ಶೈಕ್ಷಣಿಕ ಮತ್ತು ಡಿಜಿಟಲ್ ವೇದಿಕೆಗಳು ಅಗತ್ಯ : ಜಯರಾಜ್
ವಿಜಯಪುರ, 26 ಡಿಸೆಂಬರ್ (ಹಿ.ಸ.) : ಆ್ಯಂಕರ್ : ವಿಜಯಪುರ ನಗರದ ಪ್ರತಿಷ್ಠಿತ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ, ಚುನಾವಣೆ ಸಾಕ್ಷರತೆ ಕ್ಲಬ್ ವತಿಯಿಂದ ಸಮುದಾಯ ವೈದ್ಯಕೀಯ ವಿಭಾಗದ, ಎರಡನೆ ಮಹಡಿಯಲ್ಲಿ ಡೆಮಾಕ್ರಸಿ ರೂಮ್, ಡೆಮಾಕ್ರಸಿ ವಾಲ್ ಹಾಗೂ ಇಎಲ್‌ಸಿ ವೆಬ್‌ಪೇಜ್ ನ್ನು ಸಮಕುಲಾಧಿಪತಿ ಡಾ. ವ
ವೇದಿಕೆ


ವಿಜಯಪುರ, 26 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ವಿಜಯಪುರ ನಗರದ ಪ್ರತಿಷ್ಠಿತ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ, ಚುನಾವಣೆ ಸಾಕ್ಷರತೆ ಕ್ಲಬ್ ವತಿಯಿಂದ ಸಮುದಾಯ ವೈದ್ಯಕೀಯ ವಿಭಾಗದ, ಎರಡನೆ ಮಹಡಿಯಲ್ಲಿ ಡೆಮಾಕ್ರಸಿ ರೂಮ್, ಡೆಮಾಕ್ರಸಿ ವಾಲ್ ಹಾಗೂ ಇಎಲ್‌ಸಿ ವೆಬ್‌ಪೇಜ್ ನ್ನು ಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಪ್ರಜಾಪ್ರಭುತ್ವ ಮೌಲ್ಯಗಳನ್ನು ಬಲಪಡಿಸುವಲ್ಲಿ ಇಂಥ ಶೈಕ್ಷಣಿಕ ಮತ್ತು ಡಿಜಿಟಲ್ ವೇದಿಕೆಗಳು ಅಗತ್ಯವಾಗಿವೆ. ಡೆಮಾಕ್ರಸಿ ರೂಮ್ ಮತ್ತು ಡೆಮಾಕ್ರಸಿ ವಾಲ್‌ಗಳು ಭಾರತೀಯ ಚುನಾವಣೆ ವ್ಯವಸ್ಥೆ, ಸಂವಿಧಾನಾತ್ಮಕ ಮೌಲ್ಯಗಳು ಮತ್ತು ಮತದಾರರ ಕರ್ತವ್ಯಗಳ ಕುರಿತು ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶ ಹೊಂದಿವೆ. ಇವು ಪ್ರಜಾಪ್ರಭುತ್ವದ ಅರಿವು ಮತ್ತು ನಾಗರಿಕ ಹೊಣೆಗಾರಿಕೆಯನ್ನು ಬೆಳೆಸುವ ಶೈಕ್ಷಣಿಕ ವೇದಿಕೆಗಳಾಗಿ ಕಾರ್ಯ ನಿರ್ವಹಿಸಲಿವೆ ಎಂದು ತಿಳಿಸಿದರು.

ಚುನಾವಣೆ ಸಾಕ್ಷರತೆ ಕ್ಲಬ್ ನೋಡಲ್ ಅಧಿಕಾರಿ ಡಾ. ಸಂದೀಪ ಯಂಕಂಚಿ ಮಾತನಾಡಿ, ಸಾಕ್ಷರತೆ ಕ್ಲಬ್ ವತಿಯಿಂದ ಮತದಾರ ಜಾಗೃತಿ ಕಾರ್ಯಕ್ರಮಗಳು, ಶೈಕ್ಷಣಿಕ ಅಭಿಯಾನಗಳು, ವಿದ್ಯಾರ್ಥಿ ತೊಡಗಿಸಿಕೊಳ್ಳುವ ಚಟುವಟಿಕೆಗಳು ಹಾಗೂ ಸಮುದಾಯ ಸಂಪರ್ಕ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ. ಜವಾಬ್ದಾರಿಯುತ ನಾಗರಿಕರನ್ನು ರೂಪಿಸುವಲ್ಲಿ ಮತ್ತು ಪ್ರಜಾಸತ್ತಾತ್ಮಕ ಪ್ರಕ್ರಿಯೆಯಲ್ಲಿ ಸಕ್ರಿಯ ಭಾಗವಹಿಸುವಿಕೆಯನ್ನು ಉತ್ತೇಜಿಸುವಲ್ಲಿ ಇಎಲ್‌ಸಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ತಿಳಿಸಿದರು.

ಇದೇ ವೇಳೆ ಡೆಮಾಕ್ರಸಿ ರೂಮ್, ಡೆಮಾಕ್ರಸಿ ವಾಲ್ ಹಾಗೂ ವಿಶ್ವವಿದ್ಯಾಲಯದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾದ ಚುನಾವಣೆ ಸಾಕ್ಷರತೆ ಕ್ಲಬ್ ವೆಬ್‌ಪೇಜ್‌ಗೆ ಅಧಿಕೃತ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಅಲೈಡ ಹೆಲ್ತ್ ಸೈನ್ಸ ಡೀನ್ ಡಾ. ಎಸ್. ವಿ. ಪಾಟೀಲ, ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥೆ ಡಾ. ರೇಖಾ ಉದಗಿರಿ, ಇಎಲ್‌ಸಿ ಸಂಚಾಲಕ ಗಿರೀಶ ಬಿಸನಾಳ, ಡಾ. ಗುರುಶಾಂತಪ್ಪ ಎಸ್. ಕಡಕೊಳ, ಯೋಗಿನಿ ವಾಟ್ವೆ, ಲಾವಣ್ಯ ಕುಲಕರ್ಣಿ ಸೇರಿದಂತೆ ಡೀಮ್ಡ್ ವಿವಿ ಚುನಾವಣೆ ಸಾಕ್ಷರತೆ ಕ್ಲಬ್ ಸಂಚಾಲಕರು, ನಾನಾ ವಿಭಾಗಗಳ ಅಧ್ಯಾಪಕರು, ಎಲ್ಲಾ ಘಟಕ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ವಿವಿ ಸಿಬ್ಬಂದಿ ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande