ಅಸ್ಮಿತಾ ರಾಜ್ಯ ಪೆಂಕಾಕ್ ಸಿಲತ್ ಕ್ರೀಡಾಕೂಟ : ಟ್ಯಾಂಡಿಂಗ್ ಬಂಗಾರ
ಕೊಪ್ಪಳ, 05 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಕೊಪ್ಪಳದ ಹನುಮಸಾಗರದಲ್ಲಿ ನಡೆದ ರಾಜ್ಯ ಮಟ್ಟದ ಖೇಲೋ ಇಂಡಿಯಾದ ಅಸ್ಮಿತಾ ಲೀಗ್ ಪೆಂಕಾಕ್ ಸಿಲತ್ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದ ಚೈತನ್ಯ ಸಮೂಹ ಸಂಸ್ಥೆಯ ಸ್ವಾಮಿ ವಿವೇಕಾನಂದ ಪಿಯು ಕಾಲೇಜಿನ ದ್ವಿತಿಯ ಪಿಯು ವಿಜ್ಞಾನ ವಿದ್ಯಾರ
ಅಸ್ಮಿತಾ ರಾಜ್ಯ ಪೆಂಕಾಕ್ ಸಿಲತ್ ಕ್ರೀಡಾಕೂಟ : ಟ್ಯಾಂಡಿಂಗ್ ಬಂಗಾರ


ಅಸ್ಮಿತಾ ರಾಜ್ಯ ಪೆಂಕಾಕ್ ಸಿಲತ್ ಕ್ರೀಡಾಕೂಟ : ಟ್ಯಾಂಡಿಂಗ್ ಬಂಗಾರ


ಅಸ್ಮಿತಾ ರಾಜ್ಯ ಪೆಂಕಾಕ್ ಸಿಲತ್ ಕ್ರೀಡಾಕೂಟ : ಟ್ಯಾಂಡಿಂಗ್ ಬಂಗಾರ


ಕೊಪ್ಪಳ, 05 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಕೊಪ್ಪಳದ ಹನುಮಸಾಗರದಲ್ಲಿ ನಡೆದ ರಾಜ್ಯ ಮಟ್ಟದ ಖೇಲೋ ಇಂಡಿಯಾದ ಅಸ್ಮಿತಾ ಲೀಗ್ ಪೆಂಕಾಕ್ ಸಿಲತ್ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದ ಚೈತನ್ಯ ಸಮೂಹ ಸಂಸ್ಥೆಯ ಸ್ವಾಮಿ ವಿವೇಕಾನಂದ ಪಿಯು ಕಾಲೇಜಿನ ದ್ವಿತಿಯ ಪಿಯು ವಿಜ್ಞಾನ ವಿದ್ಯಾರ್ಥಿನಿ ಸಾಹಿತ್ಯ ಎಂ. ಗೊಂಡಬಾಳ ಮತ್ತು ಭಾಗ್ಯನಗರ ಪಯೋನಿಯರ್ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ ಅಕ್ಷರ ಎಂ. ಗೊಂಡಬಾಳ ಅವರು ಟ್ಯಾಂಡಿಂಗ್ (ಸಿಲತ್ ರಿಯಲ್ ಫೈಟ್) ವಿಭಾಗದಲ್ಲಿ ಸೀನಿಯರ್ ಕೆಟಗರಿ (63-67 ಕೆಜಿ) ಸಾಹಿತ್ಯ ಎಂ. ಗೊಂಡಬಾಳ ಬಂಗಾರದ ಪದಕ ಪಡೆದರೆ, ಟೀನ್ ಕೆಟಗರಿ (50-54 ಕೆಜಿ) ಅಕ್ಷರ ಎಂ. ಗೊಂಡಬಾಳ ಬಂಗಾರದ ಪದಕ ಪಡೆದು ರಾಜ್ಯಮಟ್ಟದಲ್ಲಿ ಮಿಂಚಿದ್ದು, ಸೌತ್ ಝೋನ್ ಗೆ ಆಯ್ಕೆ ಆಗಿದ್ದಾರೆ. ಪ್ರಿ-ಟೀನ್ ವಿಭಾಗದ (22-24 ಕೆಜಿ) ಟ್ಯಾಂಡಿಂಗ್ ವಿಭಾಗದಲ್ಲಿ ವೇದಿಕಾ ಮೌನೇಶ ವಡ್ಡಟ್ಟಿ ಬಂಗಾರದ ಪದಕ ಮುಡಿಗೇರಿಸಿಕೊಂಡಿದ್ದಾರೆ.

ಬಬಲಾದಿ ಮಠದ ಸಿದ್ದು ಮುತ್ಯಾ, ರಾಷ್ಟ್ರೀಯ ಪೆಂಕಾಕ್ ಸಿಲತ್ ಫೆಡರೇಷನ್ ತಾಂತ್ರಿಕ ನಿರ್ದೇಶಕ ಅಬ್ದುಲ್ ರಜಾಕ್ ಟೈಲರ್, ಕರ್ನಾಟಕ ರಾಜ್ಯ ಪೆಂಕಾಕ್ ಸಿಲತ್ ಸಂಸ್ಥೆಯ ಜಿಲ್ಲಾ ಅಧ್ಯಕ್ಷ ಮೌನೇಶ ವಡ್ಡಟ್ಟಿ, ಪ್ರಧಾನ ಕಾರ್ಯದರ್ಶಿ ಈರಣ್ಣ ಬದಾಮಿ, ಬಿ. ಎಫ್. ಇಬ್ರಾಹಿಂ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಜ್ಯೋತಿ ಎಂ. ಗೊಂಡಬಾಳ, ನಾಗರಾಜ ಗುಡ್ಲಾನೂರ, ರೇಣುಕಾ ಪುರದ ಇನ್ನಿತರರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande