ಹಾಸನ ಜಿಲ್ಲೆಯ ರೈತರ ಕನಸು ಇಂದು ನನಸು : ಡಿ.ಕೆ.ಶಿವಕುಮಾರ್
ಹಾಸನ, 06 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಹಾಸನ ಜಿಲ್ಲೆ ರೈತರ ದಶಕಗಳ ಕನಸು ಇಂದು ನನಸಾಗಿದೆ. ನುಡಿದಂತೆ ನಡೆಯುವ ನಮ್ಮ ಸರ್ಕಾರ, ಹಾಸನ ಜಿಲ್ಲೆಯಲ್ಲಿ 2025ರಲ್ಲಿ 1,51,371 ರೈತರ ಪೋಡಿ ದುರಸ್ತಿ ಮಾಡಿದೆ, 2,15,000 ಎಕರೆ ಭೂಮಿ ಮಂಜೂರು ಮಾಡಲಾಗಿದೆ. ಇದರಿಂದ 12,84,714 ಫಲಾನುಭವಿಗಳಿಗೆ ಅನುಕೂಲವ
DKS


ಹಾಸನ, 06 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಹಾಸನ ಜಿಲ್ಲೆ ರೈತರ ದಶಕಗಳ ಕನಸು ಇಂದು ನನಸಾಗಿದೆ. ನುಡಿದಂತೆ ನಡೆಯುವ ನಮ್ಮ ಸರ್ಕಾರ, ಹಾಸನ ಜಿಲ್ಲೆಯಲ್ಲಿ 2025ರಲ್ಲಿ 1,51,371 ರೈತರ ಪೋಡಿ ದುರಸ್ತಿ ಮಾಡಿದೆ, 2,15,000 ಎಕರೆ ಭೂಮಿ ಮಂಜೂರು ಮಾಡಲಾಗಿದೆ. ಇದರಿಂದ 12,84,714 ಫಲಾನುಭವಿಗಳಿಗೆ ಅನುಕೂಲವಾಗಿದೆ. ಸದ್ಯ 24,006 ರೈತರಿಗೆ ಪೋಡಿ ದುರಸ್ತಿ ಸಮರ್ಪಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ಹಾಸನ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್‌ ಸಹಭಾಗಿತ್ವದಲ್ಲಿ ಆಯೋಜಿಸಿದ್ದ “ಪ್ರಗತಿಯ ಹಾದಿಯಲ್ಲಿ ಹಾಸನ” - ಸರ್ಕಾರದ ಸೇವೆಗಳ ಸಮರ್ಪಣಾ ಸಮಾವೇಶದಲ್ಲಿ

ಮಾತನಾಡಿದ ಅವರು, 50 ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ಕಂದಾಯ ಇಲಾಖೆಯ ದರಖಾಸ್ತು ಪೋಡಿ, ಪೌತಿ ಖಾತೆ, ಕಂದಾಯ ಗ್ರಾಮ, 94 ಸಿ ಹಕ್ಕುಪತ್ರಗಳ ವಿತರಣೆ ಮಾಡಲಾಗಿದೆ ಎಂದು ತಿಳಿಸಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande