ವ್ಯಾಟಿಕನ್ ನಗರದಲ್ಲಿ ಕ್ರಿಸ್‌ಮಸ್ ಸಂಭ್ರಮ
ವ್ಯಾಟಿಕನ್ ಸಿಟಿ, 25 ಡಿಸೆಂಬರ್(ಹಿ.ಸ.) : ಆ್ಯಂಕರ್ : ವ್ಯಾಟಿಕನ್ ನಗರದಲ್ಲಿ ಕ್ರಿಸ್‌ಮಸ್ ಹಬ್ಬವನ್ನು ಭಕ್ತಿಭಾವ ಮತ್ತು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಕ್ರಿಸ್‌ಮಸ್ ಹಬ್ಬದ ಮುನ್ನಾದಿನದಂದು ಪೋಪ್ ಲಿಯೋ XIV ಅವರು ನೀಡಿದ ಸಂದೇಶದಲ್ಲಿ, “ಕ್ರಿಸ್‌ಮಸ್ ದಾನ ಮತ್ತು ಭರವಸೆಯ ಹಬ್ಬ” ಎಂದು ಹೇಳಿದರು.
Vatican-City-Christmas


ವ್ಯಾಟಿಕನ್ ಸಿಟಿ, 25 ಡಿಸೆಂಬರ್(ಹಿ.ಸ.) :

ಆ್ಯಂಕರ್ : ವ್ಯಾಟಿಕನ್ ನಗರದಲ್ಲಿ ಕ್ರಿಸ್‌ಮಸ್ ಹಬ್ಬವನ್ನು ಭಕ್ತಿಭಾವ ಮತ್ತು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಕ್ರಿಸ್‌ಮಸ್ ಹಬ್ಬದ ಮುನ್ನಾದಿನದಂದು ಪೋಪ್ ಲಿಯೋ XIV ಅವರು ನೀಡಿದ ಸಂದೇಶದಲ್ಲಿ, “ಕ್ರಿಸ್‌ಮಸ್ ದಾನ ಮತ್ತು ಭರವಸೆಯ ಹಬ್ಬ” ಎಂದು ಹೇಳಿದರು. ಪವಿತ್ರ ಕ್ರಿಸ್‌ಮಸ್ ಬಲಿದಾನದ ಸಂತೋಷವನ್ನು ಘೋಷಿಸಿದ ಅವರು, ಕ್ರಿಸ್‌ಮಸ್ ಅನ್ನು ನಂಬಿಕೆ, ದಾನ ಮತ್ತು ಭರವಸೆಯ ಹಬ್ಬವಾಗಿ ಆಚರಿಸುವಂತೆ ವಿಶ್ವದ ಭಕ್ತರಿಗೆ ಕರೆ ನೀಡಿದರು.

ಸೇಂಟ್ ಪೀಟರ್ಸ್ ಬೆಸಿಲಿಕಾದಲ್ಲಿ ನಡೆದ ಮಧ್ಯರಾತ್ರಿ ಕ್ರಿಸ್‌ಮಸ್ ಪ್ರಾರ್ಥನೆಗೆ ಪೋಪ್ ಲಿಯೋ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಅವರು ಆಕಾಶದಲ್ಲಿ ಪ್ರಕಾಶಿಸುವ ನಕ್ಷತ್ರದ ಸಂಕೇತವನ್ನು ನೆನಪಿಸಿಕೊಂಡರು ಎಂದು ವ್ಯಾಟಿಕನ್ ನ್ಯೂಸ್ ವರದಿ ಮಾಡಿದೆ.

ಹೊಸಾಗಿ ಹೊತ್ತಿಕೊಂಡ ಕಿಡಿ ಆಕಾಶವನ್ನು ಬೆಳಗಿಸುತ್ತಿದೆ. ದೇವರು ಎಲ್ಲೆಡೆ ಇದ್ದಾನೆ. ಆ ನಕ್ಷತ್ರದ ಬೆಳಕು ಪ್ರತಿಯೊಂದು ಕತ್ತಲೆಯನ್ನು ದೂರಮಾಡುತ್ತದೆ,” ಎಂದು ಪೋಪ್ ಹೇಳಿದರು.

ಆ ನಕ್ಷತ್ರದ ಬೆಳಕಿನ ಮೂಲಕ ಮಾನವೀಯತೆ ಹೊಸ ಹಾಗೂ ಶಾಶ್ವತ ಜೀವನದ ಉದಯವನ್ನು ಕಾಣುತ್ತದೆ ಎಂದು ಅವರು ವಿವರಿಸಿದರು.

ಯೇಸುವಿನ ಆದರ್ಶಗಳಿಂದ ಪ್ರೇರಿತರಾಗಿ, ದುಷ್ಟತನದಿಂದ ಮುಕ್ತಿಯಾಗಲು ನಾವು ಪ್ರಾರ್ಥಿಸಬೇಕು ಎಂದು ಪೋಪ್ ಲಿಯೋ ಹೇಳಿದರು. ಶಿಶುಗಳನ್ನು ಕಾಳಜಿಯಿಂದ ನೋಡಿಕೊಳ್ಳುವಲ್ಲಿ ದೈವತ್ವದ ಅನುಭವ ಸಿಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ದೇವರು ಪ್ರತಿಯೊಬ್ಬ ಮನುಷ್ಯನಲ್ಲೂ ತನ್ನನ್ನು ತಾನು ಬಹಿರಂಗಪಡಿಸುತ್ತಾನೆ. ಪ್ರತಿಯೊಬ್ಬ ವ್ಯಕ್ತಿಯ ಅನಂತ ಘನತೆಯನ್ನು ದೇವರು ಪ್ರಕಟಿಸುತ್ತಾನೆ,” ಎಂದು ಪೋಪ್ ಒತ್ತಿ ಹೇಳಿದರು.

ಕ್ರಿಸ್ತನ ಹೃದಯದಲ್ಲಿ ಪ್ರೀತಿಯ ಬಂಧ ಸ್ಪಂದಿಸುತ್ತಿದ್ದು, ಅದು ಸ್ವರ್ಗ ಮತ್ತು ಭೂಮಿಯನ್ನು, ಸೃಷ್ಟಿಕರ್ತ ಮತ್ತು ಸೃಷ್ಟಿಯನ್ನು ಸಂಪರ್ಕಿಸುತ್ತದೆ ಎಂದು ಅವರು ವಿವರಿಸಿದರು. ಈ ಸತ್ಯವನ್ನು ಅರಿತುಕೊಳ್ಳಬೇಕೆಂದು ಪೋಪ್ ಹೇಳಿದರು.

ಈ ಸಂದರ್ಭದಲ್ಲಿ ಪೋಪ್ ಲಿಯೋ ಅವರು ಕಳೆದ ವರ್ಷದ ಕ್ರಿಸ್‌ಮಸ್ ಆಚರಣೆಗಳನ್ನು ನೆನಪಿಸಿಕೊಂಡರು. ಕಳೆದ ವರ್ಷ ಇದೇ ದಿನ ಪೋಪ್ ಫ್ರಾನ್ಸಿಸ್ ಅವರು ಜುಬಿಲಿ ವರ್ಷದ ಆರಂಭದ ಸೂಚಕವಾಗಿ ಸೇಂಟ್ ಪೀಟರ್ಸ್ ಬೆಸಿಲಿಕಾದ ಪವಿತ್ರ ದ್ವಾರವನ್ನು ತೆರೆದಿದ್ದರು ಎಂದು ಅವರು ಸ್ಮರಿಸಿದರು.

ಕೊನೆಯಲ್ಲಿ, ಪೋಪ್ ಲಿಯೋ ಅವರು ಕ್ರಿಸ್‌ಮಸ್‌ನ ಸಂತೋಷವನ್ನು ಎಲ್ಲರೊಂದಿಗೆ ಹಂಚಿಕೊಳ್ಳುವಂತೆ ಹಾಗೂ ಪ್ರೀತಿ, ಶಾಂತಿ ಮತ್ತು ಮಾನವೀಯತೆಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande