
ಗಂಗಾವತಿ, 06 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ವಕೀಲರ ಸಂಘಗಳಿಗೆ ಅಗತ್ಯ ಮೂಲ ಸೌಕರ್ಯ ಒದಗಿಸುವುದರ ಜೊತೆಗೆ ಟೋಲ್ ವಿನಾಯಿತಿ, ಡೆತ್ ಅಂಡ್ ಅಕ್ಸಿಡೆಂಟ್ ಬೆನಿಫಿಟ್ 18 ಲಕ್ಷಕ್ಕೆ ಏರಿಸುವುದು, ನ್ಯಾಯಾಧೀಶರ ಹುದ್ದೆ ಆಕಾಂಕ್ಷಿಗಳಿಗೆ ಉಪನ್ಯಾಸ, ವಿಶ್ರಾಂತಿ ಗೃಹ ನಿರ್ಮಾಣ ಸೇರಿ ಹತ್ತು ಹಲವು ಕೆಲಸ ಮಾಡಲು ಉತ್ಸುಕನಾಗಿದ್ದು ಮುಂಬರುವ ರಾಜ್ಯ ವಕೀಲರ ಪರಿಷತ್ ಚುನಾವಣೆಯಲ್ಲಿ ಅದ್ಯಕ್ಷೀಯ ಸ್ಥಾನಕ್ಕೆ ಸ್ಪಧಿಸಲಿರುವ ನನಗೆ ಮತ ನೀಡಿ ಭಾರಿ ಅಂತರದಲ್ಲಿ ಗೆಲ್ಲಿಸಿ ಎಂದು ಹೈಕೋರ್ಟ್ ಹಿರಿಯ ನ್ಯಾಯವಾದಿ ಶ್ರೀನಿವಾಸ್ ಟಿ.ಗೌಡ ಮನವಿ ಮಾಡಿದರು.
ಅವರು ನಗರದ ನ್ಯಾಯಾಲಯದಲ್ಲಿ ಮಾರ್ಚ್ ತಿಂಗಳಲ್ಲಿ ಜರುಗಲಿರುವ ರಾಜ್ಯ ವಕೀಲರ ಪರಿಷತ್ ಚುನಾವಣೆ ಹಿನ್ನಲೆಯಲ್ಲಿವಕೀಲರಲ್ಲಿ ಮತಯಾಚಿಸಿ ಮಾತನಾಡಿದರು. ಗ್ರಾಮೀಣ ಭಾಗದ ವಕೀಲರಿಗು ಉತ್ತಮ ಕಚೇರಿಗಳಲ್ಲಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳುಲಾಗುವುದು, ಈಗಾಲೆ ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕ ಹಾಗೂ ಉತ್ತರ ಕರ್ನಾಟಕದ 80 ವಕೀಲರ ಸಂಘಗಳಿಗೆ ಭೇಟಿ ನೀಡಿ ಮತಯಾಚಿಸಿದ್ದು, ಸ್ಪಂದನೆ ಉತ್ತಮವಾಗಿದೆ, ವಕೀಲರ ಸಂಘದ ಪದಾಧೀಕಾರಿಗಳು, ಸ್ನೇಹಿತರು ನಮ್ಮ ಗೆಲವಿಗೆ ಸಹಕರಿಸಿಲು ಸಿದ್ಧರಿದ್ದು, ಎಲ್ಲರೂ ಒಕ್ಕೋರಲಿನಿಂದ ಮತ ಹಾಕಿ ಅಬೂತಪೂರ್ವ ಗೆಲುವು ದಾಖಲಿಸಲು ನೆರವಾದಲ್ಲಿ ತಮ್ಮ ಕಾರ್ಯಗಳಿಗೆ ಹಗಲಿರುಳು ಸ್ಪಂದಿಸುವುದಾಗಿ ಅವರು ಭರವಸೆ ನೀಡಿದರು.
ಆ ಸಂದರ್ಭದಲ್ಲಿ ಗಂಗಾವತಿ ತಾಲೂಕು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಹೆಚ್.ಎಂ.ಮಂಜುನಾಥ್, ವಕೀಲರಾದ ವೆಂಕಟೇಶ್ ಡ್ಯಾಗಿ. ತಿಮ್ಮನಗೌಡ, ರಾಮಣ್ಣ, ಉಮಾಶಂಕರ್, ರಾಜೇಶ್, ಪರಶುರಾಮ. ವಿಜಯ. ಮಹಾಂತೇಶ. ಶಿವಕುಮಾರ್ ಉಮಾ ರಮೇಶ್ ಇಂಗಳಗಿ, ರಾಜೇಶ್ವರಿ ವಕೀಲರು, ಹನುಮಂತಪ್ಪ ವಕೀಲರು ಸೇರಿದಂತೆ ಇತರರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್