
ಕೊಪ್ಪಳ, 30 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಕೊಪ್ಪಳದ ಶ್ರೀಗವಿಮಠದ ಜಾತ್ರಾ ಮಹೋತ್ಸವದ ನಿಮಿತ್ಯ ಜಾತ್ರಾ ಆವರಣದಲ್ಲಿ ಪ್ರತಿ ವರ್ಷ ಕೃಷಿ ಇಲಾಖೆ ಮತ್ತು ಕೃಷಿ ವಿಶ್ವವಿದ್ಯಾಲಯ ವತಿಯಿಂದ ಕೃಷಿ ಮೇಳವನ್ನು ಆಯೋಜಿಸಲಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಬಹಳಷ್ಟು ರೈತರ ಮನಸ್ಸನ್ನು ಸೆಳೆಯುತ್ತಿದೆ. ಅದೇ ರೀತಿ ಈ ಸಲವು ಜಾತ್ರಾ ಮಹೋತ್ಸವದ ಆವರಣದಲ್ಲಿ ದಿನಾಂಕ 05-01-2026 ರಿಂದ 09-01-2026 ರವರೆಗೆ ಕೃಷಿ ಮೇಳವನ್ನು ಹಮ್ಮಿಕೊಳ್ಳಲಾಗಿದೆ.
ಜಲಾನಯನದ ಮಾದರಿ : ಇದರಲ್ಲಿ ಮಣ್ಣು ಮತ್ತು ನೀರಿನ ಸಂರಕ್ಷಣೆ ವಿಧಾನಗಳು, ಸಾಂಪ್ರದಾಯಿಕ ನೀರಿನ ಸಂರಕ್ಷಣೆ ವಿಧಾನಗಳು, ಉಪಚರಿಸಿದ ಜಲಾನಯನ ಪ್ರದೇಶದ ಮಾದರಿ ಹಾಗು ಉಪಚರಿಸದ ಜಲಾನಯನ ಪ್ರದೇಶದ ಮಾದರಿ.
ಸಿರಿಧಾನ್ಯಗಳ ವಸ್ತು ಪ್ರದರ್ಶನ : ಇದರಲ್ಲಿ ಸಾಂಪ್ರದಾಯಿಕ ಸಿರಿ ಧಾನ್ಯಗಳ ಬಗ್ಗೆ ಮಾಹಿತಿ ಹಾಗು ಪರಿಚಯ, ಸಿರಿಧಾನ್ಯಗಳ ನುಡಿಗಟ್ಟುಗಳು, ಸಿರಿಧಾನ್ಯಗಳಲ್ಲಿ ಇರುವ ಪೋಷಕಾಂಶಗಳ ಮಾಹಿತಿ, ಸಿರಿಧಾನ್ಯಗಳ ಮೌಲ್ಯ ವರ್ಧನೆ ಬಗ್ಗೆ ಪ್ರದರ್ಶನ, ಸಿರಿ ಧಾನ್ಯಗಳ ಬೇಸಾಯ ಪದ್ದತಿಗಳು, ಸಿರಿ ಧಾನ್ಯಗಳ ಹಸ್ತ ಪ್ರತಿಗಳು.
ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಪದ್ದತಿಗಳು: ಇದರಲ್ಲಿ ಶೂನ್ಯ ಬಂಡವಾಳ ನಥಸರ್ಗಿಕ ಕೃಷಿ ಮಾದರಿ ತಾಕು,ಜೀವಾಮೃತ ಘಟಕ, ಎರೆಹುಳ ಗೊಬ್ಬರ ಘಟಕ, ಬೀಜಾಮೃತ ಘಟಕ, ಸಾವಯವ ಕೃಷಿ ಪದ್ದತಿಗಳು, ಹಸರೆಲೆ ಗೊಬ್ಬರಗಳ ಪರಿಚಯ ಹಾಗು ಬಳಕೆ,ಸಾವಯವ ಕೃಷಿ ಹಾಗು ನೈಸರ್ಗಿಕ ಕೃಷಿ ನುಡಿಗಟ್ಟುಗಳು.
ಪ್ರಧಾನ ಮಂತ್ರಿ ಧನ-ಧಾನ್ಯ ಕೃಷಿ ಯೋಜನೆ, ಕೃಷಿ ಭಾಗ್ಯ ಯೋಜನೆ, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ ಯೋಜನೆ., ಕೃಷಿ ಉಪಕರಣಗಳ ವಸ್ತು ಪ್ರದರ್ಶನ, ವಿವಿಧ ತಳಿಗಳ,ದೇಸಿ ತಳಿಗಳ ಬಗ್ಗೆ ಮಾಹಿತಿ, ಜಲಾಮೃತ ಯೋಜನೆ ಅಥವಾ ಎಂ.ಜಿ.ಆರ್.ಜಿ.ಎ., ಕೃಷಿ ಇಲಾಖೆ ಯೋಜನೆಗಳ ಬಗ್ಗೆ ಮಾಹಿತಿ ಸಮಗ್ರ ಕೃಷಿ ಪದ್ದತಿ ಬಗ್ಗೆ ಮಾದರಿ., ರೈತ ಕುಟುಂಬದ ಬಗ್ಗೆ ಮಾದರಿ ಹಾಗು ಚಿತ್ರಣ, ಬೆಳೆ ವಿಮೆ ಯೋಜನೆ, ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ. (ಎಂ.ಜಿ.ಎನ್.ಆರ್.ಇ.ಜಿ.ಎಸ್) ಇವೆಲ್ಲಾ ವಿಷಯಗಳ ಕುರಿತು ಸಮಗ್ರ ವಿಷಯಗಳನ್ನು ತಿಳಿಸಿಕೊಡಲಾಗುವದು.
ಹೆಚ್ಚಿನ ಮಾಹಿತಿಗಾಗಿ- ಜಿ. ಡಿ ಕೃಷ್ಣಮೂರ್ತಿ, ಜಂಟಿ ನಿರ್ದೇಶಕರು ಕೃಷಿ ಇಲಾಖೆ-8277932100 - ಎಲ್. ಸಿದ್ಧೇಶ, ಉಪ ಕೃಷಿ ನಿರ್ದೇಶಕರು -8277932101
ಶ್ರೀಗವಿಮಠದ ಜಾತ್ರಾ ಮಹೋತ್ಸವದಲ್ಲಿ ಫಲಪುಷ್ಪ ಪ್ರದರ್ಶನ.
ಕೊಪ್ಪಳ ಜಿಲ್ಲೆಯ ತೋಟಗಾರಿಕೆ ಇಲಾಖೆ ವತಿಯಿಂದ ದಿನಾಂಕ: 05-01-2026 ರಿಂದ 14-01-2026 ರ ವರಗೆ 10 ದಿನಗಳ ಕಾಲ ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ಜಿಲ್ಲಾ ಮಟ್ಟದ ಫಲ ಪುಷ್ಪ ಪ್ರದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಸದರಿ ಫಲ ಪುಷ್ಪ ಪ್ರದರ್ಶನದಲ್ಲಿ ಈ ಕೆಳಕಾಣಿಸಿದ ಆಕರ್ಷಣೆಗಳಿರುತ್ತವೆ. ಈ ಭಾರಿ ವಿಶೇಷವಾಗಿ ದಿ. ಸಾಲುಮರದ ತಿಮ್ಮಕ್ಕನವರು ಸಲ್ಲಿಸಿದ ಸೇವೆಯ ಗೌರವಾರ್ಥವಾಗಿ ಸ್ಮರಿಸುವ ಪ್ರದರ್ಶನಗಳು ಫಲಪುಷ್ಪ ಪ್ರದರ್ಶನದಲ್ಲಿ ಹಮ್ಮಿಕೊಳ್ಳಲಾಗಿದೆ.
ವಿವಿಧ ಬಗೆಯ ಹೂಗಳಿಂದ ಅಲಂಕೃತವಾದ ಸೈಕಲ್, ಛತ್ರಿ, ವಾಟರ್ ಫಾಲ್‍ಗಳ ಸ್ಥಬ್ದ ಚಿತ್ರ ಪ್ರದರ್ಶನ. ವಿವಿಧ ಬಗೆಯ ಹೂದಾನಿಗಳು, ಅಲಂಕಾರಿಕ ಸಸಿಗಳ ಪ್ರದರ್ಶನ, ಹಣ್ಣಿನ ಮತ್ತು ತರಕಾರಿ ಕೆತ್ತನೆ ಪ್ರದರ್ಶನ, ರಂಗೋಲಿ ಪ್ರದರ್ಶನ, ಅಣಬೆ ಬೇಸಾಯ, ಜೇನು ಕೃಷಿ, ಮನೆ ತೋಟ, ತಾರಸಿ ತೋಟ ಪ್ರಾತ್ಯಕ್ಷಿಕೆಗಳ ಪ್ರದರ್ಶನ, ತೋಟಗಾರಿಕೆಯಲ್ಲಿ ನವೀನ ತಂತ್ರಜ್ಞಾನಗಳ ಪ್ರಾತ್ಯಕ್ಷಿಕೆಗಳ ಪ್ರದರ್ಶನ ಮತ್ತು ರೈತರಿಗೆ ಮಾಹಿತಿ, ತೋಟಗಾರಿಕೆ ಇಲಾಖೆಯಿಂದ ರೈತರಿಗೆ ಲಭ್ಯವಿರುವ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಲು ಮಾಹಿತಿ ಕೇಂದ್ರ ಸ್ಥಾಪನೆ, ಕೊಪ್ಪಳ ಜಿಲ್ಲೆಯ ರೈತರು ಬೆಳೆದ ಉತ್ತಮ ಗುಣಮಟ್ಟದ ಹಣ್ಣು ತರಕಾರಿಗಳು ಹಾಗೂ ತೋಟಗಾರಿಕೆ ಉತ್ಪನ್ನಗಳ ಪ್ರದರ್ಶನ, ಇವೆಲ್ಲಾ ವಿಷಯಗಳ ಕುರಿತು ಸಮಗ್ರ ವಿಷಯಗಳನ್ನು ತಿಳಿಸಿಕೊಡಲಾಗುವದು.
ಸಂಪರ್ಕಿಸಬೇಕಾದ ವ್ಯಕ್ತಿಗಳು: ತೋಟಗಾರಿಕೆ ಜಂಟಿ ನಿರ್ದೇಶಕರು ಮೊ.9448999237
ಜಿಲ್ಲಾ ಪಂಚಾಯತ್ ಕೊಪ್ಪಳ
ಸಹಾಯಕ ತೋಟಗಾರಿಕೆ ನಿರ್ದೇಶಕರು ಮೊ. 8660412770
ರಾಜ್ಯ ವಲಯ ಕೊಪ್ಪಳ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್