ಜನವರಿ 23ಕ್ಕೆ ಕಲ್ಟ್ ಸಿನೆಮಾ ಬಿಡುಗಡೆ
ಕೊಪ್ಪಳ, 08 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಜನವರಿ 23ಕ್ಕೆ ಬಿಡುಗಡೆ ಆಗಲಿರುವ ಕನ್ನಡದ ಕಲ್ಟ್ ಸಿನಿಮಾವನ್ನು ಗೆಲ್ಲಿಸಿ ಎಂದು ನಟ ಝೈದ್ ಖಾನ್ ಅವರು ಪ್ರೇಕ್ಷಕರಲ್ಲಿ ಮನವಿ ಮಾಡಿದರು. ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿನಿಮಾ ಲೋ ಬಜೆಟ್ ಆ
ಕಲ್ಟ್ ಸಿನೆಮಾ ಜನವರಿ 23 ಕ್ಕೆ ಬಿಡುಗಡೆ


ಕಲ್ಟ್ ಸಿನೆಮಾ ಜನವರಿ 23 ಕ್ಕೆ ಬಿಡುಗಡೆ


ಕಲ್ಟ್ ಸಿನೆಮಾ ಜನವರಿ 23 ಕ್ಕೆ ಬಿಡುಗಡೆ


ಕೊಪ್ಪಳ, 08 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಜನವರಿ 23ಕ್ಕೆ ಬಿಡುಗಡೆ ಆಗಲಿರುವ ಕನ್ನಡದ ಕಲ್ಟ್ ಸಿನಿಮಾವನ್ನು ಗೆಲ್ಲಿಸಿ ಎಂದು ನಟ ಝೈದ್ ಖಾನ್ ಅವರು ಪ್ರೇಕ್ಷಕರಲ್ಲಿ ಮನವಿ ಮಾಡಿದರು.

ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿನಿಮಾ ಲೋ ಬಜೆಟ್ ಆಗಿದ್ದರೂ ಕಂಟೆಂಟ್ ಚನ್ನಾಗಿದ್ದರೆ ಜನ ಕೈ ಹಿಡಿತಾರೆ. ಕಥಾ ವಸ್ತು ಸರಿಯಾಗಿಲ್ಲದಿದ್ದಲ್ಲಿ ಯಾರೂ ಥೇಟರ್ ಹತ್ತಿರ ಸುಳಿಯಲ್ಲ. ಆಗ ಸಿನಿಮಾ ನಿರ್ಮಿಸಿದವರೇ ತಮ್ಮ ಮನೆಯಲ್ಲಿ ತಾವೇ ಕುಳಿತು ತಮ್ಮ ಸಿನಿಮಾ ನೋಡಬೇಕಷ್ಟೇ ಎಂದು ಅಭಿಪ್ರಾಯಪಟ್ಟರು.

ತಾವು ನಟಿಸಿದ ಕನ್ನಡದ ಮೊದಲ ಸಿನಿಮಾ ಬನಾರಸ್, ಮಿಸ್ಟಿರಿಯಸ್ ಲವ್ ಸ್ಟೋರಿ ಆಗಿತ್ತು. ಜನ ಆ ಸಿನಿಮಾ ಮತ್ತು ಹಾಡುಗಳನ್ನು ಇಷ್ಟಪಟ್ಟಿದ್ದರು. ತಮ್ಮ ಎರಡನೇ ಸಿನಿಮಾ ಕಲ್ಟ್ 2026ರ ಜನವರಿ 23ರಂದು ಬಿಡುಗಡೆ ಆಗಲಿದೆ. ಈ ಸಿನಿಮಾ ಕೂಡ ಸಹ ಲವ್ ಸ್ಟೋರಿ ಥ್ರಿಲ್ಲಿಂಗ್ ಅಂಶ ಹೈಲೈಟ್ ಆಗಿದೆ. ಕಲ್ಟ್ ಅಂದ್ರೆ ಮಾಸ್, ಪಂಥ, ಸಂಸ್ಕೃತಿ ಅಂತಾನೂ ಅರ್ಥ ಎಂದರು.

ಅದ್ಧೂರಿ ಮೆರವಣಿಗೆ :

ನಟ ಝೈದ್ ಖಾನ್ ಕೊಪ್ಪಳಕ್ಕೆ ಬರುತ್ತಿದ್ದಂತೆ ನಗರದ ಬಸವೇಶ್ವರ ವೃತ್ತದಲ್ಲಿ ಅವರನ್ನು ಸ್ವಾಗತಿಸಲಾಯಿತು. ಬಸವಣ್ಣ ಮೂರ್ತಿಗೆ ಮಾಲಾರ್ಪಣೆ ಮಾಡಿ ಅಲ್ಲಿಂದ ಅದ್ಧೂರಿ ಮೆರವಣಿಗೆ ಮೂಲಕ ಅಶೋಕ ವೃತ್ತ, ಸಾಹಿತ್ಯ ಭವನ ತಲುಪಲಾಯಿತು.

ಸಾಹಿತ್ಯ ಭವನದಲ್ಲಿ ನಡೆದ ಕಾರ್ಯಕ್ರಮವನ್ನು ಡೋಲು ಭಾರಿಸಿ ಜೈದ್‍ಖಾನ್ ಉದ್ಘಾಟಿಸಿದರು. ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಮಾತನಾಡಿ ಸಿನಿಮಾ ಗೆಲ್ಲಿಸುವಂತೆ ಜನರಿಗೆ ಮನವಿ ಮಾಡಿದರು.

ಈ ವೇಳೆ ಜೈದ್ ಖಾನ್ ಮಾತನಾಡಿ, ನಟಿ ರಚಿತಾ ರಾಮ್, ಮಲೈಕಾ ಅವರು ಬರಬೇಕಿತ್ತು. ವಿಮಾನ ಯಾನ ತೊಂದರೆಯಿಂದ ಬರಲಾಗಿಲ್ಲ. ಕೊಪ್ಪಳದ ಜನತೆಗೆ ನಮಸ್ಕಾರ ತಿಳಿಸಿದ್ದಾರೆ.

ಆಸಿಫ್ ಖಾನ್ ಅಣಗಿ, ಅಕ್ಬರ್ ಪೆÇಲೀಸ್ ಮನಿ, ನಾಗರಾಜ್ ಮೇಟಿ, ಬಶೀರ್ ಅಹ್ಮದ್, ಪರಶುರಾಮ್ ಕೆರೆಹಳ್ಳಿ ಇದ್ದರು. ಡ್ಯಾನ್ಸ್ ಮಾಸ್ಟರ್ ಸಂಜು ನೇತೃತ್ವದಲ್ಲಿ ನಾಟ್ಯರಾಜ ಡ್ಯಾನ್ಸ್ ಸ್ಟುಡಿಯೋದ ಅಬ್ದುಲ್, ಸಂಜನಾ, ಸಾಹಿತ್ಯ ಗೊಂಡಬಾಳ, ಅಕ್ಷರ ಗೊಂಡಬಾಳ ಇತರರು ಬ್ಲಡಿ ಲವ್ ಹಾಡಿಗೆ ಹೆಜ್ಜೆ ಹಾಕಿದರು, ನಟ ಜೈದ್ ಖಾನ್ ಸಾಥ್ ನೀಡಿ ಜನರನ್ನು ರಂಜಿಸಿದರು. ಅನೇಕ ಸಂಘಟನೆಗಳ ಅಭಿಮಾನಿಗಳು ಬೃಹತ್ ಹಾರದ ಮೂಲಕ ಸನ್ಮಾನಿಸಿ ಝೈದ್ ಖಾನ್ ಅವರನ್ನು ಗೌರವಿಸಿದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande