ನಾರಾ ಸೂರ್ಯನಾರಾಯಣ ರೆಡ್ಡಿ ಅವರ 72ನೇ ಹುಟ್ಟು ಹಬ್ಬ : ರೈತಣ್ಣನ ಊಟದಲ್ಲಿ ಅನ್ನದಾನ
ಬಳ್ಳಾರಿ, 05 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಮಾಜಿ ಶಾಸಕ, ಮುಖ್ಯಮಂತ್ರಿಗಳ ಮಾಜಿ ರಾಜಕೀಯ ಕಾರ್ಯದರ್ಶಿಗಳೂ ಮತ್ತು ಕೆಪಿಸಿಸಿ ಮಾಜಿ ಉಪಾಧ್ಯಕ್ಷರಾಗಿರುವ ನಾರಾ ಸೂರ್ಯನಾರಾಯಣ ರೆಡ್ಡಿ ಅವರ 72ನೇ ಹುಟ್ಟು ಹಬ್ಬದ ಅಂಗವಾಗಿ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸ
ನಾರಾ ಸೂರ್ಯನಾರಾಯಣ ರೆಡ್ಡಿ ಅವರ 72ನೇ ಹುಟ್ಟು ಹಬ್ಬ : ರೈತಣ್ಣನ ಊಟದಲ್ಲಿ ಅನ್ನದಾನ

ನಾರಾ ಸೂರ್ಯನಾರಾಯಣ ರೆಡ್ಡಿ ಅವರ 72ನೇ ಹುಟ್ಟು ಹಬ್ಬ : ರೈತಣ್ಣನ ಊಟದಲ್ಲಿ ಅನ್ನದಾನ

ನಾರಾ ಸೂರ್ಯನಾರಾಯಣ ರೆಡ್ಡಿ ಅವರ 72ನೇ ಹುಟ್ಟು ಹಬ್ಬ : ರೈತಣ್ಣನ ಊಟದಲ್ಲಿ ಅನ್ನದಾನ

ನಾರಾ ಸೂರ್ಯನಾರಾಯಣ ರೆಡ್ಡಿ ಅವರ 72ನೇ ಹುಟ್ಟು ಹಬ್ಬ : ರೈತಣ್ಣನ ಊಟದಲ್ಲಿ ಅನ್ನದಾನ

ಬಳ್ಳಾರಿ, 05 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಮಾಜಿ ಶಾಸಕ, ಮುಖ್ಯಮಂತ್ರಿಗಳ ಮಾಜಿ ರಾಜಕೀಯ ಕಾರ್ಯದರ್ಶಿಗಳೂ ಮತ್ತು ಕೆಪಿಸಿಸಿ ಮಾಜಿ ಉಪಾಧ್ಯಕ್ಷರಾಗಿರುವ ನಾರಾ ಸೂರ್ಯನಾರಾಯಣ ರೆಡ್ಡಿ ಅವರ 72ನೇ ಹುಟ್ಟು ಹಬ್ಬದ ಅಂಗವಾಗಿ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯು ಬಳ್ಳಾರಿಯ ಎಪಿಎಂಸಿ ಆವರಣದಲ್ಲಿ ನಿರ್ವಹಿಸುತ್ತಿರುವ `ರೈತಣ್ಣ ಊಟ'ದಲ್ಲಿ ಮಧ್ಯಾಹ್ನದ ಸಿಹಿ ಊಟವನ್ನು ಕೃಷಿಕರಿಗೆ ವಿತರಿಸಲಾಯಿತು.

ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ ಅವ್ವಾರು ಮಂಜುನಾಥ್ ಮತ್ತು ಗೌರವ ಕಾರ್ಯದರ್ಶಿಗಳಾದ ಕೆ.ಸಿ. ಸುರೇಶಬಾಬು ಅವರ ನೇತೃತ್ವದಲ್ಲಿ, `ರೈತಣ್ಣನ ಊಟ'ವನ್ನು ಉಣಬಡಿಸಿ, ನಾರಾ ಸೂರ್ಯನಾರಾಯಣ ರೆಡ್ಡಿ ಅವರ ಆರೋಗ್ಯ, ಐಶ್ವರ್ಯ ಮತ್ತು ರಾಜಕೀಯ ಶ್ರೇಯಸ್ಸಿಗೆ ಪ್ರಾರ್ಥನೆ ಮಾಡಿ ಅನ್ನದಾನವನ್ನು ನೆರವೇರಿಸಲಾಯಿತು ಎಂದು ಹೇಳಿದರು.

ಗ್ರಾಮಗಳಿಂದ ರೈತರು, `ಪ್ರತಿ ನಿತ್ಯವೂ ರೈತಣ್ಣನ ಊಟ ಸಿಗುತ್ತದೆ. ಶುಕ್ರವಾರ ಮಾಜಿ ಶಾಸಕರಾಗಿರುವ ಎನ್. ಸೂರ್ಯನಾರಾಯಣ ರೆಡ್ಡಿ ಅವರ 72ನೇ ಹುಟ್ಟು ಹಬ್ಬ ಇರುವ ಕಾರಣ, ಅನೇಕರಿಗೆ ಊಟ ವಿತರಣೆ ಆಗುತ್ತಿದೆ. `ರೈತಣ್ಣನ ಊಟ'ದ ಆಯೋಜಕರಿಗೆ ಧನ್ಯವಾದಗಳು' ಎಂದು ಹೇಳಿದರು.

ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಜಂಟಿ ಕಾರ್ಯದರ್ಶಿ ವಿ. ರಾಮಚಂದ್ರ, ಖಜಾಂಚಿಗಳಾದ ನಾಗಳ್ಳಿ ರಮೇಶ್, ಮಾಜಿ ಅಧ್ಯಕ್ಷರಾದ ಬಿ. ಮಹಾರುದ್ರಗೌಡ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಆಜೀವ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್

 rajesh pande