58ನೇ ದಿನಕ್ಕೆ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಧರಣಿ
ರ‍್ಯಾಲಿ
ಕೊಪ್ಪಳ : ಕಾರ್ಖಾನೆ ವಿರೋಧಿ ಆಟೋ ರ್ಯಾಲಿ: ಶಿವಸಂಗಪ್ಪ


ಕೊಪ್ಪಳ, 27 ಡಿಸೆಂಬರ್ (ಹಿ.ಸ.) :

ಆ್ಯಂಕರ್ : 58ನೇ ದಿನದಲ್ಲಿ ಮುನ್ನಡೆದ ಬಲ್ಡೋಟಾ ಬಿಎಸ್ಪಿಎಲ್, ಕಿರ್ಲೋಸ್ಕರ್, ಕಲ್ಯಾಣಿ ಸ್ಟೀಲ್, ಮುಕುಂದ್-ಸುಮಿ, ಎಕ್ಸ್ಇಂಡಿಯಾ ಮುಂತಾದ ಕಾರ್ಖಾನೆಗಳ ವಿಸ್ತರಣೆ ವಿರೋಧಿಸಿ, ಬಸಾಪುರ ಕೆರೆ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲು ಆಗ್ರಹಿಸಿ, ತುಂಗಭದ್ರಾ ವಿಷಗೊಳಿಸುವ ಕಾರ್ಖಾನೆಗಳನ್ನು ಸೀಜ್ ಮಾಡಲು ಒತ್ತಾಯಿಸಿ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆಯಿಂದ ಅನಿರ್ಧಿಷ್ಟಾವಧಿ ಧರಣಿ ಹೋರಾಟ 58ನೇ ದಿನ ಪೂರ್ಣಗೊಳಿಸಿತು.

ಡಾ.ಬಿ.ಆರ್. ಅಂಬೇಡ್ಕರ್ ಆಟೋ ಚಾಲಕರು ಮತ್ತು ಮಾಲಿಕರ ಸಂಘ ಭಾಗ್ಯನಗರ ಇದರ ಮಾಜಿ ಅಧ್ಯಕ್ಷ ಶಿವಲಿಂಗಪ್ಪ ವಣಗೇರಿ ಮಾತನಾಡಿ 'ನಗರ ಬೆಳೆದರೆ ಜನರು ನಗರದಲ್ಲಿ ಓಡಾಡುತ್ತಾರೆ. ನಗರದ ಸುತ್ತ ಈಗ ರೀಯಲ್ ಎಸ್ಟೇಟ್ ವ್ಯವಹಾರಕ್ಕೆ ಗರ ಬಡಿದಿದೆ. ನಿವೃತ್ತಿ ಜೀವನ ಇಲ್ಲಿ ಕಳೆಯಬೇಕು ಎನ್ನುವವರು ತಮ್ಮ ಕುಟುಂಬ ಕೊಪ್ಪಳದಲ್ಲಿ ಸೆಟ್ಲ್ ಆಗುವುದರಿಂದ ಹಿಂದೆ ಸರಿದಿದ್ದಾರೆ ಎಂದರು.

ನಗರಕ್ಕೆ ಭವಿಷ್ಯ ಇಲ್ಲ ಎಂದಾದರೆ ಯಾರು ಸೈಟ್ ಖರೀದಿ ಮಾಡಬೇಕು? ಯಾರು ಮನೆ ಕಟ್ಟಬೇಕು? ನಗರದ ಪೂರ್ವ ಭಾಗದಲ್ಲಿ ಅರ್ಧದಷ್ಟು ಸೈಟ್ ದರ ಕುಸಿತವಾದರೂ ಖರೀದಿಸಲು ಯಾರೂ ಮುಂದೆ ಬರುತ್ತಿಲ್ಲ. ನಮ್ಮ ನಗರಗಳು ಬೆಳೆಯಬೇಕು ಎಂದರೆ ಶುದ್ಧ ಗಾಳಿ, ಶುದ್ಧ ನೀರು ಮೊದಲು ಬೇಕು. ಇದನ್ನು ಹಾಳು ಮಾಡಲು ಮುಂದಾದ ಬಲ್ಡೋಟಾ ಒಳಗೊಂಡು ಯಾವುದೇ ಕಾರ್ಖಾನೆಗಳು ಇಲ್ಲಿ ವಿಸ್ತರಣೆ ಆಗಬಾರದು. ನಮ್ಮ ನಗರ ಉಳಿಸಿಕೊಳ್ಳಲು ಇಷ್ಟರಲ್ಲಿ ನಗರದಲ್ಲಿ ದೊಡ್ಡ ಮಟ್ಟದಲ್ಲಿ ಆಟೋ ರಿಕ್ಷಾ ರ‍್ಯಾಲಿ ನಡೆಸುತ್ತೇವೆ' ಎಂದರು.

'ಧರಣಿಗೆ ಬೆಂಬಲಿಸಲು ಖ್ಯಾತ ವಿಮರ್ಶಕ, ನಿವೃತ್ತ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ರಹಮತ್ ತರೀಕೆರೆ 61ನೇ ದಿನ ಮಂಗಳವಾರ 30.12.2025ರಂದು ಆಗಮಿಸುತ್ತಾರೆ' ಎಂದು ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು ಹೇಳಿದರು.

ಹೋರಾಟದಲ್ಲಿ ಕವಯಿತ್ರಿ ಪುಷ್ಪಲತಾ ಏಳುಭಾವಿ, ಹಿರಿಯ ಸಾಹಿತಿ ಎ.ಎಂ.ಮಾದರಿ, ಸಂಚಾಲಕರಾದ ಮಲ್ಲಿಕಾರ್ಜುನ ಬಿ‌. ಗೋನಾಳ ಮತ್ತು ಮಂಜುನಾಥ ಜಿ. ಗೊಂಡಬಾಳ, ಪುಸ್ತಕ ಪ್ರಕಾಶಕ ಡಿ.ಎಂ.ಬಡಿಗೇರ, ನಿವೃತ್ತ ಪ್ರಾಚಾರ್ಯರಾದ ಎಸ್.ಬಿ.ರಾಜೂರ ಮತ್ತು ಬಿ.ಜಿ.ಕರಿಗಾರ, ಈರಯ್ಯ ಸ್ವಾಮಿ ಸಾಲಿಮಠ, ಎಸ್. ಮಹಾದೇವಪ್ಪ ಮಾವಿನಮಾಡು, ನಿವೃತ್ತ ಅಂಚೆ ಅಧಿಕಾರಿ ರವಿ ಕಾಂತನವರ, ನಿವೃತ್ತ ಉಪನ್ಯಾಸಕ ಶಂಭುಲಿಂಗಪ್ಪ ಹರಗೇರಿ, ನಿವೃತ್ತ ಕಾರ್ಮಿಕ ನಿರೀಕ್ಷಕ ಶಾಂತಯ್ಯ ಅಂಗಡಿ, ಮೂಕಪ್ಪ ಮೇಸ್ತ್ರಿ ಬಸಾಪುರ, ಮಖ್ಬುಲ್ ರಾಯಚೂರು, ಶಿವಪ್ಪ ಹಡಪದ ಇತರರು ಪಾಲ್ಗೊಂಡರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande