ಬಿಜೆಪಿ ರೈತ ಮೋರ್ಚಾದಿಂದ ಡಿ.೯ ರಂದು ಜಿಲ್ಲಾ ಕೇಂದ್ರದಲ್ಲಿ ಬೃಹತ್ ಪ್ರತಿಭಟನೆ
ಬಿಜೆಪಿ ರೈತ ಮೋರ್ಚಾದಿಂದ ಡಿ.೯ ರಂದು ಜಿಲ್ಲಾ ಕೇಂದ್ರದಲ್ಲಿ ಬೃಹತ್ ಪ್ರತಿಭಟನೆ
ಬಿಜೆಪಿ ಆನಂದ್


ಕೋಲಾರ, ೦೭ ಡಿಸೆಂಬರ್ (ಹಿ.ಸ) ಆಂಕರ್ :

ಆ್ಯಂಕರ್ : ರೈತರ ಸಮಸ್ಯೆಗಳನ್ನು ಪರಿಹರಿಸುವಂತೆ ಆಗ್ರಹಿಸಿ ಜಿಲ್ಲಾ ಬಿಜೆಪಿ ರೈತ ಮೋರ್ಚಾ ವತಿಯಿಂದ ಡಿ.೯ ರಂದು ಜಿಲ್ಲಾ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಕೊಮ್ಮನಹಳ್ಳಿ ಆನಂದ್ ತಿಳಿಸಿದ್ದಾರೆ

ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು ರೈತರ ಸಮಸ್ಯೆಗಳಿಗೆ ಸ್ಪಂದಿಸುವ ವಿಚಾರಕ್ಕೆ ಸಂಬAಧಪಟ್ಟAತೆ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ ಬೆಳೆ ಹಾನಿ ಪರಿಹಾರ, ಹಾಲಿನ ಪ್ರೋತ್ಸಾಹಧನ ಬಿಡುಗಡೆ ಮೊದಲಾದ ಒತ್ತಾಯಗಳನ್ನು ಮಾಡಲಾಗುವುದು ಡಿ.೯ ರಂದು ಮಂಗಳವಾರ ಬೆಳಗ್ಗೆ ೧೦.೩೦ ಗಂಟೆಗೆ ನಗರದ ಮೆಕ್ಕೆ ವೃತ್ತದಲ್ಲಿ ಪ್ರತಿಭಟನೆ ಪ್ರಾರಂಭವಾಗಿ ಮೆರವಣಿಗೆ ಮೂಲಕ ತೋಟಗಾರಿಕೆ ಇಲಾಖೆ ಮುಂದೆ ಬೃಹತ್ ಧರಣಿ ನಡೆಯಲಿದ್ದು ಮಾಜಿ ಉಪ ಮುಖ್ಯಮಂತ್ರಿ ಡಾ ಅಶ್ವಥ್ ನಾರಾಯಣ್, ಸೇರಿದಂತೆ ಮಾಜಿ ಸಂಸದರು ಮಾಜಿ ಶಾಸಕರು, ರಾಜ್ಯ ಮತ್ತು ಜಿಲ್ಲಾ ಬಿಜೆಪಿ ರೈತ ಮೋರ್ಚಾ ಮುಖಂಡರು ಭಾಗವಹಿಸಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಕೊಮ್ಮನಹಳ್ಳಿ ಆನಂದ್ ಮನವಿ ಮಾಡಿದ್ದಾರೆ.

ಚಿತ್ರ : ಬಿಜೆಪಿ ಆನಂದ್

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande