ಜಾರ್ಖಂಡ್ ಡಿಐಜಿ ವೈ.ಎಸ್. ರಮೇಶ್ ಅವರಿಗೆ ಬಳ್ಳಾರಿಯಲ್ಲಿ ಅಭಿನಂದನೆ
ಬಳ್ಳಾರಿ, 27 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಜಾರ್ಖಂಡ್ ರಾಜ್ಯದ ಗೃಹ ಇಲಾಖೆಯ ಡಿಐಜಿ ಆಗಿ ಬಡ್ತಿ ಪಡೆದಿರುವ ಐಪಿಎಸ್ ಅಧಿಕಾರಿ, ಬಳ್ಳಾರಿ ನಿವಾಸಿ ವೈ.ಎಸ್. ರಮೇಶ್ ಅವರವನ್ನು ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಲ್ಲಿ ಶನಿವಾರ ಸನ್ಮಾನಿಸಿ - ಅಭಿನಂದಿಸಲಾಯಿತು. ಬಳ್ಳ
ಜಾರ್ಖಂಡ್ ಡಿಐಜಿ ವೈ.ಎಸ್. ರಮೇಶ್ ಅವರಿಗೆ ಬಳ್ಳಾರಿಯಲ್ಲಿ ಅಭಿನಂದನೆ


ಬಳ್ಳಾರಿ, 27 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಜಾರ್ಖಂಡ್ ರಾಜ್ಯದ ಗೃಹ ಇಲಾಖೆಯ ಡಿಐಜಿ ಆಗಿ ಬಡ್ತಿ ಪಡೆದಿರುವ ಐಪಿಎಸ್ ಅಧಿಕಾರಿ, ಬಳ್ಳಾರಿ ನಿವಾಸಿ ವೈ.ಎಸ್. ರಮೇಶ್ ಅವರವನ್ನು ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಲ್ಲಿ ಶನಿವಾರ ಸನ್ಮಾನಿಸಿ - ಅಭಿನಂದಿಸಲಾಯಿತು.

ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ ಅವ್ವಾರು ಮಂಜುನಾಥ್ ಮತ್ತು ಗೌರವ ಕಾರ್ಯದರ್ಶಿಗಳಾದ ಕೆ.ಸಿ. ಸುರೇಶಬಾಬು ಅವರು, ವೈ.ಎಸ್. ರಮೇಶ್ ಅವರು ಬಳ್ಳಾರಿಯಲ್ಲಿ ಹುಟ್ಟಿ ಬೆಳೆದು, ಜಾರ್ಖಂಡ್ ರಾಜ್ಯದಲ್ಲಿ ಎಸ್ಪಿಯಾಗಿ ಕರ್ತವ್ಯಕ್ಕೆ ಹಾಜರಾಗಿ ವಿವಿಧ ಹುದ್ದೆಗಳಲ್ಲಿ ಬಡ್ತಿಯನ್ನು ಪಡೆದು, ಈಗ ಡಿಐಜಿ ಆಗಿದ್ದಾರೆ. ವೈ.ಎಸ್. ರಮೇಶ್ ಅವರು ನಮ್ಮ ಬಳ್ಳಾರಿಯ, ಕರ್ನಾಟಕದ ಹೆಮ್ಮೆಯ ಪುತ್ರರಾಗಿದ್ದಾರೆ ಎಂದರು.

ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದ ಐಪಿಎಸ್ ಅಧಿಕಾರಿ ವೈ.ಎಸ್. ರಮೇಶ್ ಅವರು, ಐಪಿಎಸ್ ತೇರ್ಗಡೆ ಆದ ನಂತರ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯು ನೀಡಿದ ಅಭಿನಂದನೆಯನ್ನು ಸ್ವೀಕರಿಸಿದ್ದೆ. ಪ್ರಸ್ತುತ ಡಿಐಜಿಯಾಗಿ ಬಡ್ತಿ ಪಡೆದ ಮೇಲೆ ಈ ಸಂಸ್ಥೆ ನನ್ನನ್ನು ಗೌರವಿಸುತ್ತಿರುವುದು ಅಭಿಮಾನದ ಪ್ರತೀಕ ಎಂದರು.

ನಾನು, ಬಳ್ಳಾರಿಯವನಾಗಿ, ಕನ್ನಡಮ್ಮ – ಕರ್ನಾಟಕ ಮಾತೆಯ ಸೇವೆ ಸಲ್ಲಿಸಲು ಉತ್ಸುಕನಾಗಿದ್ದೇನೆ. ಬಳ್ಳಾರಿ ಜಿಲ್ಲೆಯ ಹಾಗೂ ಕರ್ನಾಟಕದ ವಿದ್ಯಾರ್ಥಿಗಿಗೆ ಯುಪಿಎಸ್‍ಇ ಪರೀಕ್ಷೆ ತೇರ್ಗಡೆಗೆ ಅಗತ್ಯವಾಗಿರುವ ಮಾರ್ಗದರ್ಶನ ನೀಡಲು ಉತ್ಸುಕನಾಗಿರುವೆ ಎಂದರು.

ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷರಾಗಿರುವ ಯಶವಂತರಾಜ್ ನಾಗಿರೆಡ್ಡಿ ಅವರು, ಸ್ಕಿಲ್ ಡೆವಪಲ್‍ಮೆಂಟ್ ಸಂಸ್ಥೆಯು ಏರ್ಪಡಿಸುವ ವಿದ್ಯಾರ್ಥಿ ಮಾರ್ಗದರ್ಶನ ಶಿಬಿರಕ್ಕೆ ಹಾಜರಾಗಬೇಕು ಎಂದು ಮನವಿ ಮಾಡಿದರು.

ಸಂಸ್ಥೆಯ ಹಿರಿಯ ಉಪಾಧ್ಯಕ್ಷರಾದ ಎಸ್. ದೊಡ್ಡನಗೌಡ, ಉಪಾಧ್ಯಕ್ಷರುಗಳಾದ ಸೊಂತ ಗಿರಿಧರ್, ಪಿ. ಪಾಲಣ್ಣ, ಜಂಟಿ ಕಾರ್ಯದರ್ಶಿಗಳಾದ ವಿ. ರಾಮಚಂದ್ರ, ಖಜಾಂಚಿಗಳಾದ ನಾಗಳ್ಳಿ ರಮೇಶ್, ನಿಕಟಪೂರ್ವ ಅಧ್ಯಕ್ಷರಾದ ಯಶವಂತ ರಾಜ್ ನಾಗಿರೆಡ್ಡಿ, ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ಉಪ ಸಮಿತಿಗಳ ಚೇರ್ಮನ್ ಗಳು, ವಿಶೇಷ ಆಹ್ವಾನಿತರು, ವಿಶೇಷ ಸಮನ್ವಯ ಸಮಿತಿ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande