

ಬಳ್ಳಾರಿ, 27 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ನಗರದ ರಾಘವೇಂದ್ರ ಕಾಲೋನಿ ಎರಡನೇ ಹಂತದಲ್ಲಿರುವ ಶ್ರೀ ಶಬರಿಮಲೆ ಸ್ವಾಮಿ ಅಯ್ಯಪ್ಪ ದೇವಸ್ಥಾನದಲ್ಲಿ 43ನೇ ವರ್ಷದ ಮಂಡಲ ಪೂಜಾ ಮಹೋತ್ಸವವು ಇಂದು ಭಕ್ತಿಭಾವ ಮತ್ತು ವೈಭವದಿಂದ ಜರುಗಿತು.
ಶ್ರೀ ಶಬರಿ ಅಯ್ಯಪ್ಪ ಟ್ರಸ್ಟ್ ವತಿಯಿಂದ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಮುಂಜಾನೆ 6 ಗಂಟೆಯಿಂದಲೇ ವಿವಿಧ ಧಾರ್ಮಿಕ ಪೂಜಾ ವಿಧಿವಿಧಾನಗಳು ಆರಂಭಗೊಂಡವು. ಈ ಎಲ್ಲಾ ಕಾರ್ಮಿಕ ಕಾರ್ಯಕ್ರಮಗಳು ಟ್ರಸ್ಟ್ ಅಧ್ಯಕ್ಷರಾದ ಜಯಪ್ರಕಾಶ್ ಗುಪ್ತ ಅವರ ನೇತೃತ್ವದಲ್ಲಿ ಜರುಗಿದವು. ಪ್ರಥಮವಾಗಿ ಮುಂಜಾನೆ ಧ್ವಜಾರೋಹಣ ನೆರವೇರಿಸಲಾಯಿತು, ನಂತರ ಗಣಹೋಮ, ನವಗ್ರಹ ಹೋಮ ಹಾಗೂ ಅಯ್ಯಪ್ಪ ಸ್ವಾಮಿ ಹೋಮಗಳನ್ನು ನೆರವೇರಿಸಲಾಯಿತು.
ಬೆಳಿಗ್ಗೆ 8.30ಕ್ಕೆ ವಿಶೇಷ ಅಷ್ಟದ್ರವ್ಯ ಅಭಿಷೇಕ ಹಾಗೂ 9.30ಕ್ಕೆ ಮಹಾ ಮಂಗಳಾರತಿಯನ್ನು ನಡೆಸಲಾಯಿತು. ನಂತರ ಲಕ್ಷ ನಾಮಾರ್ಚನೆ ಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಪೂಜೆಯಲ್ಲಿ ಪ್ರಪ್ರಥಮವಾಗಿ ಅಯ್ಯಪ್ಪ ಮಾಲೆ ಧರಿಸಿಕೊಂಡ ನೂರಾರು ಅಯ್ಯಪ್ಪ ಸ್ವಾಮಿ ಮಲದಾರಿಗಳು ಈ ಅರ್ಚನೆಯಲ್ಲಿ ಪಾಲ್ಗೊಂಡಿದ್ದರು.
ಇಡೀ ದಿನ ದೇವಾಲಯದಲ್ಲಿ ಪೂಜಾ ಕಾರ್ಯಕ್ರಮಗಳು ನಡೆಯುತ್ತಿದ್ದು, ಭಕ್ತಿಗೀತೆ ಗಾಯನ ಹಾಗೂ ರಂಗಸ್ವಾಮಿ ಮತ್ತು ವೇಣು ತಂಡದಿಂದ ಭಜನ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಈ ಕಾರ್ಯಕ್ರಮದಲ್ಲಿ ಗುರುಸ್ವಾಮಿಗಳಾದ ವೀರಭದ್ರ ಸ್ವಾಮಿ, ಓಂಕಾರ ಸ್ವಾಮಿ, ರಮೇಶ್ ಸ್ವಾಮಿ ನಾಗರಾಜ್ ಸ್ವಾಮಿ ಮತ್ತು ದೇವಸ್ಥಾನದ ಟ್ರಸ್ತಿಗಳಾದ ದಿನೇಶ್ ಬಾಬು ಜೆಡಿಎಸ್ ಕುಮಾರ್ ವಿಟ್ಟ ಕೃಷ್ಣಕುಮಾರ್ ತಲ್ಲಂ ಕಿಶೋರ್ ರಾಘವೇಂದ್ರ ಸೇರಿದಂತೆ ಹಿರಿಯ ಸ್ವಾಮಿಗಳಾದ ಕೆ ಹನುಮಂತಪ್ಪ ಮತ್ತು ದುರ್ಗೇಶ್ ಸ್ವಾಮಿ ಸೇರಿದಂತೆ ನೂರಾರು ಅಯ್ಯಪ್ಪ ಸ್ವಾಮಿ ಮಾಲಧಾರಿಗಳು ಭಾಗವಹಿಸಿದ್ದರು.
ಈ ಪೂಜಾ ಕಾರ್ಯಕ್ರಮದಲ್ಲಿ ಗೂಢ ಅಧ್ಯಕ್ಷ ಆಂಜನೇಯಲು, ಮೇಯರ್ ಪಿ ಗಾದೆಪ್ಪ ಭಾಗವಹಿಸಿ ಸ್ವಾಮಿಯ ದರ್ಶನ ಪಡೆದುಕೊಂಡು ಅಯ್ಯಪ್ಪ ಸ್ವಾಮಿಯ ಕೃಪೆಗೆ ಪಾತ್ರರಾದರು.
ನಂತರ ರಾತ್ರಿ 9 ಗಂಟೆಗೆ ಶಬರಿಮಲೆ ಅಯ್ಯಪ್ಪ ದೇವಸ್ಥಾನದ ಸಂಪ್ರದಾಯದಂತೆ ದೇವಾಲಯದಲ್ಲಿ 18 ಮೆಟ್ಟಿಲುಗಳಿಗೆ ವಿಶೇಷ ಪಡಿಪೂಜೆ ಕಾರ್ಯಕ್ರಮವನ್ನು ನೂರಾರು ಅಯ್ಯಪ್ಪ ಸ್ವಾಮಿ ಭಕ್ತರ ಸಮ್ಮುಖದಲ್ಲಿ ಭಕ್ತಿಪೂರ್ಣವಾಗಿ ನೆರವೇರಿಸಲಾಗುವುದು ಎಂದು ಅಯ್ಯಪ್ಪ ಟ್ರಸ್ಟ್ ನ ಅಧ್ಯಕ್ಷ ಜಯಪ್ರಕಾಶ್ ಗುಪ್ತ ತಿಳಿಸಿದರು.
ಈ ಸಂದರ್ಭದಲ್ಲಿ ಅಯ್ಯಪ್ಪ ಮಾಲಾಧಾರಿಗಳು ಸೇರಿದಂತೆ ನಗರದ ಅನೇಕ ಭಕ್ತರು ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸಿ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದು ಧನ್ಯರಾದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್