
ಹೊಸಪೇಟೆ, 06 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಅಂಚೆ ಇಲಾಖೆಯಲ್ಲಿ ನಿವೃತ್ತರಾಗಿ ಪಿಂಚಣಿ ಪಡೆಯುತ್ತಿರುವ ಇಲಾಖಾ ನೌಕರರಿಗೆ ಮತ್ತು ಕುಟುಂಬ ಪಿಂಚಣಿ ಪಡೆಯುತ್ತಿರುವ ಕುಟುಂಬ ಪಿಂಚಣಿದಾರರಿಗೆ ಡಿಸೆಂಬರ್ 12 ರಂದು, ಸಂಜೆ 4 ಗಂಟೆಗೆ ಬಳ್ಳಾರಿ ವಿಭಾಗಿಯ ಕಚೇರಿಯಲ್ಲಿ ಪಿಂಚಣಿ ಅದಾಲತ್ ಅಯೋಜಿಸಲಾಗಿದೆ.
ಪಿಂಚಣಿದಾರರು ತಮ್ಮ ಕುಂದು ಕೊರತೆಯ ಅಹವಾಲುಗಳಿದ್ದಲ್ಲಿ ಬಳ್ಳಾರಿ ವಿಭಾಗೀಯ ಕಾರ್ಯಲಯಕ್ಕೆ ಡಿ.10 ರೊಳಗೆ ಪತ್ರದ ಮೂಲಕ ಅಥವಾ ಇ-ಮೇಲ್ ಮೂಲಕ ಕಳುಹಿಸಿಕೊಡಬೇಕು.
ಡಿ.12 ರಂದು ಸಲ್ಲಿಸಿದ ಅಹವಾಲುನೊಂದಿಗೆ ಸಭೆಗೆ ಹಾಜರಾಗುವಂತೆ ಬಳ್ಳಾರಿ ವಿಭಾಗದ ಅಂಚೆ ಅಧೀಕ್ಷಕರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್