆಗ್ರಹಿಸಿದರು.

ಬಳ್ಳಾರಿ ನಗರದ ಎಲ್ಲಾ ರಸ್ತೆಗಳನ್ನು ಸೂಕ್ತವಾಗಿ ನಿರ್ವಹಣೆ ಮಾಡಲು ಕ್ರಮಕೈಗೊಳ್ಳಬೇಕು. ಕುಡಿಯುವ ನೀರಿನ ಪೈಪ್ ಸಂಪರ್ಕ ಹಾಗೂ ಇತರೆ ಕೆಲಸಗಳಿಗೆ ಅಗೆಯಲಾದ ರಸ್ತೆಗಳನ್ನು ದುರಸ್ತಿ ಮಾಡಿ ಹಾಳಾದ ರಸ್ತೆಗಳನ್ನು ದುರಸ್ತಿ ಮಾಡಬೇಕು ಎಂದು ಅವರು ಆಗ್ರಹಿಸಿದರು.

ಅವೈಜ್ಞಾನಿಕ ವೇಗ ತಡೆಗಳನ್ನು ತೆಗೆದುಹಾಕಿ, ವೈಜ್ಞಾನಿಕವಾಗಿ ವೇಗ ತಡೆಗಳನ್ನು ನಿರ್ಮಿಸಬೇಕು. ಕೆಡವಲಾದ ಸಣ್ಣ ಮಾರುಕಟ್ಟೆ ಸ್ಥಳದಲ್ಲಿ ಮಾರುಕಟ್ಟೆ ಜೊತೆಗೆ ಕೆಳ ಮಹಡಿಯಲ್ಲಿ ವಾಹನ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು.

ಸತ್ಯನಾರಾಯಣಪೇಟೆ ಕೆಳಸೇತುವೆಯಲ್ಲಿ ನೀರು ನಿಲ್ಲದಂತೆ ಮಾಡಲು ಸೂಕ್ತ ಕ್ರಮಕೈಗೊಳ್ಳಬೇಕು. ಮನಿಯಾರ್ ಲೈನ್‍ನಲ್ಲಿರುವ ಸರ್ಕಾರಿ ಆಸ್ಪತ್ರೆಯನ್ನು ವ್ಯವಸ್ಥಿತಗೊಳಿಸಬೇಕು. ಕಪ್ಪಗಲ್ಲು ರಸ್ತೆ ಬಸ್ ನಿಲ್ದಾಣಗಳನ್ನು ದುರಸ್ತಿಗೊಳಿಸಿ, ಸೂಕ್ತ ನಿರ್ವಹಣೆ ಮಾಡಬೇಕು.

ಯಾವುದೇ ಕಾಮಗಾರಿ ನಡೆಯುವ ಸ್ಥಳದಲ್ಲಿ, ಯಾವ ಇಲಾಖೆ, ಗುತ್ತಿಗೆದಾರರ ವಿವರಗಳು, ಅಂದಾಜು ವೆಚ್ಚ ಹಾಗೂ ಕಾಮಗಾರಿಗೆ ನಿಗದಿತ ಅವಧಿ ಸೂಚಿಸುವ, ಸೂಚನಾ ಫಲಕವನ್ನು ಸಾರ್ವಜನಿಕರಿಗೆ ಕಾಣುವ ಸ್ಥಳದಲ್ಲಿ ದಪ್ಪನೆಯ ಅಕ್ಷರಗಳಲ್ಲಿ ಪ್ರದರ್ಶನ ಮಾಡಬೇಕು ಎಂದು ಅವರು ಆಗ್ರಹಿಸಿದರು.

ಬಳ್ಳಾರಿಯ ರಂಗಮಂದಿರದ ಎದುರುಗಡೆ ಇರುವ ಉದ್ಯಾನವನವನ್ನು ದುರಸ್ತಿ ಗೊಳಿಸಿ, ಸೂಕ್ತ ನಿರ್ವಹಣೆ ಮಾಡಿ. ಹದಗೆಟ್ಟಿರುವ ಟ್ರಾಫಿಕ್ ನಿರ್ವಹಣೆಯನ್ನು ಸರಿಪಡಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಸಂತ ಮೇರಿ ಶಾಲೆಯ (ಸಂತ ಫಿಲೋಮೆನಾ ಬದಿಯಲ್ಲಿ-ಫುಡ್ ಕೋರ್ಟ್ ರಸ್ತೆ) ಮುಂಭಾಗದ ಸಿಸಿ ರಸ್ತೆಯಲ್ಲಿ ವೇಗದಿಂದ ಚಲಿಸುವ ವಾಹನಗಳಿಗೆ ಕಡಿವಾಣ ಹಾಕಲು, ವೈಜ್ಞಾನಿಕ ವೇಗ ತಡೆಗಳನ್ನು ನಿರ್ಮಿಸಬೇಕು ಎಂದು ಅವರು ಆಗ್ರಹಿಸಿದರು.

ಬಳ್ಳಾರಿ ನಗರದಲ್ಲಿ ಪ್ರಮುಖ ವೃತ್ತಗಳನ್ನು ಅನಾವಶ್ಯಕವಾಗಿ ಹೊಡೆದುಹಾಕಿ ದುಂದುವೆಚ್ಚ ಮಾಡಿ ಮರು ನಿರ್ಮಿಸುವುದನ್ನು ಬಿಟ್ಟು, ಜನರ ಆದ್ಯತೆಯ ಮೇರೆಗೆ ಕಾಮಗಾರಿಗಳನ್ನು ತೆಗೆದುಕೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ನಿವೃತ್ತ ಉಪನ್ಯಾಸಕ ನರಸಣ್ಣ ಡಾ. ಎನ್. ಪ್ರಮೋದ್, ನಿವೃತ್ತ ಮುಖ್ಯ ಇಂಜಿನಿಯರ್ ಉದ್ದಿಹಾಳ್, ಶ್ಯಾಂಸುಂದರ್, ನಾಗರತ್ನ, ಉಮಾ ಮಹೇಶ್, ಅಂತೋನಿ, ಉಮೇಶ್, ವಿದ್ಯಾ, ಸುರೇಶ್, ಈಶ್ವರಿ, ಶಾಂತಿ ಇನ್ನಿತರರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande