ಬಳ್ಳಾರಿ : ಶ್ರೀಗುರು ಶ್ರೀಶವಿಠಲ ದಾಸರ ಆರಾಧನೆ
ಬಳ್ಳಾರಿ, 21 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಬಳ್ಳಾರಿಯ ಭುವನ ಸಂಗೀತ ವಿದ್ಯಾಲಯ ಟ್ರಸ್ಟ್ ಬಳ್ಳಾರಿ ಹಾಗೂ ಕನ್ನಡ ಸಂಸ್ಕøತಿ ಇಲಾಖೆ ಆಶ್ರಯದಲ್ಲಿ ಶ್ರೀಗುರು ಶ್ರೀಶವಿಠಲ ದಾಸರ ಆರಾಧನೆಯನ್ನು ನೆರವೇರಿಸಲಾಯಿತು. ಆರಾಧನೆ ನಿಮಿತ್ತ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಿತು. ಧಾರವ
ಬಳ್ಳಾರಿ : ಶ್ರೀಗುರು ಶ್ರೀಶವಿಠಲ ದಾಸರ ಆರಾಧನೆ


ಬಳ್ಳಾರಿ, 21 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಬಳ್ಳಾರಿಯ ಭುವನ ಸಂಗೀತ ವಿದ್ಯಾಲಯ ಟ್ರಸ್ಟ್ ಬಳ್ಳಾರಿ ಹಾಗೂ ಕನ್ನಡ ಸಂಸ್ಕøತಿ ಇಲಾಖೆ ಆಶ್ರಯದಲ್ಲಿ ಶ್ರೀಗುರು ಶ್ರೀಶವಿಠಲ ದಾಸರ ಆರಾಧನೆಯನ್ನು ನೆರವೇರಿಸಲಾಯಿತು.

ಆರಾಧನೆ ನಿಮಿತ್ತ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಿತು. ಧಾರವಾಡದ ಕಲಾವಿದರಾದ ವಿಜಯಕುಮಾರ್ ಪಾಟೀಲ್ ಅವರು, ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಹಾಗೂ ದಾಸವಾಣಿ ಕಾರ್ಯಕ್ರಮ ಪ್ರಸ್ತುತಪಡಿಸಿದರು.

ಆಕಾಶ್ ಪಾಟೀಲ್ ಅವರು ತಬಲಾ, ಸತೀಶ್ ಭಟ್ ಹೆಬ್ಬಾರ್ ಹಾರ್ಮೋನಿಯಂ, ವಾದಿರಾಜ್ ತಾಳ ಸಾಥ್ ನೀಡಿದರು.

ಶ್ರೀಗುರು ಶ್ರೀಶವಿಠಲ ದಾಸರ ಆರಾಧನೆ ನಿಮಿತ್ತ ವಿಶೇಷ ಪೂಜೆ, ಅರ್ಚನೆ, ನೈವೇದ್ಯ, ಮಹಾಮಂಗಳಾರತಿ, ದಾಸರ ತಂಬೂರಿಗೆ ವಿಶೇಷ ಅಲಂಕಾರ ಸೇರಿದಂತೆ ವಿವಿಧ ಪೂಜೆಗಳು ವಿಜೃಂಭಣೆಯಿಂದ ನಡೆದವು.

ರಾಘವೇಂದ್ರ ಕುಷ್ಟಗಿ, ಶೇಷಗಿರಿರಾವ್ ಕುಲಕರ್ಣಿ, ಜಯತೀರ್ಥ ಜಹಗಿರದಾರ್, ನಿವೃತ್ತ ಎಎಸ್ ಐ ಭೀಮನಗೌಡ, ನಿವೃತ್ತ ಪಿಎಸ್‍ಐ ಪಿ. ಹುಸೇನ್‍ಸಾಬ್ ಸೇರಿದಂತೆ ಇನ್ನಿತರರು ಈ ಸಂದರ್ಭದಲ್ಲಿದ್ದರು. ಟಿ.ಗುರುರಾಜ್ ಆಚಾರ ಜಹಗಿರದಾರ್ ಅವರು ಕಾರ್ಯಕ್ರಮ ನಿರೂಪಿಸಿದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande