ವಿಶ್ವಕರ್ಮರು ಪಂಚಕಸಬುಗಳಲ್ಲಿ ತಂತ್ರಜ್ಞಾನ ಅಳವಡಿಸಿಕೊಳ್ಳಿ : ಸುಜ್ಞಾನಮೂರ್ತಿ
ಗದಗ, 21 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಸಾಮಾಜಿಕ ಜೀವನಕ್ಕೆ ಅತ್ಯಂತ ಪೂರಕವಾದ ವಿಶ್ವಕರ್ಮ ಸಮಾಜದ ಪಂಚ ಕಸಬುಗಳು ಪಾರಂಪರಿಕತೆಯಿಂದ ಕೂಡಿದ್ದು, ಇಂದಿನ ಆಧುನಿಕತೆಗೆ ತಕ್ಕಂತೆ ತಂತ್ರಜ್ಞಾನ, ಕಂಪ್ಯೂಟರ್ ಡಿಜೈನ್‍ಗಳನ್ನು ಅಳವಡಿಸಿಕೊಳ್ಳುವ ಮೂಲಕ ಕಸಬುಗಳಲ್ಲಿ ತಂತ್ರಜ್ಞಾನ ಬಳಸಿಕೊಂಡು ಸಮಾಜ ಬಾಂಧವರು
ಫೋಟೋ


ಗದಗ, 21 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಸಾಮಾಜಿಕ ಜೀವನಕ್ಕೆ ಅತ್ಯಂತ ಪೂರಕವಾದ ವಿಶ್ವಕರ್ಮ ಸಮಾಜದ ಪಂಚ ಕಸಬುಗಳು ಪಾರಂಪರಿಕತೆಯಿಂದ ಕೂಡಿದ್ದು, ಇಂದಿನ ಆಧುನಿಕತೆಗೆ ತಕ್ಕಂತೆ ತಂತ್ರಜ್ಞಾನ, ಕಂಪ್ಯೂಟರ್ ಡಿಜೈನ್‍ಗಳನ್ನು ಅಳವಡಿಸಿಕೊಳ್ಳುವ ಮೂಲಕ ಕಸಬುಗಳಲ್ಲಿ ತಂತ್ರಜ್ಞಾನ ಬಳಸಿಕೊಂಡು ಸಮಾಜ ಬಾಂಧವರು ಆರ್ಥಿಕ ಪ್ರಗತಿಸಾಧಿಸುವತ್ತ ಮುಂದಡಿ ಇಡಬೇಕು ಎಂದು ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಸುಜ್ಞಾನಮೂರ್ತಿ ಪಿ. ಹೇಳಿದರು.

ಗದಗ ನಗರದ ವಿಶ್ವಕರ್ಮ ಸಮುದಾಯ ಭವನದಲ್ಲಿ ಗದಗ ಜಿಲ್ಲಾ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಅಂಗ ಸಂಸ್ಥೆಗಳ ವತಿಯಿಂದ ರವಿವಾರ ನಗರದ ವಿಜಯನಗರ ಬಡಾವಣೆಯ ವಿಶ್ವಕರ್ಮ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ 2026 ರ ದಿನದರ್ಶಿಕೆ ಬಡುಗಡೆ ಹಾಗೂ ಸನ್ಮಾನ ಸಮಾರಂಭದ ಅತಿಥಿಯಾಗಿ ಪಾಲ್ಗೊಂಡು, ಸನ್ಮಾನ ಸ್ವೀಕರಿಸಿ ಮಾತನಾಡಿ, ರಾಜ್ಯ ಹಾಗೂ ಕೇಂದ್ರ ಸರ್ಕಾಗಳು ಹಿಂದುಳಿದವರಿಗಾಗಿ ಅನೇಕ ಯೋಜನೆಗಳನ್ನು ಜಾರಿಗೊಳಸಿವೆ. ವಿಶ್ವಕರ್ಮ ಅಭಿವೃದ್ಧಿ ನಿಗಮ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳ ಮಾಹಿತಿ ಪಡೆದು ಸಮಾಜ ಬಾಂಧವರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಸಮಾರಂಭ ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಪ್ರೊ. ಎಸ್. ವಿ. ಸಂಕನೂರ ಅವರು ಮಾತನಾಡಿ, ಭಾರತೀಯ ಸಂಸ್ಕೃತಿ, ಪರಂಪರೆ, ಸಂಸ್ಕಾರಗಳನ್ನು ಉಳಿಸಿ ಬೆಳೆಸುವಲ್ಲಿ ವಿಶ್ಕರ್ಮರ ಪಾತ್ರ ಅತ್ಯಂತ ಹಿರಿದಾಗಿದೆ. ಇಂದಿನ 21 ನೇ ಶತಮಾನ ಜ್ಞಾನ, ವಿದ್ಯೆ, ಕೌಶಲ್ಯಗಳ ಯುಗವಾಗಿದ್ದು, ಆರ್ಥಿಕವಾಗಿ, ಸಾಮಾಜೀಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಹಿಂದುಳಿದಿರುವ ವಿಶ್ವಕರ್ಮ ಸಮಾಜ ಬಾಂಧವರು ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಬೇಕು. ಶಿಕ್ಷಣವೇ ಇಂದಿನ ಶ್ರೇಷ್ಠ ಶಿರಿವಂತಿಕೆಯಾಗಿದೆ ಎಂದು ತಿಳಿಸಿದರು.

ವಿಶ್ವಕರ್ಮ ಸುಮುದಾಯಗಳ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರಾದ ಬಾಬು ಪತ್ತಾರ ಮಾತನಾಡಿ, ಇತ್ತೀಚೆಗೆ ವಿಶ್ವಕರ್ಮ ಸಮುದಾಯ ಸಮರ್ಥವಾಗಿ ಸಂಘಟಿತವಾಗುತ್ತಿದ್ದು, ಇದರೊಟ್ಟಿಗೆ ರಾಜಕೀಯ ಕ್ಷೇತ್ರದಲ್ಲಿ ಕೂಡಾ ಛಾಪು ಮೂಡಿಸುತ್ತ ಸಾಗಬೇಕು. ಎಲ್ಲ ರಂಗಗಳಲ್ಲಿಯೂ ನಾವು ಮುಂದೆ ಬರಬೇಕು ಎಂದು ಹೇಳಿದರು.

ಅಧ್ಯಕ್ಷತೆವಹಿಸಿದ್ದ ಗದಗ ಜಿಲ್ಲಾ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ರಾಜಗೋಪಾಲ ಡಿ. ಕಡ್ಲಿಕೊಪ್ಪ ಅವರು ಮಾತನಾಡಿ, ಮುಂಬರುವ ಸಂಘದ ದಶಮಾನೋತ್ಸವ ಆಚರಣೆಗೆ ಸರ್ವರೂ ಸಹಕಾರ ನೀಡಬೇಕು. ಜಿಲ್ಲೆಯ ಪ್ರತಿಯೊಂದು ವಿಶ್ವಕರ್ಮ ಸಮಾಜದ ಮನೆ ಮನೆಗಳಿಗೆ 2026 ರ ದಿನದರ್ಶಿಕೆಯನ್ನು ಉಚಿತವಾಗಿ ವಿತರಿಸಲಾಗುವುದು ಎಂದರು.

ಕರ್ನಾಟಕ ರಾಜ್ಯ ವಿಶ್ವಕರ್ಮ ಸಮಾಜ ಬೆಂಗಳೂರು ಇದರ ಅಧ್ಯಕ್ಷರಾದ ಈಶ್ವರಾಚಾರ್ಯ ಎಂ. ಪಿ., ನೌಕರರ ಸಂಘದ ನಿರ್ದೇಶಕರಾದ ಬಿ. ಎಂ. ಬಡಿಗೇರ ಸಮಾರಂಭ ಉದ್ದೇಶಿಸಿ ಮಾತನಾಡಿದರು.

2025 ರ ರಾಷ್ಟ್ರ ಹಾಗೂ 2014 ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಚಂದ್ರಶೇಖರ ವಾಯ್. ಶಿಲ್ಪಿ ಕಲಬುರ್ಗಿ ಹಾಗೂ 2025 ರ ಬಾಗಲಕೋಟಿಯ ನಾಗಲಿಂಗಪ್ಪ ಗಂಗೂರ, ಮತ್ತು ಗದಗ ಶ್ರೀಕಾಳಿಕಾದೇವಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷರಾದ ಉಮೇಶ ಕೆ. ಅರ್ಕಸಾಲಿ, ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಚುನಾವಣೆಯಲ್ಲಿ ಜಯಗಳಿಸಿದ ಪತ್ರಕರ್ತ ಮೌನೇಶ ಸಿ. ಬಡಿಗೇರ(ನರೇಗಲ್ಲ), ಸುವರ್ಣ ಟಿವಿ ವರದಿಗಾರ ಗಿರೀಶ ಕಮ್ಮಾರ ಮತ್ತು ಅರ್. ಕನ್ನಡ ಟಿವಿ ವರದಿಗಾರ ಮಂಜುನಾಥ ಪತ್ತಾರ ಇವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ವರವಿ ಕ್ಷೇತ್ರದ ಶ್ರೀಮೌನೇಶ್ವರ ದೇವಸ್ಥಾನ ಹಾಗೂ ಮಠದ ವಿಕಾಸ ಟ್ರಸ್ಟ್ ಕಮೀಟಿ ಅಧ್ಯಕ್ಷರಾದ ಮೋಹನ ನರಗುಂದ, ಗೌರವಾಧ್ಯಕ್ಷರಾದ ಎ. ಎನ್.ಬಡಿಗೇರ, ನಿರ್ದೇಶಕರಾದ ಬಿ. ಎಮ್. ಬಡಿಗೇರ, ಪ್ರಮುಖರಾದ ಮೌನೇಶ ಅರ್ಕಸಾಲಿ, ಶ್ರೀಧರ ಕೊಣ್ಣೂರ, ಕೆ. ಎಸ್. ಬಡಿಗೇರ, ಶ್ರೀಮತಿ ರಿಂದಮ್ಮ ಬಡಿಗೇರ, ಶ್ರೀಮತಿ ಶಿವಲೀಲಾ ಕೆ. ಬಡಿಗೇರ, ಪ್ರಧಾನ ಕಾರ್ಯದರ್ಶಿ ಸಿ. ವಿ. ಬಡಿಗೇರ ಉಪಸ್ಥಿತರಿದ್ದರು.

ಕೊಪ್ಪಳದ ಎಸ್. ಎನ್. ಬಡಿಗೇರ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಖ. ಎಸ್. ಬಡಿಗೇರ ಸ್ವಾಗತಿಸಿದರು. ಶ್ರೀಮತಿ ಸುಮಂಗಲಾ ಪತ್ತಾರ ಕಾರ್ಯಕ್ರಮ ನಿರೂಪಿಸಿದರು. ಆರ್. ಎಮ್. ಬಡಿಗೇರ ವಂದಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲೆಯ ಸಮಸ್ತ ವಿಶ್ವಕರ್ಮ ಸಮಾಜ ಬಾಂಧವರು ಪಾಲ್ಗೊಂಡಿದ್ದರು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande