ಪದೇ ಪದೇ ಸಾಕು ಪ್ರಾಣಿಗಳ ಚಿರತೆ ದಾಳಿ - ಸೆರೆ ಹಿಡಿಯಲು ಗ್ರಾಮಸ್ಥರ ಒತ್ತಾಯ
ವಿಜಯಪುರ, 22 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಪದೇ ಪದೇ ಸಾಕು ಪ್ರಾಣಿಗಳ ಮೇಲೆ ಚಿರತೆ ದಾಳಿಯಿಂದ ವಿಜಯಪುರ ಜಿಲ್ಲೆಯ ಚಡಚಣ ತಾಲ್ಲೂಕಿನ ತದ್ದೇವಾಡಿ ಗ್ರಾಮದ ಜನರಲ್ಲಿ ಆತಂಕ ವಾತವಾರಣ ಸೃಷ್ಠಿಯಾಗಿದ್ದು, ಮತ್ತೆ ಭಾನುವಾರ ಚಿರತೆ ದಾಳಿಯಿಂದ ಮತ್ತೊಂದು ಜಾನುವಾರು ಕಳೆದುಕೊಂಡ ಘಟನೆ ನಡೆದಿದೆ. ತದ್ದೇವ
ಚಿರತೆ


ವಿಜಯಪುರ, 22 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಪದೇ ಪದೇ ಸಾಕು ಪ್ರಾಣಿಗಳ ಮೇಲೆ ಚಿರತೆ ದಾಳಿಯಿಂದ ವಿಜಯಪುರ ಜಿಲ್ಲೆಯ ಚಡಚಣ ತಾಲ್ಲೂಕಿನ ತದ್ದೇವಾಡಿ ಗ್ರಾಮದ ಜನರಲ್ಲಿ ಆತಂಕ ವಾತವಾರಣ ಸೃಷ್ಠಿಯಾಗಿದ್ದು, ಮತ್ತೆ ಭಾನುವಾರ ಚಿರತೆ ದಾಳಿಯಿಂದ ಮತ್ತೊಂದು ಜಾನುವಾರು ಕಳೆದುಕೊಂಡ ಘಟನೆ ನಡೆದಿದೆ.

ತದ್ದೇವಾಡಿ, ಮಣಕಂಲಗಿ ಗ್ರಾಮಗಳ ವ್ಯಾಪ್ತಿಯಲ್ಲಿ ಕಳೆದ ಬಹುದಿನಗಳಿಂದ ಚಿರತೆ ದಾಳಿಗೆ ಸಾಕು ಪ್ರಾಣಿಗಳು ಬಲಿಯಾಗುತ್ತಿದ್ದು, ಒಂದಾದ ಮೇಲೊಂದರಂತೆ ದನ, ಕರು, ಆಡು, ಕುರಿಗಳನ್ನು ಚಿರತೆ, ಕೊಂದು ಹಾಕುತ್ತಿರುವುದರಿಂದ ಈ ಭಾಗದ ಗ್ರಾಮಸ್ಥಗಳು ಆತಂಕಕ್ಕೊಳಗಾಗಿದ್ದಾರೆ.

ಪದೇ ಪದೇ ಸಾಕು ಪ್ರಾಣಿಗಳ ಮೇಲೆ ದಾಳಿಯಿಂದ ಜನ ಭಯಭೀತರಾಗಿದ್ದಾರೆ ಸಾಕಷ್ಟು ಬಾರಿ ಅಧಿಕಾರ ಗಮನಕ್ಕೆ ತರಲಾಗಿದೆ. ಇಲ್ಲಿಯವರಗೆ ಪತ್ತೆಯಾಗಿಲ್ಲ, ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಇನ್ನಾದರೂ ಅರಣ್ಯ ಇಲಾಖೆಯವರು ಚಿರತೆ ಸೆರೆ ಹಿಡಿಯಲು ಮುಂದಾಗಬೇಕು. ಇಲ್ಲಿಯವರಗೆ ಹಾನಿಯಾದ ರೈತರಿಗೆ ಪರಿಹಾರ ಒದಗಿಸಬೇಕು. ಇಲ್ಲವಾದರೆ ಮುಂದೆ ಹೋರಾಟ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ರೈತೋದಯ ಹಸಿರು ಸೇನೆ ರಾಜ್ಯ ಉಪಧ್ಯಕ್ಷ ಹಾಗೂ ಜಿಲ್ಲಾಧ್ಯಕ್ಷ ನಾಗನಾಥಗೌಡ ಬಿರಾದಾರ ಒತ್ತಾಯಿಸಿದ್ದಾರೆ.

ಇನ್ನು ಚಿರತೆ ಪತ್ತೆಗೆ ಇಲಾಖೆಯಿಂದ ತಂಡ ರಚನೆ ಮಾಡಲಾಗಿದೆ. ತದ್ದೇವಾಡಿ ಸುತ್ತ ಮುತ್ತಲಿನ ಪ್ರದೇಶದಲ್ಲಿ ಪತ್ತೆ ಹಚ್ಚಲು ಡ್ರೂನ್ ಕ್ಯಾಮೆರಾ ಕಾರ್ಯಾಚರಣೆ ನಡೆದಿದೆ. ಅದಷ್ಟು ಬೇಗ ಪತ್ತೆ ಹಚ್ಚಲಾಗುವುದು. ಹಾನಿಯಾದ ಜಾನುವಾರಗಳಿಗೆ ಪರಿಹಾರ ನೀಡಲಾಗುವುದು ಎಂದು ಇಂಡಿ ಅರಣ್ಯಾಧಿಕಾರಿ ಎಸ್. ಜಿ. ಸಂಗಲಕ ಮಾಹಿತಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande