
ಹಾವೇರಿ, 29 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕೆಟ್ಟು ಬಹಳ ದಿನ ಆಗಿದೆ. ಪ್ರತಿ ದಿನ ಲೂಟಿ, ದರೋಡೆ, ಕೊಲೆ ಸುಲಿಗೆ ನಡೆಯುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ಹಾವೇರಿಯಲ್ಲಿ ಮಾಧ್ಯಮಗಳಿಗೆ ಮಾತನಾಡಿದ ಅವರು,
ಮೈಸೂರಿನಲ್ಲಿ ಹಗಲಿನಲ್ಲಿಯೇ ದರೋಡೆಯಾಗಿದೆ. ದಷ್ಟ ಚರ್ಮದ ಸರ್ಕಾರ, ಕರ್ನಾಟಕದಲ್ಲಿಯೇ ಡ್ರಗ್ಸ್ ತಯಾರಿಸಿ ಇಡಿ ದೇಶಕ್ಕೆ ಸರಬರಾಜು ಮಾಡುವ ಫ್ಯಾಕ್ಟರಿಗಳೇ ರಾಜ್ಯದಲ್ಲಿ ಆರಂಭವಾಗಿವೆ ಎಂದರೆ ರಾಜ್ಯ ಸರ್ಕಾರವೇ ಶಾಮೀಲಾಗಿದೆ. ಮಹಾರಾಷ್ಟ್ರದವರು ಒಂದು ದಾಳಿ ಮಾಡಿದ್ದಾರೆ ಎಂದರೆ ಇವರು ಏನು ಕತ್ತೆ ಕಾಯುತ್ತಿದ್ದರಾ, ಯಾವ ಡಿಸಿಪಿ ವ್ಯಾಪ್ತಿಯಲ್ಲಿ ಬರುತ್ತದೆ. ಆ ಡಿಸಿಪಿಗಳನ್ನು ಸಸ್ಪೆಂಡ್ ಮಾಡಬೇಕು. ಇದಕ್ಕೆ ನೇರವಾಗಿ ಗೃಹ ಸಚಿವರು ಮತ್ತು ಗೃಹ ಇಲಾಖೆ ಹೊಣೆ ಎಂದು ಆರೋಪಿಸಿದರು.
ಅನ್ನಭಾಗ್ಯ ಅಕ್ಕಿ ಕಳ್ಳಸಾಗಾಣಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಹಾವೇರಿಯಲ್ಲಿ ಅನ್ನಭಾಗ್ಯದ ಅಕ್ಕಿ ಅಕ್ರಮವಾಗಿ ಮಾರಾಟವಾಗುತ್ತಿರುವ ಬಗ್ಗೆ ಜನರೇ ಹಿಡಿದುಕೊಟ್ಟರೂ ಅಧಿಕಾರಿಗಳು ಬಂದಿಲ್ಲ. ಬಡವರಿಗೆ ಅಕ್ಕಿ ಕೊಡುವಲ್ಲಿಯೂ ರೇಷನ್ ಕಾರ್ಡ್‌ಗೆ ಪರ್ಸಂಟೇಜ್ ಫಿಕ್ಸ್ ಮಾಡಿದ್ದಾರೆ. ದೊಡ್ಡ ಪ್ರಮಾಣದಲ್ಲಿ ಹೊರ ರಾಜ್ಯ ಮತ್ತು ಹೊಟೇಲ್‌ಗಳಿಗೆ ಹೋಗುತ್ತಿದೆ. ಅನ್ನಭಾಗ್ಯ ಅಕ್ಕಿಯ ಲೂಟಿಯಲ್ಲಿ ಅಧಿಕಾರಿಗಳ ಪಾಲಿದೆ ಎಂದು ಆರೋಪಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa