ಕೊಪ್ಪಳಕ್ಕೆ ಕಲ್ಟ್ ಚಿತ್ರದ ಝೈದ್‍ಖಾನ್, ಮಲೈಕಾ
ಕೊಪ್ಪಳ, 05 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಕೊಪ್ಪಳ ನಗರಕ್ಕೆ ಕನ್ನಡದ ಮತ್ತೊಂದು ಬಿಗ್ ಸಿನೆಮಾ ಆಗಲಿರುವ `ಕಲ್ಟ್’ ಚಿತ್ರದ ನಾಯಕ ನಟ ಝೈದ್ ಖಾನ್ ಮತ್ತು ನಟಿ ಮಲೈಕಾ ವಸುಪಾಲ್ ಹಾಗೂ ತಂಡ ಚಿತ್ರದ ಪ್ರಚಾರಕ್ಕೆ ಆಗಮಿಸುತ್ತಿದ್ದಾರೆ. ಸಚಿವ ಜಮೀರ್ ಅಹ್ಮದ್ ಖಾನ್ ಅವರ ಸುಪುತ್ರ, ಸ್ಟೈಲಿಶ್ ಸ
ಕೊಪ್ಪಳಕ್ಕೆ ಕಲ್ಟ್ ಚಿತ್ರದ ಝೈದ್‍ಖಾನ್, ಮಲೈಕಾ


ಕೊಪ್ಪಳ, 05 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಕೊಪ್ಪಳ ನಗರಕ್ಕೆ ಕನ್ನಡದ ಮತ್ತೊಂದು ಬಿಗ್ ಸಿನೆಮಾ ಆಗಲಿರುವ `ಕಲ್ಟ್’ ಚಿತ್ರದ ನಾಯಕ ನಟ ಝೈದ್ ಖಾನ್ ಮತ್ತು ನಟಿ ಮಲೈಕಾ ವಸುಪಾಲ್ ಹಾಗೂ ತಂಡ ಚಿತ್ರದ ಪ್ರಚಾರಕ್ಕೆ ಆಗಮಿಸುತ್ತಿದ್ದಾರೆ.

ಸಚಿವ ಜಮೀರ್ ಅಹ್ಮದ್ ಖಾನ್ ಅವರ ಸುಪುತ್ರ, ಸ್ಟೈಲಿಶ್ ಸ್ಟಾರ್ ಖ್ಯಾತಿಯ ನಟ. ಝೈದ್ ಖಾನ್ ಅವರು ನಾಯಕ ನಟನಾಗಿ ನಟಿಸಿದ ಖ್ಯಾತ ಚಿತ್ರ ತಾರೆ ರಚಿತಾ ರಾಮ್, ಯುವ ನಟಿ ಮಲೈಕಾ ವಸುಪಾಲ್ ಅವರು ನಟಿಸಿದ ಚಲನಚಿತ್ರ ಕಲ್ಟ್ ಚಿತ್ರದ ಪ್ರಮೋಷನಗಾಗಿ ನಗರಕ್ಕೆ ಆಗಮಿಸುತ್ತಿದ್ದು ಅವರ ಅಭಿಮಾನಿಗಳು ಭರ್ಜರಿ ಸಿದ್ಧತೆ ಮಾಡುತ್ತಿದ್ದಾರೆ.

ರವಿವಾರ ಡಿಸೆಂಬರ್ 7 ರಂದು ಬೆಳಿಗ್ಗೆ 11 ಗಂಟೆಗೆ ರೋಡ್ ಶೋ, ಬೈಕ್ ರ್ಯಾಲಿ ಗಂಜ್ ವೃತ್ತದಿಂದ ಸಾಹಿತ್ಯ ಭವನದವರೆಗೆ ನಡೆಯುತ್ತದೆ ನಂತರ ಸಾಹಿತ್ಯ ಭವನದಲ್ಲಿ ವೇದಿಕೆ ಕಾರ್ಯಕ್ರಮ ಇದ್ದು, ಅಲ್ಲಿಯೇ ಭಾಗವಹಿಸಿದವರಿಗೆ ಕೆಲವು ಉಚಿತ ಉಡುಗೊರೆಗಳನ್ನು ಸಹ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande