ಶಾಸಕ ಜನಾರ್ದನ ರೆಡ್ಡಿ ವಿರುದ್ಧ ಸಚಿವ ಪಾಟೀಲ ಕಿಡಿ
ವಿಜಯಪುರ, 06 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಈ ಬಾರಿ ಚುನಾವಣೆಯಲ್ಲಿ ಸಚಿವ ಎಂ. ಬಿ. ಪಾಟೀಲ ಅವರಿಗೆ ಪಾಠ ಕಲಿಸಲಾಗುವದು ಎಂದು ಜನಾರ್ದನ ರೆಡ್ಡಿ ಹೇಳಿಕೆ ವಿಚಾರಕ್ಕೆ ವಿಜಯಪುರದಲ್ಲಿ ಸಚಿವ ಎಂ. ಬಿ. ಪಾಟೀಲ ಕಿಡಿಕಾರಿದರು. ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲ್
ಕಿಡಿ


ವಿಜಯಪುರ, 06 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಈ ಬಾರಿ ಚುನಾವಣೆಯಲ್ಲಿ ಸಚಿವ ಎಂ. ಬಿ. ಪಾಟೀಲ ಅವರಿಗೆ ಪಾಠ ಕಲಿಸಲಾಗುವದು ಎಂದು ಜನಾರ್ದನ ರೆಡ್ಡಿ ಹೇಳಿಕೆ ವಿಚಾರಕ್ಕೆ ವಿಜಯಪುರದಲ್ಲಿ ಸಚಿವ ಎಂ. ಬಿ. ಪಾಟೀಲ ಕಿಡಿಕಾರಿದರು.

ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲ್ಲ. ಜನಾರ್ದನ ರೆಡ್ಡಿ ದರೋಡೆಕೋರ, ಲೂಟಿಕೊರ, ಆತನ ಬಗ್ಗೆ ನಾನು ಮಾತನಾಡಲ್ಲ. ಈ ಬಾರಿ ಚುನಾವಣೆಯಲ್ಲಿ ಜನಾರ್ದನ ರೆಡ್ಡಿ ಸೋಲತಾನೆ ಎಂದು ಏಕವಚನದಲ್ಲೆ ಕಿಡಿಕಾರಿದರು.

ಆತ ದರೋಡೆಕೋರ, ಲೂಟಿಕೋರ, ಆತನ ಇತಿಹಾಸ ಇಡೀ ಜಗತ್ತಿಗೆ ಗೊತ್ತಿದೆ. ರಾಜ್ಯದ ಸಂಪತ್ತನ್ನು ಲೂಟಿ ಹೊಡೆದು ಅಲ್ಲಿರುವ ದೇವಿಯ ಗುಡಿ ಕೂಡಾ ಕಿತ್ತು ಹಾಕಿದ್ದನು. ಅದರ ಶಾಪ ಇವರಿಗೆ ತಟ್ಟಿದೆ ಎಂದರು.

ಇನ್ನು ಇಂಡಿಗೋ ವಿಮಾನ ಹಾರಾಟದ ವಿಳಂಬ ಪ್ರಯಾಣಿಕರ ಪರದಾಟ ವಿಚಾರಕ್ಕೆ ಪ್ರತಿಕ್ರಿಯಿಸಿದ ಪಾಟೀಲ, ಅದರಲ್ಲಿ ಕೇಂದ್ರ ಸರ್ಕಾರದ್ದು ತಪ್ಪಿದೆ. ಕೇಂದ್ರ ಸರ್ಕಾರ ಈಗ ವಿಡ್ರಾ ಮಾಡಿದೆ, ಈಗ ಯಾಕೆ ಮಾಡಿತು. ಸರಿಯಾಗಿ ಅರೆಂಜ್ ಮೆಂಟ್ ಮಾಡಿ ಕೊಡಬೇಕಿತ್ತು. ಏರ್ ಪೋರ್ಟ್ ಕೂಡಾ ಬಸ್ ಸ್ಟ್ಯಾಂಡ್ ತರ ಆಗಿತ್ತು ಎಂದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande