ಜನರ ಆದಾಯ ಹೆಚ್ಚಾದಾಗ ದೇಶದ ಅಭಿವೃದ್ಧಿ : ಬಸವರಾಜ ಬೊಮ್ಮಾಯಿ
ಗದಗ, 21 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಭಾರತ ಬಹಳ ದೊಡ್ಡ ಪ್ರಮಾಣದಲ್ಲಿ ಬದಲಾವಣೆ ಆಗುತ್ತಿದೆ. ವಿಶ್ವದಲ್ಲಿ ಎಲ್ಲ ದೇಶಗಳಿಗಿಂತ ಹೆಚ್ಚು ಅಭಿವೃದ್ಧಿ ಆಗುತ್ತಿರುವುದು ಭಾರತ. ಅಮೇರಿಕ 2%, ಜಪಾನ್ 4%, ಚೀನಾ 5% ರಷ್ಟು ಅಭಿವೃದ್ಧಿಯಾದರೆ ಭಾರತ 8% ರಷ್ಟು ಅಭಿವೃದ್ಧಿಯಾಗುತ್ತಿದೆ ಎಂದು ಮಾಜಿ ಮುಖ್ಯಮ
ಜನರ ಆದಾಯ ಹೆಚ್ಚಾದಾಗ ದೇಶದ ಅಭಿವೃದ್ಧಿ : ಬಸವರಾಜ ಬೊಮ್ಮಾಯಿ


ಗದಗ, 21 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಭಾರತ ಬಹಳ ದೊಡ್ಡ ಪ್ರಮಾಣದಲ್ಲಿ ಬದಲಾವಣೆ ಆಗುತ್ತಿದೆ. ವಿಶ್ವದಲ್ಲಿ ಎಲ್ಲ ದೇಶಗಳಿಗಿಂತ ಹೆಚ್ಚು ಅಭಿವೃದ್ಧಿ ಆಗುತ್ತಿರುವುದು ಭಾರತ. ಅಮೇರಿಕ 2%, ಜಪಾನ್ 4%, ಚೀನಾ 5% ರಷ್ಟು ಅಭಿವೃದ್ಧಿಯಾದರೆ ಭಾರತ 8% ರಷ್ಟು ಅಭಿವೃದ್ಧಿಯಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಇಂದು ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಛಬ್ಬಿ ಗ್ರಾಮದಲ್ಲಿ ನೂತನ ಶ್ರೀ ಗುರು ಶ್ರೀನಿವಾಸ ಪೆಟ್ರೋಲಿಯಂ ಘಟಕದ ಪ್ರಾರಂಭೋತ್ಸವ ಹಾಗೂ ಸಮಗ್ರ ರೈತ ಸಂಘಟನೆಗಳ ಒಕ್ಕೂಟದ ರೈತರಿಗೆ ಮತ್ತು ನಿವೃತ್ತ ಯೋಧರಿಗೆ ಏರ್ಪಡಿಸಿದ ಸನ್ಮಾನ ಕಾರ್ಯಕ್ರಮದ ಉದ್ಘಾಟನೆ ನೇರವೇರಿಸಿ ಮಾತನಾಡಿದರು.

ಭಾರತ ಹಳ್ಳಿಗಳ ದೇಶ, ಹಳ್ಳಿಗಳ ಅಭಿವೃದ್ಧಿಯಾದಾಗ ದೇಶ ಅಭಿವೃದ್ಧಿಯಾಗುತ್ತದೆ. ಅಭಿವೃದ್ಧಿಯಲ್ಲಿ ಎರಡು ವಿಧ ಇದೆ. ಒಂದು ಆರ್ಥಿಕವಾಗಿ ಹಣಕಾಸಿನ ಅಭಿವೃದ್ಧಿ ಆಗಿ ಸರ್ಕಾರಗಳು ಹೆಚ್ಚಿನ ಆದಾಯ ಪಡೆದುಕೊಳ್ಳುವುದು. ಇದು ನಿಜವಾದ ಅಭಿವೃದಿಯಲ್ಲ. ಜನರ ಆದಾಯ, ಆರ್ಥಿಕತೆ ಹೆಚ್ಚಾದಾಗ ದೇಶ ಅಭಿವೃದ್ಧಿಯಾಗುತ್ತದೆ, ಜನರ ಆದಾಯ ಹೆಚ್ಚಾಗಬೇಕಾ, ಸರ್ಕಾರದ ಆದಾಯ ಹೆಚ್ಚಾಗಬೇಕಾ ಎನ್ನುವುದು ಪ್ರಶ್ನೆ. ಜನರ ಆದಾಯ ಹೆಚ್ಚಾದಾಗ ಅದು ದೇಶದ ಅಭಿವೃದ್ಧಿಗೆ ಬಳಕೆ ಆಗುತ್ತದೆ. ಇದರಲ್ಲಿ ರಸ್ತೆಗಳ ನಿರ್ಮಾಣ ಬಹಳ ಮುಖ್ಯ ಮೊದಲು ಭಾರತ ವಿದೇಶಗಳ ಪಟೋಲಿಯಂ ಉತ್ಪನ್ನಗಳ ಮೇಲೆ ಬಹಳ ಅವಲಂಬಿತ ಆಗಿತ್ತು. ಈಗ ಸೂರ್ಯ, ಗಾಳಿಯಿಂದ ವಿದ್ಯುತ್ ಬರುತ್ತಿದೆ. ಆದರೂ ಕೂಡ ರೋಡ್ ಟಾನ್‌ಫೋಟ್, ಬಸ್, ಟ್ರಕ್‌ಗಳಿಗೆ ಡಿಸೇಲ್, ಪೆಟ್ರೋಲ್ ಬಂಕ್‌ ಗಳ ಅವಲಂಬಿತವಾಗಿವೆ. ಹೀಗಾಗಿ ಹಳ್ಳಿಗಳಿಗೂ ಪೆಟ್ರೋಲ್, ಡಿಸೇಲ್ ಬಂಕ್‌ ಗಳು ಬರುತ್ತಿವೆ. ಈಗ ಬದಲಾವಣೆಯಾಗಿದೆ. ಅದಕ್ಕೆ ಅನುಗುಣವಾಗಿ ಹೊನ್ನಪ್ಪ ಕೇಂದ್ರ ಸರ್ಕಾರ ಸ್ವಾಮ್ಯದ ಐಒಸಿ ಪ್ರಾರಂಭ ಮಾಡಿ ಎಲ್ಲ ರೈತರು, ಜನ ಸಾಮಾನ್ಯರು, ಟ್ರ್ಯಾಕ್ಟರ್, ಗಾಡಿಗಳಿಗೆ ಅನುಕೂಲವಾಗುವಂತೆ ಮಾಡಿದ್ದಾರೆ. ಅವರಿಗೆ ಅಭಿನಂದನೆಗಳು ಎಂದು ಹೇಳಿದರು.

ಕೇಂದ್ರ ಸರ್ಕಾರದಲ್ಲಿ ಎಸ್ಸಿ ಎಸ್ಟಿ ಜನಾಂಗಕ್ಕೆ ವಿಶೇಷ ಸೌಲಭ್ಯ ಕಲಿಸುವ ಯೋಜನೆ ಇದೆ. ಅದರ ಅಡಿಯಲ್ಲಿ ಪೆಟ್ರೋಲ್ ಬಂಕ್ ತೆರೆದಿದ್ದಾರೆ. ರೈತರಿಗಾಗಿ ಕಿಸಾನ್ ಸಮ್ಮಾನ್ ಯೋಜನೆ, ರಸಗೊಬ್ಬರಕ್ಕೆ ಸಬ್ಸಿಡಿ, ಪ್ರಧಾನ ಮಂತ್ರಿ ಆವಾಸ್, ಪ್ರಧಾನ ಮಂತ್ರಿ ರಸ್ತೆ ಯೋಜನೆ ಮಾಡಿದ್ದಾರೆ. ಪಿಎಂ ಗತಿ ಶಕ್ತಿ ಯೋಜನೆ ಅಡಿ ಲಕ್ಷ್ಮೀಶ್ವರ ಗದಗ ರಸ್ತೆಯನ್ನು ಅಭಿವೃದ್ಧಿ ಮಾಡಲು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಮಾತನಾಡಿದ್ದೇನೆ. ಅವರು ಇದೇ ವರ್ಷ ಕೈಗೆತ್ತಿಕೊಳ್ಳುವುದಾಗಿ ಹೇಳಿದ್ದಾರೆ. ಈ ಪೆಟ್ರೋಲ್ ಬಂಕ್ ಮೂಲಕ ಈ ಭಾಗದಲ್ಲಿ ವಾಣಿಜ್ಯ ಚಟುವಟಿಕೆಗಳು ನಡೆಯಲಿ, ಹಿಂದುಳಿದ ಶಿರಹಟ್ಟಿ ತಾಲೂಕು ಅಭಿವೃದ್ಧಿಗೆ ಪೂರಕವಾಗಲಿ ಎಂದು ಹೇಳಿದರು.

ಜಗದ್ಗುರು ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಯವರು ಸಣ್ಣ ವಯಸ್ಸಿನಲ್ಲಿ ಬಹಳಷ್ಟು ಜ್ಞಾನ ಪಡೆದುಕೊಂಡು ರಾಜ್ಯದ ಅಭಿವೃದ್ಧಿ ಬಗ್ಗೆ ಪ್ರೀತಿಯಿಂದ ಕೆಲಸ ಮಾಡುತ್ತಾರೆ. ಅವರ ಪ್ರಭಾವ ಬಹಳ ದೊಡ್ಡ ಪ್ರಮಾಣದಲ್ಲಿ ಇದೆ. ಎಲ್ಲ ವರ್ಗದಲ್ಲಿ ಅವರಿಗೆ ಭಕ್ತರ ಬಳಗ ಇದೆ. ಮುಂದೆ ದೊಡ್ಡ ಸಾಧನೆ ಮಾಡುವ ಅವಕಾಶ ಸ್ವಾಮೀಜಿಗೆ ಇದೆ. ಸ್ವಾಮೀಜಿ ಬಗ್ಗೆ ನನಗೆ ಅಪಾರ ಭಕ್ತಿ ಇದೆ. ಕುಂದಗೋಳದ ಅಭಿನವ ಬಸವ ಸ್ವಾಮೀಜಿ ಅತ್ಯಂತ ಸರಳವಾಗಿರುವ ಗುರುಗಳು. ಈ ಭಾಗದಲ್ಲಿ ಪೆಟ್ರೋಲ್ ಬಂಕ್ ಆರಂಭಿಸಿರುವುದು ಬಹಳ ಒಳ್ಳೆಯ ಕೆಲಸ ಒಳ್ಳೆಯ ರೀತಿಯಲ್ಲಿ ಆಗಿದೆ ಎಂದು ಹೇಳಿದರು.

ಈ ಸಮಾರಂಭದಲ್ಲಿ ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಮಹಾಸ್ವಾಮಿಗಳು ಭೋವಿ ಪೀಠ, ಚಿತ್ರದುರ್ಗ ಹಾಗೂ ಶ್ರೀ ಮ.ನಿ.ಪ್ರ ಅಭಿನವ ಬಸವಣ್ಣಜ್ಜ ಮಹಾಸ್ವಾಮಿಗಳು ಕಲ್ಯಾಣಪುರ ಮಠ, ಕುಂದಗೋಳ ಉಭಯ ಶ್ರೀಗಳು ಸಾನಿಧ್ಯ ವಹಿಸಿದ್ದರು.

ಮಾಜಿ ಶಾಸಕರಾದ ರಾಮಣ್ಣ ಲಮಾಣಿ, ಭಾರತೀಯ ಜನತಾ ಪಕ್ಷದ ಜಿಲ್ಲಾಧ್ಯಕ್ಷರಾದ ರಾಜು ಕುರಡಗಿ, ಮುಖಂಡರಾದ ಶಿವಪ್ರಕಾಶ ಮಹಾಜನಶೆಟ್ಟರ, ಕರಬಸಪ್ಪ ಹಂಚಿನಾಳ, ಹುಮಾಯೂನ್ ಮಾಗಡಿ, ಎಂ.ಎಸ್ ದೊಡ್ಡಗೌಡ್ರ, ಅಶೋಕ ನವಲಗುಂದ, ಮಂಜುನಾಥ ಮಾಗಡಿ, ಮಾಲಕರಾದ ಹೊನ್ನಪ್ಪ ವಡ್ಡರ ಸೇರಿದಂತೆ ಹಲವಾರು ಪ್ರಮುಖರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande