ಆರೋಗ್ಯ ಕಾರ್ಯಾಲಯದಲ್ಲಿ ಮಹಾಪರಿನಿರ್ವಾಣ ದಿನಾಚರಣೆ
ಗದಗ, 06 ಡಿಸೆಂಬರ್ (ಹಿ.ಸ.) : ಆ್ಯಂಕರ್ : ತಾಲೂಕ ಆರೋಗ್ಯ ಅಧಿಕಾರಿಗಳ ಕಾರ್ಯಾಲಯದಲ್ಲಿ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ.ಬಿ.ಆರ್ ಅಂಬೇಡ್ಕರ್ ಅವರ 69ನೇ ಮಹಾಪರಿನಿರ್ವಾಣ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ತಾಲೂಕ ಆರೋಗ್ಯ ಅಧಿಕಾರಿಗಳಾದ ಡಾ.ಪ್ರೀತ್ ಖೋನಾ ಅವರು ಅಂಬೇಡ್ಕರ್ ಅವರ ಫೋಟೋ
ಫೋಟೋ


ಗದಗ, 06 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ತಾಲೂಕ ಆರೋಗ್ಯ ಅಧಿಕಾರಿಗಳ ಕಾರ್ಯಾಲಯದಲ್ಲಿ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ.ಬಿ.ಆರ್ ಅಂಬೇಡ್ಕರ್ ಅವರ 69ನೇ ಮಹಾಪರಿನಿರ್ವಾಣ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ತಾಲೂಕ ಆರೋಗ್ಯ ಅಧಿಕಾರಿಗಳಾದ ಡಾ.ಪ್ರೀತ್ ಖೋನಾ ಅವರು ಅಂಬೇಡ್ಕರ್ ಅವರ ಫೋಟೋಗೆ ಪುಷ್ಪ ನಮನವನ್ನು ಸಲ್ಲಿಸಿ ಮಾತನಾಡಿ ನಮ್ಮ ಭಾರತ ದೇಶಕ್ಕೆ ಅತ್ಯುತ್ತಮವಾದ ಸಂವಿಧಾನವನ್ನು ರಚಿಸಿಕೊಟ್ಟ ಕೀರ್ತಿ ಡಾ.ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ, ಅವರು ಮಹಾ ಮಾನವತಾವಾದಿ ಯಾದಂತೆ ಬಹುದೊಡ್ಡ ಕಾನೂನು ತಜ್ಞರು ಕೂಡ ಆಗಿದ್ದರು ಅವರು ಸದಾ ಅವರು ಅವಿಸ್ಮರಣೀಯರು ಎಂದರು.

ತಾಲೂಕ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಡಾ.ರಾಜೇಂದ್ರ ಎಸ್ ಗಡಾದ ಅವರು ಮಾತನಾಡಿ ಸಂವಿಧಾನ ಶಿಲ್ಪಿ ಶೋಷಿತರ ಏಳಿಗೆಗೆ ಜೀವನವನ್ನೇ ಮುಡುಪಾಗಿಟ್ಟ ಮಹಾನ್ ಹೋರಾಟಗಾರ ಮಾನವತವಾದಿ ಡಾ. ಅಂಬೇಡ್ಕರ್ ಎಂದರು, ಅವರ ಪುಣ್ಯತಿಥಿಯನ್ನು ಮಹಾಪರಿನಿರ್ವಾಣ ದಿನ ಎಂದು ರಾಷ್ಟçದಾದ್ಯಂತ ಆಚರಿಸಲಾಗುತ್ತಿದ್ದು ಅವರು ಹಾಕಿಕೊಟ್ಟ ದಾರಿಯಲ್ಲಿ ಪ್ರತಿಯೊಬ್ಬ ಪ್ರಜೆಗಳು ನಡೆಯುವ ಮೂಲಕ ಹಾಗೂ ಸಂವಿಧಾನವನ್ನು ಎಲ್ಲರೂ ಗೌರವಿಸುವ ಮೂಲಕ ಅವರಿಗೆ ನಮನಗಳನ್ನು ಸಲ್ಲಿಸೋಣ ಎಂದು ತಿಳಿಸಿದರು.

ಸಮಾರಂಭದಲ್ಲಿ ಡಾ.ಅಸ್ಮಾ ಹೆಸರೂರು ,ಡಾ.ಎಚ್ ಅಶ್ವಿನಿ, ಡಾ.ಬಿ ಕೆ ಪ್ರಿಯಾಂಕ, ಸುಜಾತ ಪಾಟೀಲ, ಎಸ್ ಎಸ್ ಬದ್ದಿ, ಸುಧಾ ಬೆಂತೂರು, ಕೆ ಎಮ್ ರಾಮಕೃಷ್ಣ , ವಿನಾಯಕ್ ಬಡಿಗೇರ, ಸಲೀಂ ನದಾಫ್, ಸರೋಜಾ ಕಟ್ಟಿಮನಿ, ಮೌಲಾಸಾಬ್ ಸಿದ್ದಿ, ಸಿಬ್ಬಂದಿವರ್ಗದವರು ಪಾಲ್ಗೊಂಡಿದ್ದರು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande