
ದಾವಣಗೆರೆ, 27 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಕರ್ನಾಟಕ ನೀರಾವರಿ ನಿಗಮ ನಿಯಮಿತದ ವತಿಯಿಂದ ಕೈಗೊಳ್ಳಲಾಗಿರುವ ಡಿಬಿಕೆರೆ ಪಿಕಪ್ ಯೋಜನೆಯ ಬಲದಂಡೆ ನಾಲೆಯಲ್ಲಿ ಆಯ್ದ ಭಾಗಗಳಲ್ಲಿ ಹೂಳು ಹಾಗೂ ಜಂಗಲ್ ತೆರವು ಕಾರ್ಯ ಮತ್ತು ಒಡೆದುಹೋಗಿರುವ ರಿಲೀವಿಂಗ್ ವಿಯರ್ ರಿಪೇರಿ ಕಾಮಗಾರಿಗೆ ದಾವಣಗೆರೆ ಸಂಸದೆ ಪ್ರಭಾ ಮಲ್ಲಿಕಾರ್ಜುನ ಅವರು ಶನಿವಾರ ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸದೆ, ಕಾಮಗಾರಿ ಪೂರ್ಣಗೊಂಡ ಬಳಿಕ ನಾಲೆಯಲ್ಲಿ ನೀರು ಹರಿವು ಸರಾಗವಾಗಲಿದ್ದು, ರೈತರಿಗೆ ನೀರಾವರಿ ಸೌಲಭ್ಯ ಸುಗಮವಾಗಲಿದೆ ಎಂದು ಹೇಳಿದರು. ಜೊತೆಗೆ ನೀರು ನಷ್ಟವನ್ನು ತಡೆಯುವ ಮೂಲಕ ಕೃಷಿ ಉತ್ಪಾದನೆ ಹೆಚ್ಚಿಸಲು ಈ ಯೋಜನೆ ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದರು.
ಹೂಳು ಹಾಗೂ ಅಡಚಣೆಗಳ ತೆರವು ಕಾರ್ಯದಿಂದ ನಾಲೆಯ ಸಾಮರ್ಥ್ಯ ಹೆಚ್ಚಾಗಲಿದ್ದು, ತಾಂತ್ರಿಕವಾಗಿ ದುರ್ಬಲಗೊಂಡಿರುವ ರಿಲೀವಿಂಗ್ ವಿಯರ್‌ನ ದುರಸ್ತಿ ಕಾರ್ಯದಿಂದ ನೀರಿನ ನಿಯಂತ್ರಣ ಮತ್ತಷ್ಟು ಬಲಗೊಳ್ಳಲಿದೆ ಎಂದು ಅಧಿಕಾರಿಗಳು ವಿವರಿಸಿದರು.
ಕಾರ್ಯಕ್ರಮದಲ್ಲಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ರೈತರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa