ವಿಕಸಿತ ಭಾರತಕ್ಕಾಗಿ ಎನ್‌ಇಪಿ ಜಾರಿ : ಬಸವರಾಜ ಬೊಮ್ಮಾಯಿ
ಹಾವೇರಿ, 27 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿಯವರು ಭವ್ಯ ಭವಿಷ್ಯಕ್ಕಾಗಿ, ವಿಕಸಿತ ಭಾರತಕ್ಕಾಗಿ ದೂರ ದೃಷ್ಟಿ ಇಟ್ಟುಕೊಂಡು ಎನ್‌ ಇಪಿ ಜಾರಿಗೆ ತಂದಿದ್ದಾರೆ. ಯಾವ ರಾಜ್ಯದಲ್ಲಿ ಎನ್‌ಇಪಿ ತಂದಿದ್ದಾರೊ, ಆ ರಾಜ್ಯದಲ್ಲಿ ಶಿಕ್ಷಣ ಮಟ್ಟ ಎತ್ತರಕ್ಕೆ ಹೋಗುತ್ತದೆ. ದುರ್ದೈವ ಕರ್ನಾಟ
BSB


ಹಾವೇರಿ, 27 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿಯವರು ಭವ್ಯ ಭವಿಷ್ಯಕ್ಕಾಗಿ, ವಿಕಸಿತ ಭಾರತಕ್ಕಾಗಿ ದೂರ ದೃಷ್ಟಿ ಇಟ್ಟುಕೊಂಡು ಎನ್‌ ಇಪಿ ಜಾರಿಗೆ ತಂದಿದ್ದಾರೆ. ಯಾವ ರಾಜ್ಯದಲ್ಲಿ ಎನ್‌ಇಪಿ ತಂದಿದ್ದಾರೊ, ಆ ರಾಜ್ಯದಲ್ಲಿ ಶಿಕ್ಷಣ ಮಟ್ಟ ಎತ್ತರಕ್ಕೆ ಹೋಗುತ್ತದೆ. ದುರ್ದೈವ ಕರ್ನಾಟಕದ ಶಾಲೆಗಳಲ್ಲಿ ಎನ್‌ಇಪಿ ಜಾರಿಯಿಲ್ಲದಿರುವುದರಿಂದ ಕರ್ನಾಟಕದ ಮಕ್ಕಳು ವಂಚಿತರಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.

ಇಂದು ಹಾವೇರಿ ಜಿಲ್ಲೆಯ ಹಾನಗಲ್ಲ ತಾಲೂಕಿನ ಮಹಾರಾಜಪೇಟೆ ಗ್ರಾಮದಲ್ಲಿರುವ ಜವಾಹರ ನವೋದಯ ವಿದ್ಯಾಲಯದಲ್ಲಿ ಏರ್ಪಡಿಸಿದ ನವೋತ್ಸವ - 2025 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿ ಜೀವನ ಅತ್ಯಂತ ಸುಂದರವಾಗಿರುವ ಜೀವನ ಜೀವನದಲ್ಲಿ ಇದೊಂದು ಸುವರ್ಣ ಯುಗ. ನಾವು ವಿದ್ಯಾರ್ಥಿಗಳಿದ್ದಾಗ ಯಾವಾಗ ಕಾಲೇಜು ಮುಗಿಯುತ್ತದೆ ಅಂದುಕೊಳ್ಳುತ್ತಿದ್ದೇವು. ಈಗ ನಿಮ್ಮನ್ನೆಲ್ಲಾ ನೋಡಿದಾಗ ನಾನೂ ವಿದ್ಯಾರ್ಥಿ ಆಗಬೇಕು ಅಂತ ಅನಿಸುತ್ತದೆ. ಹಿಂದಿನ ಸಾಲಿನಲ್ಲಿ ಕುಳಿತುಕೊಳ್ಳಬೇಕು ಅಂತ ಅನಿಸುತ್ತದೆ. ನವೋದಯ ಶಾಲೆಯ ವಿದ್ಯಾರ್ಥಿಗಳಾಗಿ ನೀವು ಅದೃಷ್ಟವಂತರು, ನಿಮಗೆ ಒಳ್ಳೆಯ ಗುಣಮಟ್ಟದ ಶಿಕ್ಷಣ, ಕೆರಿಯರ್ ಗೈಡನ್ ಸಿಗುತ್ತದೆ. ನಿಮಗೆ ಎಲ್ಲ ರೀತಿಯ ವ್ಯವಸ್ಥೆ ಮಾಡಿ ಶಿಕ್ಷಣ ಕೊಡುವ ವ್ಯವಸ್ಥೆ ಎಲ್ಲಿಯೂ ಇಲ್ಲ. ಇಲ್ಲಿರುವ ಎಲ್ಲ ವಿದ್ಯಾರ್ಥಿಗಳು ಅದೃಷ್ಟವಂತರು. ಈ ಶಾಲೆಗಳು ನವ ಭಾರತದ ಶಿಲ್ಪಿಗಳನ್ನು ತಯಾರು ಮಾಡುವಂತಹ ನವೋದಯ ಶಾಲೆಗಳು ಎಂದು ಹೇಳಿದರು.

ಪ್ರತಿಭೆ ಎಲ್ಲಿ ಬೇಕಾದರೂ ಹುಟ್ಟುತ್ತದೆ. ಕೇವಲ ಶ್ರೀಮಂತರ ಮನೆಯಲ್ಲಿ ಹುಟ್ಟಬೇಕಂತಿಲ್ಲ. ಜ್ಞಾನ ದೇವರ ಆಶೀರ್ವಾದ, ಗ್ರಾಮೀಣ ಪ್ರದೇಶದಲ್ಲಿ, ಬಡವರ ಮನೆಯಲ್ಲಿ, ಕೂಲಿಕಾರರ ಮನೆಯಲ್ಲಿ ವೈದ್ಯರ ಮನೆಯಲ್ಲಿ ಎಲ್ಲಿ ಬೇಕಾದರೂ ಹುಟ್ಟಬಹುದು. ಆ ಬುದ್ದಿ ಶಕ್ತಿಗೆ ಸರಿಯಾದ ಜ್ಞಾನ ಮಕ್ಕಳಿಗೆ ಕೊಟ್ಟರೆ ನಮ್ಮ ಭಾರತದ ಮಕ್ಕಳು ಇಡೀ ಜಗತ್ತನ್ನು ಗೆಲ್ಲಬಹುದು. ನಾನು ಆಮೇರಿಕದ ಶಾಲೆಗಳಿಗೆ ಭೇಟಿ ಕೊಟ್ಟಿದ್ದನೆ. ನಾವೆಲ್ಲ ಅಮೇರಿಕಾ ಬಹಳ ಅಡ್ವಾನ್ಸ್ ಇದೆ ಅಂತ ತಿಳಿದುಕೊಂಡಿದ್ದೇವೆ. ಆಮೇರಿಕಾದ ನಾಸಾದಲ್ಲಿ ಶೇ 30 ಕ್ಕಿಂತ

ಹೆಚ್ಚು ಭಾರತೀಯ ವಿಜ್ಞಾನಿಗಳಿದ್ದಾರೆ. ಅಮೇರಿಕಾದ ಶಾಲೆಗಳಲ್ಲಿ ಆರನೇ ತರಗತಿಯಲ್ಲಿ ಭಾಗಿಸುವುದು, ಗುಣಿಸುವುದನ್ನು ಕಲಿಸುತ್ತಾರೆ. ನಮ್ಮ ವಿದ್ಯಾರ್ಥಿಗಳು ಎರಡನೇ ಕ್ಲಾಸಿನಲ್ಲಿಯೇ ಕಲಿತಿರುತ್ತಾರೆ. ನಮ್ಮ ವಿದ್ಯಾರ್ಥಿಗಳ ಐಕ್ಯೂ ಲೇವಲ್ ಜಾಸ್ತಿ ಇದೆ ಎಂದು ಹೇಳಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande