
ಹೊಸಪೇಟೆ, 31 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ವಿಶ್ವವಿಖ್ಯಾತ 2026ರ ಹಂಪಿ ಉತ್ಸವದ ನೂತನ ಲೋಗೋ ರಚಿಸುವ ಕಲಾವಿದರಿಗೆ ಜಿಲ್ಲಾಡಳಿತದಿಂದ ಸೂಕ್ತ ಬಹುಮಾನ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ತಿಳಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಮುಖ್ಯಮಂತ್ರಿ ಗಳಿಂದ ಸಮ್ಮತಿ ಪಡೆದು 2026 ಫೆ.13, 14 ಮತ್ತು 15 ರಂದು ಅದ್ದೂರಿಯಾಗಿ ಜರುಗಲಿರುವ 2025-26 ನೇ ಸಾಲಿನ ಹಂಪಿ ಉತ್ಸವ ಕಾರ್ಯಕ್ರಮವನ್ನು ಆಚರಣೆ ಮಾಡಲು ಪೂರ್ವಸಿದ್ದತೆಗಳನ್ನು ಕೈಗೊಳ್ಳಲು ಸೂಚಿಸಿರುವ ಹಿನ್ನಲೆಯಲ್ಲಿ ಈ ಬಾರಿ ಉತ್ಸವದ ನೂತನ ಲೋಗೋ ರಚಿಸಬೇಕಿದೆ.
ಆಸಕ್ತ ಕಲಾವಿದರು ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಿಜಯನಗರ ಜಿಲ್ಲಾ ಕಚೇರಿಗೆ ಜನವರಿ 08 ರೊಳಗೆ ಪ್ರಸ್ತಾವನೆಗಳನ್ನು ಸಲ್ಲಿಸಬೇಕೆಂದು ಹಾಗೂ ಅವಧಿ ಮೀರಿ ಬಂದು ಪ್ರಸ್ತಾವನೆಗಳನ್ನು ಪರಿಗಣಿಸುವುದಿಲ್ಲ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್