ಜನವರಿ 4 ರಿಂದ 13ರವರೆಗೆ ವಿವೇಕ ಮಂಟಪ ಉಪನ್ಯಾಸ
ಬಳ್ಳಾರಿ, 26 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಸ್ವಾಮಿ ನಿರ್ಭಯಾನಂದ ಸರಸ್ವತಿ ಅವರ ‘ವಿವೇಕ ಮಂಟಪ - ಉಪನ್ಯಾಸ ಮಾಲಿಕೆ ವಿವೇಕ ಲೀಲಾಮೃತ’ ವು ಜನವರಿ 4 ರಿಂದ 13 ಜನವರಿರ ನಿತ್ಯ ಸಂಜೆ 5.45 ರಿಂದ 8.15 ರ ವರೆಗೆ ರಾಘವ ಕಲಾಮಂದಿರದಲ್ಲಿ ನಡೆಯಲಿದೆ. ವಿವೇಕತೋರಣದ ಸಂಯೋಜಕ ಪ್ರಭುದೇವ ಕ
ಜನವರಿ 4 ರಿಂದ 13ರವರೆಗೆ ವಿವೇಕ ಮಂಟಪ ಉಪನ್ಯಾಸ


ಬಳ್ಳಾರಿ, 26 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಸ್ವಾಮಿ ನಿರ್ಭಯಾನಂದ ಸರಸ್ವತಿ ಅವರ ‘ವಿವೇಕ ಮಂಟಪ - ಉಪನ್ಯಾಸ ಮಾಲಿಕೆ ವಿವೇಕ ಲೀಲಾಮೃತ’ ವು ಜನವರಿ 4 ರಿಂದ 13 ಜನವರಿರ ನಿತ್ಯ ಸಂಜೆ 5.45 ರಿಂದ 8.15 ರ ವರೆಗೆ ರಾಘವ ಕಲಾಮಂದಿರದಲ್ಲಿ ನಡೆಯಲಿದೆ.

ವಿವೇಕತೋರಣದ ಸಂಯೋಜಕ ಪ್ರಭುದೇವ ಕಪ್ಪಗಲ್ಲು ಹಾಗೂ ವಿವೇಕ ಮಂಟಪ-ಉಪನ್ಯಾಸ ಮಾಲಿಕೆ ಸ್ವಾಗತ ಸಮಿತಿಯ ಸಂಚಾಲಕರಾದ ಸಿಎ ಕೆ. ರಾಜಶೇಖರ ಮತ್ತು ಸಮಿತಿ ಸದಸ್ಯರಾದ ಸಿಎ ಸಿ. ಎರ್ರಿಸ್ವಾಮಿ ಅವರು ಶುಕ್ರವಾರ ಸುದ್ದಿಗಾರರಿಗೆ ಮಾಹಿತಿ ನೀಡಿದರು.

‘ಸ್ವಾಮಿ ವಿವೇಕಾನಂದ’, ‘ಗುರಿ ಸೇರುವವರೆಗೂ ವಿರಮಿಸದಿರಿ’ ಎಂಬ ದೃಢ ವಿಶ್ವಾಸ ಇನ್ನೂ ಈ ಭೂಮಿಯನ್ನು ಜಾಗೃತಗೊಳಿಸುತ್ತಿವೆ. ನಮ್ಮೆಲ್ಲರ ಬಾಳು ಅದೇ ಘನತೆಯಿಂದ ಬೆಳಕಾಗಿ ಅಷ್ಟೇ ಸರಳತೆಯಿಂದ ಅನಂತವಾಗಲೆಂಬ ಸದಾಶಯದೊಂದಿಗೆ ಬಳ್ಳಾರಿಯಲ್ಲಿ ಉಪನ್ಯಾಸ ಮಾಲೆ ನಡೆಯಲಿದೆ ಎಂದರು.

ಗದಗ ಮತ್ತು ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಆಶ್ರಮದ ಅಧ್ಯಕ್ಷರೂ, ಸರ್ವ ಸಮರ್ಪಿತರೂ ಹಾಗೂ ಪ್ರಖರ ವಾಗ್ಮೀಗಳೂ ಆಗಿರುವ ಪೂಜ್ಯ ಸ್ವಾಮಿ ನಿರ್ಭಯಾನಂದ ಸರಸ್ವತಿ ಅವರು `ಸ್ವಾಮಿ ವಿವೇಕಾನಂದ ಲೀಲಾಮೃತ’ದ ಉಪನ್ಯಾಸ ನೀಡಲಿದ್ದಾರೆ ಎಂದರು.

ಪ್ರತಿ ದಿನ ಸಂಜೆ ಭಕ್ತಿ ಸಂಗೀತ ಸೇವೆ ನಡೆಯಲಿದೆ. ಸುಮೇದಾನಂದ ಜಿ ಮಹಾರಾಜ, ಹೊಸಪೇಟೆ ಜಿಲ್ಲೆಯ ಹಿರಿಯ ಹಾಗೂ ಖ್ಯಾತ ಗಾಯಕರು, ಸಂಗೀತ ಕಲಾವಿದರುಗಳು ಭಕ್ತಿ ಸಂಗೀತ ಸೇವೆ ಸಲ್ಲಿಸಲಿದ್ದಾರೆ ಎಂದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande