ಸಿರಿಧಾನ್ಯ, ಮರೆತು ಹೋದ ಖಾದ್ಯಗಳನ್ನು ನಿತ್ಯದ ಆಹಾರದಲ್ಲಿ ಬಳಸಿ
ಬಳ್ಳಾರಿ, 31 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಸಾರ್ವಜನಿಕರು ಸಿರಿಧಾನ್ಯ ಮತ್ತು ಮರೆತು ಹೋದ ಖಾದ್ಯಗಳನ್ನು ನಿತ್ಯದ ಆಹಾರದಲ್ಲಿ ಆಳವಡಿಸಿಕೊಳ್ಳಲು ಸ್ಪರ್ಧೆ ಸಹಕಾರಿ ಆಗಲಿದೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಹೇಳಿದರು. ನಗರದ ಸಮಗ್ರ ಕೃಷಿ ಪದ್ದತಿಯ ಉತ್ಕೃಷ್ಟ ಕೇಂದ್ರದ ಸಭಾ
ಸಿರಿಧಾನ್ಯ, ಮರೆತು ಹೋದ ಖಾದ್ಯಗಳನ್ನು ನಿತ್ಯದ ಆಹಾರದಲ್ಲಿ ಬಳಸಿ


ಸಿರಿಧಾನ್ಯ, ಮರೆತು ಹೋದ ಖಾದ್ಯಗಳನ್ನು ನಿತ್ಯದ ಆಹಾರದಲ್ಲಿ ಬಳಸಿ


ಸಿರಿಧಾನ್ಯ, ಮರೆತು ಹೋದ ಖಾದ್ಯಗಳನ್ನು ನಿತ್ಯದ ಆಹಾರದಲ್ಲಿ ಬಳಸಿ


ಸಿರಿಧಾನ್ಯ, ಮರೆತು ಹೋದ ಖಾದ್ಯಗಳನ್ನು ನಿತ್ಯದ ಆಹಾರದಲ್ಲಿ ಬಳಸಿ


ಸಿರಿಧಾನ್ಯ, ಮರೆತು ಹೋದ ಖಾದ್ಯಗಳನ್ನು ನಿತ್ಯದ ಆಹಾರದಲ್ಲಿ ಬಳಸಿ


ಸಿರಿಧಾನ್ಯ, ಮರೆತು ಹೋದ ಖಾದ್ಯಗಳನ್ನು ನಿತ್ಯದ ಆಹಾರದಲ್ಲಿ ಬಳಸಿ


ಬಳ್ಳಾರಿ, 31 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಸಾರ್ವಜನಿಕರು ಸಿರಿಧಾನ್ಯ ಮತ್ತು ಮರೆತು ಹೋದ ಖಾದ್ಯಗಳನ್ನು ನಿತ್ಯದ ಆಹಾರದಲ್ಲಿ ಆಳವಡಿಸಿಕೊಳ್ಳಲು ಸ್ಪರ್ಧೆ ಸಹಕಾರಿ ಆಗಲಿದೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಹೇಳಿದರು.

ನಗರದ ಸಮಗ್ರ ಕೃಷಿ ಪದ್ದತಿಯ ಉತ್ಕೃಷ್ಟ ಕೇಂದ್ರದ ಸಭಾಂಗಣದಲ್ಲಿ ಕೃಷಿ ಇಲಾಖೆ ಮತ್ತು ಕೃಷಿ ತಂತ್ರಜ್ಞರ ಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಸಿರಿಧಾನ್ಯ ಹಾಗೂ ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಸಿರಿಧಾನ್ಯ ಮತ್ತು ಮರೆತು ಹೋದ ಖಾದ್ಯಗಳನ್ನು ದಿನನಿತ್ಯದ ಆಹಾರ ಪದ್ದತಿಯಲ್ಲಿ ಹೆಚ್ಚಾಗಿ ಬಳಕೆ ಮಾಡುವುದರಿಂದ ಉತ್ತಮ ಆರೋಗ್ಯವನ್ನು ಪಡೆಯಬಹುದು. ಇವುಗಳಲ್ಲಿ ಶಕ್ತಿಶಾಲಿ ಆಯಂಟಿ ಆಕ್ಸಿಡೆಂಟ್‌ಗಳು ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಾಗಿರುವ ಹಿನ್ನಲೆಯಲ್ಲಿ ರೋಗಗಳನ್ನು ದೂರವಿಡಲು ಮತ್ತು ದೀರ್ಘಕಾಲದ ಕಾಯಿಲೆಗಳಿಂದ ರಕ್ಷಿಸಲು ಸಹಾಯಕವಾಗುತ್ತವೆ. ಸಕ್ಕರೆ ಕಾಯಿಲೆ, ಬಿಪಿ ಮತ್ತು ವಿವಿಧ ಕಾಯಿಲೆಗಳ ತಡೆಗಟ್ಟಲು ಸಹಕಾರಿ ಆಗಲಿದೆ. ಸಿರಿಧಾನ್ಯ ಮತ್ತು ಖಾದ್ಯಗಳ ವಿಭಿನ್ನವಾದ ಆಹಾರಗಳನ್ನು ಶುಚಿ-ರುಚಿಯಾಗಿ ಪ್ರತಿಯೊಬ್ಬರು ತಯಾರಿಸಿದ್ದಾರೆ. ಪ್ರತಿ ಟೇಬಲ್‌ಗೆ ಹೋಗಿ ಪ್ರತಿಯೊಬ್ಬರ ರುಚಿಯನ್ನು ಅನುಭವಿಸಲು ನನಗೆ ಸಿಕ್ಕಿದ ಭಾಗ್ಯ ಎಂದು ಹೇಳಿದರು.

ಸ್ಪರ್ಧೆಯಲ್ಲಿ ಭಾಗವಹಿಸಿದ ಪ್ರತಿಯೊಬ್ಬರ ಆಹಾರವನ್ನು ಪುಸ್ತಕದಲ್ಲಿ ಪೋಟೋ ಆಳವಡಿಸಿ ಆಹಾರವನ್ನು ವಿಧಾನ ಮತ್ತು ತಯಾರಿಸಲು ಬೇಕಾದ ಸಾಮಗ್ರಿಗಳನ್ನು ವಿವರಣೆಯಾಗಿ ಬರೆದು ಪುಸ್ತಕವನ್ನು ಬಿಡುಗಡೆ ಮಾಡಿದರೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎಂದು ಜಂಟಿ ಕೃಷಿ ನಿರ್ದೇಶಕರಿಗೆ ಸಲಹೆ ನೀಡಿದರು.

ಸ್ಪರ್ಧೆಯಲ್ಲಿ ಆಹಾರ ತಯಾರಿಸಿದ ವಿಡಿಯೋಗಳನ್ನು ಮಾಡಿ ಯುಟ್ಯೂಬ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿ ಕೊಂಡರೆ ಸಾರ್ವಜನಿಕರಿಗೆ ಅನುಕೂಲ ಮತ್ತು ನಿಮ್ಮ ಪ್ರತಿಭೆಯನ್ನು ಹೊರ ಹಾಕಲು ನಿಮಗೆ ಒಂದು ಅವಕಾಶ ಸಿಕ್ಕಿದೆ ಎಂದು ಸ್ಪರ್ಧಾರ್ಥಿಗಳಿಗೆ ತಿಳಿಸಿದರು.

ಜಂಟಿ ಕೃಷಿ ನಿರ್ದೇಶಕ ಡಿ.ಟಿ.ಮಂಜುನಾಥ ಮಾತನಾಡಿ, ಜಿಲ್ಲೆಯಲ್ಲಿ ಸುಮಾರು 2 ಲಕ್ಷ 45 ಸಾವಿರ ಎಕರೆಯಲ್ಲಿ ಸಿರಿಧಾನ್ಯ ಲಭ್ಯವಿದೆ.

ಅದರಲ್ಲಿ 2 ಲಕ್ಷ 21 ಸಾವಿರ ಎಕರೆಯಲ್ಲಿ ಮುಸುಕಿನ ಜೋಳ. ನವಣೆ, ಸಜ್ಜೆ ಮತ್ತು ರಾಗಿ ಎಲ್ಲಾ ಅವಧಿಯಲ್ಲಿ ಬೆಳೆಯಲಾಗಿದೆ. ಹಾಗಾಗೀ ಈ ಸ್ಪರ್ಧೆ ಆಯೋಜಿಸಲಾಗಿದೆ. ಜಿಲ್ಲೆಯ ಹೊಸಪೇಟೆ 15, ಕೂಡ್ಲಿಗಿ 06, ಹಡಗಲಿ 09, ಹಗರಿಬೊಮ್ಮನಹಳ್ಳಿ 04 ಮತ್ತು ಹರಪನಹಳ್ಳಿ 04 ಎಲ್ಲಾ ತಾಲೂಕುಗಳಲ್ಲಿ ಒಟ್ಟು 38 ಅಭ್ಯರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಮರೆತು ಹೋದ ಖಾದ್ಯ ಸ್ಪರ್ಧೆಯಲ್ಲಿ ಅಗಸೆ ಉಂಡೆ ತಯಾರಿಸಿದ ಸೌಮ್ಯ ಪ್ರಥಮ ಸ್ಥಾನ, ಮೆಂತೆ ಕಡುಬು ತಯಾರಿಸಿದ ಬಸಮ್ಮ ದ್ವಿತೀಯ ಸ್ಥಾನ ಮತ್ತು ಜೋಳದ ಮುಟಗಿ ತಯಾರಿ ಸಿ. ದ ರಾಜೇಶ್ವರಿ ತೃತೀಯ ಸ್ಥಾನ ನೀಡಲಾಗಿದೆ. ಸಿರಿಧಾನ್ಯ ಸಿಹಿ ಸ್ಪರ್ಧೆಯಲ್ಲಿ ರಾಗಿ ಉಂಡೆ ತಯಾರಿಸಿದ ನಿರ್ಮಾಲ ಪ್ರಥಮ ಸ್ಥಾನ, ಸಜ್ಜೆ ಮಾದ್ಲಿ ತಯಾರಿಸಿದ ಓಬಮ್ಮ ದ್ವಿತೀಯ ಸ್ಥಾನ ಮತ್ತು ಮಿಲ್ಲೆಟ್ಸ್ ಚಾಕಲೇಟ್ ತಯಾರಿಸಿದ ರೂಪ ತೃತೀಯ ಸ್ಥಾನಗಳನ್ನು ನೀಡಲಾಗಿದೆ.

ಸಿರಿಧಾನ್ಯ ಖಾರ ಸ್ಪರ್ಧೆಯಲ್ಲಿ ಮೊಮೊಸ್ ಚಟ್ನಿ ತಯಾರಿಸಿದ ಸೌಭಾಗ್ಯ ಪ್ರಥಮ ಸ್ಥಾನ, ನವಣೆ ಬಿಸಿಬೆಳೆ ಬಾತ್ ತಯಾರಿಸಿದ ಜ್ಯೋತೇಶ್ವರಿ ದ್ವಿತೀಯ ಸ್ಥಾನ ಮತ್ತು ನವಣೆ ಮೊಸರನ್ನ ತಯಾರಿಸಿದ ಸೌಭಾಗ್ಯ ತೃತೀಯ ಸ್ಥಾನ ನೀಡಲಾಗಿದೆ. ಇವರು ರಾಜ್ಯ ಮಟ್ಟದಲ್ಲಿ ಭಾಗವಹಿಸಲಿದ್ದಾರೆ. ಸಿರಿಧಾನ್ಯಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಿರುವುದು ಸಾರ್ವಜನಿಕರಿಗೆ ಅದರ ಅನುಕೂಲಗಳು ತಿಳಿಸುವುದಕ್ಕೆ ಕಾರ್ಯಕ್ರಮ ಆಯೋಜಿಸಲಾಗಿದೆ. ನವಣೆ ಅಕ್ಕಿಯಿಂದ ಸಕ್ಕರೆ ಕಾಯಿಲೆ ಶೇ.90 ರಷ್ಟು ಕಡಿಮೆಯಾಗುತ್ತದೆ ಮತ್ತು ರೋಗ ನಿರೋಧಕ ಶಕ್ತಿಯನ್ನು ತಡೆಗಟ್ಟುತ್ತವೆ. ಹಿಂದಿನ ಕಾಲದ ಜನರು ಸಿರಿಧಾನ್ಯ ಮತ್ತು ಮರೆತುಹೋದ ಖಾದ್ಯಗಳನ್ನು ದಿನನಿತ್ಯ ಆಹಾರದಲ್ಲಿ ಬಳಸಿ ಗಟ್ಟಿಮುಟ್ಟಾದ ಜೀವನವನ್ನು ನಡೆಸುತ್ತಿದ್ದರು ಎಂದರು.

ಇದಕ್ಕೂ ಮುನ್ನ ಕೃಷಿ ಇಲಾಖೆ ಕಚೇರಿ ಆವರಣದಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಅವರು ಸಸಿ ನೆಡಲಾಯಿತು.

ಈ ವೇಳೆ ಕೃಷಿ ಇಲಾಖೆ ಉಪ ನಿರ್ದೇಶಕ ನಯೀಮ್ ಪಾಷಾ, ಎಇಇಯು ಸುನೀತಾ, ಎಡಿಎ ನಾಜ್‌ನೀನ್ ನದಾಫ್, ಎಡಿಎ ವಿದ್ಯಾವತಿ ಸೇರಿದಂತೆ ಅಭ್ಯರ್ಥಿಗಳು ಮತ್ತು ಕೃಷಿ ಇಲಾಖೆ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande