



ಬಳ್ಳಾರಿ, 5 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಬ್ರಿಟೀಷ್ ಅವಧಿಯಲ್ಲಿ ನಿರ್ಮಾಣ ಆಗಿರುವ ಬಳ್ಳಾರಿಯ ರೈಲ್ವೆ ನಿಲ್ದಾಣ ನಿರ್ಮಾಣ ಆಗಿ ಇಂದಿಗೆ 150 ವರ್ಷಗಳಾದ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯ ರೈಲ್ವೆ ಕ್ರಿಯಾ ಸಮಿತಿಯ ನೇತೃತ್ವದಲ್ಲಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಸಮ್ಮುಖದಲ್ಲಿ ಶುಕ್ರವಾರ ಸಂಭ್ರಮಾಚರಣೆ ಆಚರಿಸಲಾಯಿತು.
ಕರ್ನಾಟಕ ರಾಜ್ಯ ರೈಲ್ವೆ ಕ್ರಿಯಾ ಸಮಿತಿಯ ಅಧ್ಯಕ್ಷ ಕೆ.ಎಂ. ಮಹೇಶ್ವರಸ್ವಾಮಿ ಅವರು, ಬಳ್ಳಾರಿಯ ರೈಲ್ವೆ ನಿಲ್ದಾಣಕ್ಕೆ ಐತಿಹಾಸಿಕ ಮಹತ್ವವಿದೆ. ದೇಶದ ಸ್ವಾತಂತ್ರ್ಯ ಹೋರಾಟದ ಸ್ಪರ್ಶವಿದೆ. ಮಹಾತ್ಮಾಗಾಂಧಿ ಅವರು ಬಳ್ಳಾರಿಯ ರೈಲ್ವೆ ನಿಲ್ದಾಣದಲ್ಲಿ ಒಂದು ರಾತ್ರಿ ನಿದ್ರಿಸಿದ ರಾಜಕೀಯ ಮಹತ್ವವನ್ನು ಪಡೆದಿದೆ. ಬಳ್ಳಾರಿ ರೈಲ್ವೆ ನಿಲ್ದಾಣಕ್ಕೆ ಪಾರಂಪರಿಕ ಮಹತ್ವವಿದೆ ಎಂದು ಹೇಳಿದರು.
ಭಾರತದ ಚೆನ್ನೈ, ಹೌರ, ಮುಂಬೈ ವಿಟಿ ಸ್ಟೇಷನ್ ರೀತಿಯಲ್ಲಿ ರೈಲುಗಳು ನಿಲ್ದಾಣದ ಕಟ್ಟಡದ ಒಳಗಡೆ ಸಂಚರಿಸುತ್ತವೆ. ದೇಶದಲ್ಲಿ ಈ ರೀತಿಯ ನಾಲ್ಕು ರೈಲ್ವೆ ನಿಲ್ದಾಣಗಳು ಮಾತ್ರ ಇವೆ. ಈ ಕಾರಣಕ್ಕಾಗಿಯೂ ಬಳ್ಳಾರಿ ರೈಲ್ವೆ ನಿಲ್ದಾಣವು ಸಾಕಷ್ಟು ಮಹತ್ವವನ್ನು ಪಡೆದಿದೆ ಎಂದು ಹೇಳಿದರು.
ಡಿಆರ್‍ಯುಸಿಸಿ ಸದಸ್ಯರಾಗಿರುವ, ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಸೊಂತಾ ಗಿರಿಧರ ಅವರು, ಬಳ್ಳಾರಿ ರೈಲ್ವೆ ನಿಲ್ದಾಣವು ಕೇವಲ ಪ್ರಯಾಣಿಕರ ರೈಲ್ವೆ ನಿಲ್ದಾಣವಲ್ಲ. ಭಾರತ ದೇಶದ ಸ್ವಾತಂತ್ರ ಹೋರಾಟದಲ್ಲಿ ಮತ್ತು ಹೋರಾಟವನ್ನು ಸಂಘಟಿಸುವಲ್ಲಿ ವಿಶೇಷ ಸೇವೆ ಸಲ್ಲಿಸಿದೆ. ಕಟ್ಟಡವು ಐತಿಹಾಸಿಕ ಪರಂಪರೆಯ ಮಹತ್ವವನ್ನು ಪಡೆದಿದೆ ಎಂದರು.
ಕರ್ನಾಟಕ ರಾಜ್ಯ ರೈಲ್ವೆ ಕ್ರಿಯಾ ಸಮಿತಿಯ ಪದಾಧಿಕಾರಿಗಳಾದ ಪಿ. ಬಂಡೇಗೌಡ, ವಿ.ಎಸ್. ಮರಿದೇವಯ್ಯ, ಕೋಳೂರು ಚಂದ್ರಶೇಖರ್ ಗೌಡ, ಮಧುಸೂಧನ ಗೌಡ, ಡಿಆರ್‍ಯುಸಿ ಸದಸ್ಯರಾದ ಗೋಪಾಲ್ ಕೃಷ್ಣ, ಕೆ.ಎಂ. ಕೊಟ್ರೇಶ್, ಬಳ್ಳಾರಿ ರೈಲ್ವೆ ನಿಲ್ದಾಣದ ಕಮರ್ಷಿಯಲ್ ಅಧಿಕಾರಿ ಹೊನ್ನೂರ್ ಸ್ವಾಮಿ, ರೈಲ್ವೆ ಪೆÇಲೀಸ್ ಅಧಿಕಾರಿ ಸಿದ್ದಲಿಂಗಪ್ಪ ಸೇರಿ ಅನೇಕರು ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.
ಬಳ್ಳಾರಿ ರೈಲ್ವೆ ನಿಲ್ದಾಣದ ಕಮರ್ಷಿಯಲ್ ಅಧಿಕಾರಿ ಹೊನ್ನೂರ್ ಸ್ವಾಮಿ ಅವರು, ಶ್ರೀ ಗುರು ತಿಪ್ಪೇರುದ್ರ ಶಾಲೆಯ ವಿದ್ಯಾರ್ಥಿಗಳು ಈ ಸಮಾರಂಭದಲ್ಲಿ ಪಾಲ್ಗೊಂಡು, ಬಳ್ಳಾರಿ ರೈಲ್ವೆ ನಿಲ್ದಾಣದಲ್ಲಿ ಮಹಾತ್ಮಾ ಗಾಂಧೀಜಿ ಅವರು ತಂಗಿದ್ದ ಸ್ಥಳ, ಐತಿಹಾಸಿಕವಾಗಿ ಮತ್ತು ಪಾರಂಪರಿಕವಾಗಿ ಕಟ್ಟಡ ಪಡೆದಿರುವ ಮಹತ್ವದ ಕುರಿತು ಮಾಹಿತಿ ನೀಡಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್