ವಿಶ್ವಮಾನವ ಸಂದೇಶದ ಸಾರಿದವರು ರಾಷ್ಟ್ರಕವಿ ಕುವೆಂಪು
ವಿಜಯಪುರ, 29 ಡಿಸೆಂಬರ್ (ಹಿ.ಸ.) : ಆ್ಯಂಕರ್ : ವಿಶ್ವ ಮಾನವ ಸಂದೇಶವನ್ನು ತಮ್ಮ ಕೃತಿಗಳ ಮೂಲಕ ವಿಶ್ವಕ್ಕೆ ಸಾರಿದವರು ರಾಷ್ಟçಕವಿ ಕುವೆಂಪು ಅವರು ಎಂದು ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ವೀರಯ್ಯ ಸಾಲಿಮಠ ಅವರು ಹೇಳಿದರು. ಅವರು ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ,
ಕುವೆಂಪು


ವಿಜಯಪುರ, 29 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ವಿಶ್ವ ಮಾನವ ಸಂದೇಶವನ್ನು ತಮ್ಮ ಕೃತಿಗಳ ಮೂಲಕ ವಿಶ್ವಕ್ಕೆ ಸಾರಿದವರು ರಾಷ್ಟçಕವಿ ಕುವೆಂಪು ಅವರು ಎಂದು ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ವೀರಯ್ಯ ಸಾಲಿಮಠ ಅವರು ಹೇಳಿದರು.

ಅವರು ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ಆಯೋಜಿಸಲಾದ ರಾಷ್ಟçಕವಿ ಕುವೆಂಪು ಅವರ ಜನ್ಮದಿನದ ಅಂಗವಾಗಿ ವಿಶ್ವಮಾನವ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಾಡಿಗೆ ಪ್ರಪ್ರಥಮ ಜ್ಞಾನನಪೀಠ ಪ್ರಶಸಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕನ್ನಡಕ್ಕೆ ತಂದು ಕೊಟ್ಟರು. ಕನ್ನಡ ಪ್ರೇಮ, ಪರಿಸರ ಪ್ರೇಮ, ವಿಶ್ವ ಮಾನವ ತತ್ವಗಳ ನೆಲಗಟ್ಟಿನಲ್ಲಿ ಬದುಕಿ ಬಾಳಿದ ಕುವೆಂಪು ಅವರು ಸರ್ವರ ಉದಯವೇ ನಾಡಿನ ಉದಯವೆಂದು ಹೇಳುತ್ತಾ ಸಮನ್ವಯದ ಸಂದೇಶವನ್ನು ತಮ್ಮ ಕೃತಿಗಳ ಮೂಲಕ ಜಗತ್ತಿಗೆ ಪರಿಚಯಿಸಿದರು.

ಮಾನವ ವಿಶ್ವ ಮಾನಾವನಾಗಿ ಜನಿಸುತ್ತಾನೆ, ಆದರೆ ಕಟ್ಟುಪಾಡುಗಳಿಂದ ಅಲ್ಪ ಮಾನವನಾಗುತ್ತಾನೆ. ಆದ್ರಿಂದ ವಿಶ್ವ ಮಾನವ ವಿಚಾರಗಳನ್ನು ಹಾಗು ಚಿಂತನೆಗಳನ್ನು ನಮ್ಮ ಜೀವನದಲ್ಲಿ ಪಾಲಿಸುವುದರ ಮೂಲಕ ವಿಶ್ವ ಮಾನವ ಸಂದೇಶದ ಸಾರ ಬಿತ್ತಿ, ಎಲ್ಲರೂ ವಿಶ್ವಮಾನವ ಪ್ರಜ್ಞೆ ಹೊಂದೋಣ ಎಂದು ಹೇಳಿದರು.

ಕುವೆಂಪು ಅವರು ಕನ್ನಡಾಭಿಮಾನ, ಪರಿಸರದ ಕಾಳಜಿ ಜಗತ್ತಿಗೆ ಸಮಾನತೆ ಸಂದೇಶಗಳ ಚಿಂತನೆಗಳು ಅವರ ಸಮೃದ್ಧ ಸಾಹಿತ್ಯದಲ್ಲಿ ಹಾಸುಹೊಕ್ಕಾಗಿರುವುದನ್ನು ಕಾಣಬಹುದಾಗಿದೆ. ಬಸವಣ್ಣನವರ ತತ್ವಗಳು ಮತ್ತು ವಿಚಾರಗಳು ಅವರ ಸಾಹಿತ್ಯದಲ್ಲಿ ಗೋಚರವಾಗುತ್ತವೆ. ಕುವೆಂಪು ಅವರು ನೀಡಿದ ಮೌಲಿಕ ಸಾಹಿತ್ಯದ ವಿಚಾರಗಳನ್ನು ಹಾಗೂ ಅದರಲ್ಲಿನ ಸಾರ-ಸತ್ವ ಯುವ ಜನತೆ ಅರಿತುಕೊಳ್ಳಬೇಕು ಎಂದು ಅವರು ಹೇಳಿದರು.

ಉಪನ್ಯಾಸ ನೀಡಿದ ಜಂಬುನಾಥ ಕಂಚ್ಯಾಣಿ ಅವರು ಮಾತನಾಡಿ, ಕುವೆಂಪು ಅವರು ನಾಡು ಕಂಡ ದೈತ್ಯ ಪ್ರತಿಭೆ, ಅವರೊರ್ವ ರಸಋಷಿಯೂ ಹೌದು ಸಮಾಜ ಪರಿವರ್ತನೆ ಅವರ ವಿಚಾರಗಳು ಪ್ರಸ್ತುತವಾಗಿವೆ. ಕುವೆಂಪು ರಚಿತ ಶ್ರೀ ರಾಮಾಯಣ ದರ್ಶನಂ ಮೇರು ಕೃತಿ ಈ ಕಾಲಕ್ಕೆ ಅಗತ್ಯವಾದ ವಿಚಾರಗಳನ್ನು ಹೊಂದಿದೆ. ಆಧ್ಯಾತ್ಮ ಹಾಗೂ ಕನ್ನಡ ಭಾಷಾ ಸಾಹಿತ್ಯದಲ್ಲಿ ತಮ್ಮ ಕನ್ನಡ ಪ್ರೇಮವನ್ನು ಮೆರೆದವರಾಗಿದ್ದರು.

ಕುವೆಂಪು ಅವರು ಮೈಸೂರಿನ ಮಹಾರಾಜ ಕಾಲೇಜಿನ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ, ಮೈಸೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾಗಿಯೂ ತಮ್ಮ ಅನುಪಮ ಸೇವೆ ಸಲ್ಲಿಸಿದ್ದಾರೆ ಎಂದು ಹೇಳಿದ ಅವರು, ತಮ್ಮ ಕಲ್ಪನೆಯ ಕೂಸಾದ ಮಾನಸ ಗಂಗೋತ್ರಿ ಕಟ್ಟಿ ಬೆಳೆಸಿದರು. ವಿಶ್ವವಿದ್ಯಾನಿಲಯವನ್ನು ಅಧ್ಯಾಯನಾಂಗ, ಸಂಶೋಧನಾAಗ ಹಾಗೂ ಪ್ರಸರಾಂಗ ಎಂದು ವಿಭಾಗಿಸಿ, ದೇಶದ ಇತರ ವಿಶ್ವವಿದ್ಯಾನಿಲಯಗಳಿಗೆ ಮಾದರಿಯಾಗುವಂತೆ ಬೆಳೆಸಿದರು.

ಕನ್ನಡದ ಬೆಳವಣಿಗೆಗೆ ಅವರ ಕೊಡುಗೆ ಅಪಾರ. ಕನ್ನಡ ಬೆಳೆಸಿದ ಕಟ್ಟಾಳು. ವಿಶಾಲ ಮನೋಭಾವವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು ಹಾಗೂ ಅವರ ಚಿಂತನೆ ಹಾಗೂ ಸಂದೇಶಗಳು ಮಾನವ ಜನಾಂಗಕ್ಕೆ ದಾರಿದೀಪವಾಗಿವೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಉಪ ಆಯುಕ್ತರಾದ ಮಹಾವೀರ ಬೋರಣ್ಣ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಸಿ.ಕೆ.ಚಂದ್ರಶೇಖರ, ವಿಜಯಪುರ ತಹಶೀಲ್ದಾರ ಪ್ರಶಾಂತ ಚನಗೊಂಡ, ಚುನಾವಣಾ ತಹಶೀಲ್ದಾರರಾದ ಪಿ.ಜಿ.ಪವಾರ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಮಹೇಶ ಪೋತದಾರ, ಜಿಲ್ಲಾ ಪಂಚಾಯತಿಯ ಸಹಾಯಕ ನಿರ್ದೇಶಕರಾದ ಡಿ.ಬಿ.ಮಂದಳೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ರಾಜಶೇಖರ ಧೈವಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಂತೋಷ ಭೋವಿ, ಜಿಲ್ಲಾಧಿಕಾರಿ ಕಚೇರಿಯ ಶಿರಸ್ತೇದಾರರಾದ ಕಟ್ಟಿಮನಿ, ಸಚ್ಚಿದಾನಂದ ತೇರದಾಳ, ಸಲೀಂ ಬಿಜಾಪುರ, ಪವನ ಕುಮಾರ ನಿಂಬಾಳ, ಮುಖಂಡರಾದ ಅಡಿವೆಪ್ಪ ಸಾಲಗಲ, ಭೀಮರಾಯ ಜಿಗಜಿಣಗಿ ಸೇರಿದಂತೆ ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿ, ಸಿಬ್ಬಂದಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande