

ಕೊಪ್ಪಳ, 29 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ನಗರದ ತಾಲೂಕು ಕ್ರಿಡಾಂಗಣದಲ್ಲಿ 70 ಕನ್ನಡ ರಾಜ್ಯೋತ್ಸವ ಹಾಗೂ ಕುವೆಂಪು ಅವರ 121 ನೇ ಜಯಂತೋತ್ಸವದ ಅಂಗವಾಗಿ ಹೆಚ್. ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ವತಿ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ, ಕುವೆಂಪು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅಟೋ ಚಾಲಕರಿಗೆ ಉಚಿತ ನೇತ್ರ ತಪಾಸಣಾ ಶಿಬಿರ ಕಾರ್ಯಕ್ರಮಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯ ಉಪಾಧ್ಯಕ್ಷ ಅಜ್ಜಪ್ಪ ಕರಡಕಲ್ ಅವರು ನಾವು ಮಾಡುವ ಪ್ರತಿಯೊಂದು ಕಾರ್ಯವು ಸಮಾಜಕ್ಕೆ ಒಳ್ಳೆಯ ಕೆಲಸವಾಗಿರಬೇಕು ಇದರಿಂದ ಪ್ರತಿಯೊಬ್ಬರಿಗೂ ಸಹಾಯವಾಗಲಿದೆ ಜೊತೆಗೆ ಮಾದರಿಯಾಗಲಿದೆ ಕೊಪ್ಪಳ ಜಿಲ್ಲೆಯ ಆಟೋ ಚಾಲಕರು ಉಚಿತವಾಗಿ ಕಣ್ಣಿನ ತಪಾಸಣೆ ಪಾಲ್ಗೊಂಡಿದ್ದಾರೆ ಇನ್ನೂ ಅನೇಕ ಸೌಲಭ್ಯಗಳನ್ನು ನಮ್ಮ ಸಂಘದ ವತಿಯಿಂದ ನಾವು ಕೊಡಿಸುವ ಪ್ರಯತ್ನ ಮಾಡುತ್ತೇವೆ ಕುವೆಂಪು ಅವರ ಸಾಹಿತ್ಯ, ಕನ್ನಡ ನಾಡು–ನುಡಿಯ ಮೇಲಿನ ಅಪಾರ ಪ್ರೀತಿ ಹಾಗೂ ಅವರ ವಿಚಾರಧಾರೆಗಳು ಇಂದಿನ ಯುವಜನತೆಗೆ ಮಾರ್ಗದರ್ಶನವಾಗಬೇಕು ಎಂದು ಹೇಳಿದರು. ಕನ್ನಡ ಭಾಷೆ, ಸಂಸ್ಕೃತಿ ಮತ್ತು ಸಾಹಿತ್ಯದ ಬೆಳವಣಿಗೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಅವರು ಕರೆ ನೀಡಿದರು.
ಮನುಷ್ಯನ ದೇಹದಲ್ಲಿ ಕಣ್ಣು ಪ್ರಮುಖವಾದ ಅಂಗವಾಗಿದ್ದು, ಪ್ರತಿ ನಿತ್ಯದ ಬದುಕಿಗೆ ನೇತ್ರಗಳು ಆಸರೆಯಾಗಿದ್ದು ಅದರ ಬಗ್ಗೆ ಬಹಳ ಜಾಗೂರುಕತೆ ಅವಶ್ಯವಾಗಿದೆ ಉಚಿತ ನೇತ್ರ ತಪಾಸಣಾ ಶಿಬಿರದಲ್ಲಿ ಅನೇಕ ಅಟೋ ಚಾಲಕರು ಪಾಲ್ಗೊಂಡು ಕಣ್ಣಿನ ತಪಾಸಣೆ ಮಾಡಿಸಿಕೊಂಡರು. ಚಾಲಕರ ಆರೋಗ್ಯ ರಕ್ಷಣೆಗೆ ಇಂತಹ ಶಿಬಿರಗಳು ಸಹಕಾರಿಯಾಗಿವೆ ಎಂದು ಕರವೇ ಜಿಲ್ಲಾಧ್ಯಕ್ಷ ಶಿವರಾಜ್ ಉಳ್ಳಾಗಡ್ಡಿ ತಿಳಿಸಿದರು.
ಈ ಕಾರ್ಯಕ್ರಮವನ್ನು ಸಂಘಟನೆಯ ಎಲ್ಲಾ ಜಿಲ್ಲಾ ಹಾಗೂ ತಾಲೂಕು ಪದಾಧಿಕಾರಿಗಳ ಹಾಗೂ ರಾಜ್ಯ ಉಪಾಧ್ಯಕ್ಷರ ಸಹಕಾರದಿಂದ ನಾವು ಕಣ್ಣಿನ ತಪಾಸಣೆ ಶಿಬಿರ ಯಶಸ್ವಿಯಾಗಿ ಮಾಡುತ್ತಿದ್ದೇವೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗರಾಜ್ ಸಿ ಹೊನಕೇರಿ ತಿಳಿಸಿದರು.
ಪ್ರತಿಯೊಬ್ಬರಿಗೂ ಕಣ್ಣುಗಳು ಅವಶ್ಯವಾಗಿದ್ದು ಕಣ್ಣು ಇರದೇ ಯಾವುದೇ ಕೆಲಸ ಆಗದು ಆದ್ದರಿಂದ ಪ್ರತಿಯೊಬ್ಬರು ಕಣ್ಣಿನ ಬಗ್ಗೆ ಕಾಳಜಿವಹಿಸುವ ಜೊತೆಗೆ ನೇತ್ರಾದಾನ ಮಾಡಿ ಮತ್ತೋಬ್ಬರ ಬಾಳಿಗೆ ಬೆಳಕಾಗಬೇಕು ಕೊಪ್ಪಳ ಜಿಲ್ಲೆಯ ಆಟೋ ಚಾಲಕರು ಇದರ ಲಾಭವನ್ನು ಪಡೆದುಕೊಳ್ಳಬೇಕು ಜಿಲ್ಲಾ ಆಟೋ ಘಟಕದ ಅಧ್ಯಕ್ಷರು ಸಂಜಯ್ ದಾಸ್ ಕೌಜಕೇರಿ ಹೇಳಿದರು.
ಈ ವೇಳೆ ಉಚಿತ ನೇತ್ರ ತಪಾಸಣಾ ಶಿಬಿರದಲ್ಲಿ ಭಾಗವಹಿಸಿದ ಅಟೋ ಚಾಲಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. “ನಮಗೆ ಆಟೋ ಚಾಲಕರಿಗೆ ಉಚಿತವಾಗಿ ಕಣ್ಣಿನ ತಪಾಸಣೆ ಮಾಡಿಸಿರುವುದು ಅತ್ಯಂತ ಅನುಕೂಲವಾಗಿದೆ. ದಿನನಿತ್ಯ ವಾಹನ ಚಾಲನೆ ಮಾಡುವ ನಮಗೆ ಕಣ್ಣಿನ ಆರೋಗ್ಯ ಅತ್ಯಂತ ಮುಖ್ಯವಾಗಿದೆ. ಇಂತಹ ಶಿಬಿರಗಳಿಂದ ನಮ್ಮ ಆರೋಗ್ಯದ ಬಗ್ಗೆ ಅರಿವು ಮೂಡುತ್ತದೆ” ಎಂದು ಅಟೋ ಚಾಲಕರು ಹೇಳಿದರು.
ಇಂತಹ ಉಚಿತ ಆರೋಗ್ಯ ಹಾಗೂ ನೇತ್ರ ತಪಾಸಣಾ ಶಿಬಿರಗಳು ಕೊಪ್ಪಳ ನಗರದಲ್ಲಿ ನಿರಂತರವಾಗಿ ನಡೆಯಬೇಕು. ಕಾರ್ಮಿಕ ವರ್ಗದ ಜನರಿಗೆ ಇಂತಹ ಕಾರ್ಯಕ್ರಮಗಳು ಬಹಳ ಸಹಾಯಕವಾಗಿವೆ. ಈ ರೀತಿಯ ಸೇವಾ ಮನೋಭಾವದ ಕಾರ್ಯಕ್ರಮಗಳನ್ನು ಆಯೋಜಿಸಿದ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಸಂಘಟಕರಿಗೆ ಧನ್ಯವಾದಗಳು” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ನಾಗರತ್ನ ಅಳವಂಡಿ, ಸೇರಿದಂತೆ ತಾಲೂಕ ಅಧ್ಯಕ್ಷ ಅಬ್ದುಲ್ ಸಮದ್ ಕೊಪ್ಪಳ, ಮಾರುತಿ ಹಲಗಿ ಕುಷ್ಟಗಿ, ರಾಜಶೇಖರ ಶ್ಯಾಗೋಟಿ ಯಲಬುರ್ಗಾ, ಯಮನೂರ ಬಟ್ಟ ಗಂಗಾವತಿ, ಮಾರುತಿ ಹಡಪದ ಕಾರಟಗಿ, ಗಂಗಾಧರ ಗಂಗಾಮತ ಕನಕಗಿರಿ, ಮಂಜುನಾಥ್ ಶಿಡ್ನಳ್ಳಿ ಕುಕನೂರ, ಅಸ್ಪಾಕ ಕೊಪ್ಪಳ ನಗರ ಘಟಕ ಅಧ್ಯಕ್ಷರು, ನಗರ ಘಟಕ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಕಾರ್ಯಕ್ರಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು, ಸದಸ್ಯರು, ಅಟೋ ಚಾಲಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್