ಬಳ್ಳಾರಿ ಮಹಾನಗರ ಪಾಲಿಕೆ : ಸ್ವಸಹಾಯ ಸಂಘಗಳಿ0ದ ಅರ್ಜಿ ಆಹ್ವಾನ
ಬಳ್ಳಾರಿ, 31 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೇಂದ್ರ ಪುರಸ್ಕೃತ ಯೋಜನೆಯಾದ ಅಮೃತ್ 2.0 ಅಭಿಯಾನದ ಅಮೃತ್ ಮಿತ್ರ ಕಾರ್ಯಕ್ರಮ ತಾಂತ್ರಿಕೇತರ ಚಟುವಟಿಕೆಯಡಿ ಪಾಲಿಕೆ ವ್ಯಾಪ್ತಿಯಲ್ಲಿ ಅನುಮೋದಿತ 19 ಪಾರ್ಕ್ಗಳನ್ನು ನಿರ್ವಹಣೆ ಮಾಡಲು ಡೇ-ನಲ್ಮ್ ಅ
ಬಳ್ಳಾರಿ ಮಹಾನಗರ ಪಾಲಿಕೆ : ಸ್ವಸಹಾಯ ಸಂಘಗಳಿ0ದ ಅರ್ಜಿ ಆಹ್ವಾನ


ಬಳ್ಳಾರಿ, 31 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೇಂದ್ರ ಪುರಸ್ಕೃತ ಯೋಜನೆಯಾದ ಅಮೃತ್ 2.0 ಅಭಿಯಾನದ ಅಮೃತ್ ಮಿತ್ರ ಕಾರ್ಯಕ್ರಮ ತಾಂತ್ರಿಕೇತರ ಚಟುವಟಿಕೆಯಡಿ ಪಾಲಿಕೆ ವ್ಯಾಪ್ತಿಯಲ್ಲಿ ಅನುಮೋದಿತ 19 ಪಾರ್ಕ್ಗಳನ್ನು ನಿರ್ವಹಣೆ ಮಾಡಲು ಡೇ-ನಲ್ಮ್ ಅಭಿಯಾನದಡಿ ಅರ್ಹ ಮಹಿಳಾ ಸ್ವಸಹಾಯ ಸಂಘಗಳಿ0ದ ಆಸಕ್ತಿ ವ್ಯಕ್ತಪಡಿಸುವಿಕೆಗೆ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ಅರ್ಹ ಸ್ವಸಹಾಯ ಸಂಘದ ಸದಸ್ಯರು ಮಹಾನಗರ ಪಾಲಿಕೆಯ ವಲಯ ಕಚೇರಿ-2 ರಲ್ಲಿನ ಡೇ-ನಲ್ಮ್ ಶಾಖೆಯಿಂದ ನಿಗಧಿತ ನಮೂನೆಯ ಅರ್ಜಿ ಪಡೆದು ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಜನವರಿ 14 ಸಂಜೆ 05.30 ರೊಳಗಾಗಿ ಮುಚ್ಚಿದ ಲಕೋಟೆಯಲ್ಲಿ ಮರಳಿ ಇದೇ ಶಾಖೆಗೆ ಸಲ್ಲಿಸಬೇಕು. ಮಹಿಳಾ ಸ್ವಸಹಾಯ ಸಂಘಗಳು ಆಸಕ್ತಿಯುಳ್ಳ ಪಾರ್ಕ್ಗಳವಾರು ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಬಹುದು.

ಪಾಲಿಕೆ ವ್ಯಾಪ್ತಿಯ 19 ಪಾರ್ಕ್ಗಳ ವಿವರಗಳನ್ನು ವಲಯ ಕಚೇರಿ-02 ರಲ್ಲಿರುವ ಡೇ-ನಲ್ಮ್ ಶಾಖೆಯಿಂದ ಖುದ್ದಾಗಿ ಅಥವಾ ಪಾಲಿಕೆಯ ವೆಬ್‌ಸೈಟ್ www.ballaricity.mrc.gov.in ನಲ್ಲಿ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಬಳ್ಳಾರಿ ಮಹಾನಗರ ಪಾಲಿಕೆ ಕಚೇರಿಗೆ ಸಂಪರ್ಕಿಸಬಹುದು ಎಂದು ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande