

ಕೊಪ್ಪಳ, 30 ಡಿಸೆಂಬರ್ (ಹಿ.ಸ.) :
ಆ್ಯಂಕರ್ : 60ನೇ ದಿನ ಪೂರ್ಣಗೊಳಿಸಿದ ಬಲ್ಡೋಟ (ಬಿಎಸ್ಪಿಎಲ್), ಕಿರ್ಲೋಸ್ಕರ್ , ಕಲ್ಯಾಣಿ ಸ್ಟೀಲ್, ಮುಕುಂದ್-ಸುಮಿ, ಎಕ್ಸ್ಇಂಡಿಯಾ ಕಾರ್ಖಾನೆ ವಿಸ್ತರಣೆ ವಿರೋಧಿಸಿ, ತುಂಗಭದ್ರಾ ವಿಷಗೊಳಿಸುವ ಕಾರ್ಖಾನೆಗಳನ್ನು ಸೀಜ್ ಮಾಡಲು ಒತ್ತಾಯಿಸಿ, ಬಸಾಪುರ ಕೆರೆ ಸಾರ್ವಜನಿಕರಿಗೆ ಮುಕ್ತಗೊಳಿಸಲು ಆಗ್ರಹಿಸಿದ ಹೋರಾಟಕ್ಕೆ ಕಾರ್ಖಾನೆ ಬಾಧಿತ ಕುಣಿಕೇರಿ ಗ್ರಾಮದ ರೈತ ಮಹಿಳೆಯರು ಬೆಂಬಲಿಸಿದರು.
ಕುಣಿಕೇರಿ ರೈತ ರಮೇಶ ಡಂಬ್ರಳ್ಳಿ ಮಾತನಾಡಿ 'ನಾನು ಊರು ಪಕ್ಕದ ಜಮೀನು ಇಟ್ಟುಕೊಂಡು ಎಲೆಬಳ್ಳಿ ಬೆಳೆದು ಲಕ್ಷಗಟ್ಟಲೆ ಲಾಭ ಮಾಡುತ್ತಿದ್ದೆ. ಈಗ ನನ್ನ ಸಂಪೂರ್ಣ ಕೃಷಿ ಪಾಳು ಬಿದ್ದಿದೆ. ನಾವು ಕೃಷಿ ಕಳೆದುಕೊಂಡರೆ ಎಲ್ಲವನ್ನೂ ಕಳೆದುಕೊಂಡಂತೆ. ನಾವು ಉಳಿಯಬೇಕಾದರೆ ಈ ಕಾರ್ಖಾನೆ ಮಾಲಿನ್ಯ ನಿಯಂತ್ರಣ ಮಾಡಬೇಕು. ಇಲ್ಲಿದೆ ಹೋದರೆ ಈ ಕಾರ್ಖಾನೆಗಳನ್ನು ಮುಚ್ಚಿ ನಮಗೆ ಬದುಕಲು ಬಿಡಿ' ಎಂದು ಗೋಳು ತೋಡಿಕೊಂಡರು.
ಮಹಿಳಾ ಸಂಘದ ಅಧ್ಯಕ್ಷೆ ಗಿರಿಯಮ್ಮ ಅವರು ಮಾತನಾಡಿ ' ನಮ್ಮ ಗ್ರಾಮವನ್ನು ಐ.ಎಲ್.ಸಿ, ಎಕ್ಸ್ಇಂಡಿಯಾ, ಭದ್ರಶ್ರೀ, ಸಾಯಿಬಾಬಾ, ದೃವದೇಶ ಕಾರ್ಖಾನೆಗಳು ನಮ್ಮ ಹಳ್ಳಿಯ ವಾತಾವರಣ ಹಾಳಾಗಿದೆ ಎಂದರು.
ಹೋರಾಟದಲ್ಲಿ ಪ್ರಧಾನ ಸಂಚಾಲಕರು ಅಲ್ಲಮಪ್ರಭು ಬೆಟ್ಟದೂರು, ಸಂಚಾಲಕರು ಮಲ್ಲಿಕಾರ್ಜುನ ಬಿ. ಗೋನಾಳ, ಪುಸ್ತಕ ಪ್ರಕಾಶಕ ಡಿ.ಎಂ.ಬಡಿಗೇರ, ನಿವೃತ್ತ ಪ್ರಾಚಾರ್ಯರು ಎಸ್.ಬಿ.ರಾಜೂರ,ಕವಯಿತ್ರಿ ಪುಷ್ಪಲತಾ ಏಳುಭಾವಿ, ಹಿರಿಯ ಸಾಹಿತಿ ಎ.ಎಂ.ಮಾದರಿ, ಬಿ.ಜಿ.ಕರಿಗಾರ, ಈರಯ್ಯ ಸ್ವಾಮಿ ಸಾಲಿಮಠ, ಎಸ್. ಮಹಾದೇವಪ್ಪ ಮಾವಿನಮಾಡು, ನಿವೃತ್ತ ಅಂಚೆ ಅಧಿಕಾರಿ ರವಿ ಕಾಂತನವರ, ನಿವೃತ್ತ ಉಪನ್ಯಾಸಕ ಶಂಭುಲಿಂಗಪ್ಪ ಹರಗೇರಿ, ನಿವೃತ್ತ ಕಾರ್ಮಿಕ ನಿರೀಕ್ಷಕ ಶಾಂತಯ್ಯ ಅಂಗಡಿ, ಮೂಕಪ್ಪ ಮೇಸ್ತ್ರಿ ಬಸಾಪುರ, ಮಖ್ಬುಲ್ ರಾಯಚೂರು, ಶಿವಪ್ಪ ಹಡಪದ ಪಾಲ್ಗೊಂಡರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್