ಕಲೆ ಅಗೋಚರ ಶಕ್ತಿಯ ಮೂಲ : ಶಾಂತಿಬಾಯಿ ಕೆ
ಬಳ್ಳಾರಿ, 05 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಕಲೆ ಎಲ್ಲರಲ್ಲೂ ಇರುವ ಅಗೋಚರ ಶಕ್ತಿಯಾಗಿದ್ದು, ಕಲೆಯ ಪ್ರದರ್ಶನಕ್ಕೆ ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರಾದ ಶಾಂತಿಬಾಯಿ.ಕೆ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವ
ಕಲೆ ಅಗೋಚರ ಶಕ್ತಿಯ ಮೂಲ : ಶಾಂತಿಬಾಯಿ ಕೆ


ಕಲೆ ಅಗೋಚರ ಶಕ್ತಿಯ ಮೂಲ : ಶಾಂತಿಬಾಯಿ ಕೆ


ಕಲೆ ಅಗೋಚರ ಶಕ್ತಿಯ ಮೂಲ : ಶಾಂತಿಬಾಯಿ ಕೆ


ಕಲೆ ಅಗೋಚರ ಶಕ್ತಿಯ ಮೂಲ : ಶಾಂತಿಬಾಯಿ ಕೆ


ಕಲೆ ಅಗೋಚರ ಶಕ್ತಿಯ ಮೂಲ : ಶಾಂತಿಬಾಯಿ ಕೆ


ಕಲೆ ಅಗೋಚರ ಶಕ್ತಿಯ ಮೂಲ : ಶಾಂತಿಬಾಯಿ ಕೆ


ಬಳ್ಳಾರಿ, 05 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಕಲೆ ಎಲ್ಲರಲ್ಲೂ ಇರುವ ಅಗೋಚರ ಶಕ್ತಿಯಾಗಿದ್ದು, ಕಲೆಯ ಪ್ರದರ್ಶನಕ್ಕೆ ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರಾದ ಶಾಂತಿಬಾಯಿ.ಕೆ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಪ್ರಾರಂಭವಾಗಿರುವ ಎರಡು ದಿನಗಳ ‘ಅಂತರ ಕಾಲೇಜು ಯುವಜನೋತ್ಸವ - 2025’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಂಡೂರು ಕುಶಲಕಲಾ ಕೇಂದ್ರದಲ್ಲಿ 32 ವರ್ಷಗಳ ಹಿಂದೆ ಸಾಮಾನ್ಯ ಕೆಲಸಗಾರರಾಗಿ ಸೇವೆ ಆರಂಭಿಸಿ ಅದೇ ಕೇಂದ್ರದ ಉನ್ನತ ಕಸೂತಿ ತರಬೇತುದಾರಳಾಗಿರುವ ನನ್ನ ಶ್ರಮ ಮತ್ತು ಶ್ರದ್ಧೆ ನನಗೆ ಪ್ರಶಸ್ತಿ - ಪುರಸ್ಕಾರಗಳನ್ನು ನೀಡಿದೆ. ಅನಕ್ಷರತೆ ಆಗಿರುವ ನಾನು, ಲಂಬಾಣಿ ಕನ್ನಡಿ ಮತ್ತು ಕಸೂತಿ ಕಲೆಯ ಮೂಲಕ ಹತ್ತಕ್ಕೂ ಅಧಿಕ ದೇಶಗಳಿಗೆ ಭೇಟಿ ನೀಡಿ, ಸಂಕಷ್ಟನ್ನು ಯಶಸ್ವಿಯಾಗಿ ಸಾಧಿಸಿದ್ದೇನೆ ಎಂದರು.

2023ರಲ್ಲಿ ಹಂಪಿಯಲ್ಲಿ ನಡೆದಿದ್ದ ಜಿ20 ಶೃಂಗಸಭೆಯಲ್ಲಿ ಸಂಡೂರು ಕುಶಲ ಕಲಾ ಕೇಂದ್ರದ ವತಿಯಿಂದ ಪ್ರದರ್ಶಿಸಿದ್ದ 1755 ಬಟ್ಟೆಗಳ ಕಸೂತಿ ಕಲೆಯು ಲಿಮ್ಕಾ ಬುಕ್ ಆಫ್ ರೆಕಾಡ್ರ್ಸ್‍ನಲ್ಲಿ ದಾಖಲಾಗಿರುವುದು ನೂರಾರು ಲಂಬಾಣಿ ಕಲಾವಿದರಿಗೆ ಆದರ್ಶವಾಗಿದೆ. ಲಂಬಾಣಿ ಕಲೆಯನ್ನು ಗುರುತಿಸಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶಿಸಲು ಅವಕಾಶ ನೀಡಿದ ಎಲ್ಲರೂ ಸದಾ ಸ್ಮರಣೀಯರು ಎಂದರು.

ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಎಂ. ಮುನಿರಾಜು ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಚಟುವಟಿಕೆಗಳ ಜೊತೆಗೆ ಪ್ರತಿಭೆ ಪ್ರದರ್ಶನಕ್ಕೆ ಯುವಜನೋತ್ಸವ ಪೂರಕವಾಗಿದೆ ಎಂದರು.

ವಿಶ್ವವಿದ್ಯಾಲಯದ ಪ್ರಭಾರ ಕುಲಸಚಿವರು ಹಾಗೂ ಮೌಲ್ಯಮಾಪನ ಕುಲಸಚಿವರಾದ ಪ್ರೊ. ಎನ್.ಎಂ. ಸಾಲಿ, ಡೀನ್‍ಗಳಾದ ಪ್ರೊ ರಾಬರ್ಟ್ ಜೋಸ್, ಪ್ರೊ. ಸದ್ಯೋಜಾತಪ್ಪ ಎಸ್, ಪ್ರೊ ಗೌರಿ ಮಾಣಿಕ್ ಮಾನಸ, ಪ್ರೊ ಸಾಹೇಬ್ ಅಲಿ ವೇದಿಕೆಯಲ್ಲಿದ್ದರು.

ಸಾಂಸ್ಕøತಿಕ ಸಂಯೋಜಕರಾದ ಪ್ರೊ. ಶಿರಗಾನಹಳ್ಳಿ ಶಾಂತನಾಯ್ಕ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತ ಕೋರಿದರು. ಡಾ. ಸುಷ್ಮಾ ಜೋಗನ್ ಕಾರ್ಯಕ್ರಮ ನಿರೂಪಿಸಿದರು. ಡಾ. ಕೆ.ಎಸ್. ಶಿವಪ್ರಸಾದ್ ಅವರು ವಂದಿಸಿದರು.

ಎರಡು ದಿನಗಳ ಉತ್ಸವದಲ್ಲಿ 20ಕ್ಕೂ ಹೆಚ್ಚು ಸಾಂಸ್ಕøತಿಕ ಕಾರ್ಯಕ್ರಮಗಳು ಪ್ರದರ್ಶನಗೊಳ್ಳಲಿವೆ. ವಿಶ್ವವಿದ್ಯಾಲಯದ ಅಧೀನದ 30ಕ್ಕೂ ಹೆಚ್ಚು ಕಾಲೇಜುಗಳ 500 ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಪಾಲ್ಗೊಳ್ಳಲಿದ್ದಾರೆ.

ಶನಿವಾರ ಸಂಜೆ ನಡೆಯಲಿರುವ ಸಮಾರೋಪದಲ್ಲಿ ಕಲ್ಟ್ ಕನ್ನಡ ಚಲನಚಿತ್ರದ ನಟ, ನಟಿಯರಾದ ಜೈದ್‍ಖಾನ್, ಮಲೈಕ ವಸುಪಾಲ್ ಭಾಗವಹಿಸಲಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande