ರಾಯಚೂರು : ಎರಡು ಹನಿ ಮಗುವಿನ ಭವಿಷ್ಯಕ್ಕೆ ಶ್ರೀರಕ್ಷೆ- ಎನ್. ಎಸ್. ಬೋರಾಜು
ರಾಯಚೂರು, 21 ಡಿಸೆಂಬರ್ (ಹಿ.ಸ.) : ಆ್ಯಂಕರ್ : ರಾಷ್ಟ್ರೀಯ ಪಲ್ಸ್ ಪೋಲಿಯೋ-2025 ದಿನದ ಅಂಗವಾಗಿ ರಾಯಚೂರು ಜಿಲ್ಲಾ ಮಾನವ ಹಕ್ಕುಗಳ ಸಂಘಟನೆ ವತಿಯಿಂದ ಆಯೋಜಿಸಿದ ಫಲಸ್ ಪೋಲಿಯೋ ಜಾಗೃತಿ ಕಾರ್ಯಕ್ರಮದಲ್ಲಿ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವರಾದ ಎನ್ ಎಸ್ ಬೋಸರಾಜು ಅ
ರಾಯಚೂರು : ಎರಡು ಹನಿ ಮಗುವಿನ ಭವಿಷ್ಯಕ್ಕೆ ಶ್ರೀರಕ್ಷೆ- ಎನ್ ಎಸ್ ಬೋರಾಜು


ರಾಯಚೂರು : ಎರಡು ಹನಿ ಮಗುವಿನ ಭವಿಷ್ಯಕ್ಕೆ ಶ್ರೀರಕ್ಷೆ- ಎನ್ ಎಸ್ ಬೋರಾಜು


ರಾಯಚೂರು, 21 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ರಾಷ್ಟ್ರೀಯ ಪಲ್ಸ್ ಪೋಲಿಯೋ-2025 ದಿನದ ಅಂಗವಾಗಿ ರಾಯಚೂರು ಜಿಲ್ಲಾ ಮಾನವ ಹಕ್ಕುಗಳ ಸಂಘಟನೆ ವತಿಯಿಂದ ಆಯೋಜಿಸಿದ ಫಲಸ್ ಪೋಲಿಯೋ ಜಾಗೃತಿ ಕಾರ್ಯಕ್ರಮದಲ್ಲಿ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವರಾದ ಎನ್ ಎಸ್ ಬೋಸರಾಜು ಅವರು ಹಾಗೂ ರಾಯಚೂರು ಲೋಕಸಭಾ ಸದಸ್ಯರಾದ ಜಿ ಕುಮಾರ ನಾಯಕ ಅವರು ಭಾಗವಹಿಸಿ ಪೋಲಿಯೋ ಮಹತ್ವದ ಕುರಿತು ಮಾತನಾಡಿದರು.

ದೇಶವನ್ನು ಸಂಪೂರ್ಣವಾಗಿ ಪೋಲಿಯೋ ಮುಕ್ತವನ್ನಾಗಿಸುವ ಮಹತ್ವಾಕಾಂಕ್ಷೆಯೊಂದಿಗೆ ಕರ್ನಾಟಕದಾದ್ಯಂತ ಇಂದಿನಿಂದ ಪ್ರಾರಂಭಿಸಲಾಗಿದೆ 5 ವರ್ಷದ ಎಲ್ಲಾರಿಗೂ ಪಲ್ಸ್ ಪೋಲಿಯೋ ಲಸಿಕೆ ಹಾಕಿಸಬೇಕು.

ಪೋಲಿಯೋ ಎಂಬುದು ಅತ್ಯಂತ ಭೀಕರ ರೋಗವಾಗಿದ್ದು, ಇದು ಬಾಧಿತ ಮಕ್ಕಳಲ್ಲಿ ಶಾಶ್ವತ ಅಂಗವೈಕಲ್ಯವನ್ನು ಉಂಟುಮಾಡುತ್ತದೆ. ಆದರೆ, ಲಸಿಕೆಯ ಮೂಲಕ ಇದನ್ನು 100% ತಡೆಗಟ್ಟಲು ಸಾಧ್ಯವಿದೆ. ಎರಡು ಹನಿ ಲಸಿಕೆ ನಿಮ್ಮ ಮಗುವಿನ ಭವಿಷ್ಯಕ್ಕೆ ರಕ್ಷಣೆಯಾಗಿದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ನಿತಿಶ್ ಕೆ, ಮಹಾನಗರ ಪಾಲಿಕೆಯ ಆಯುಕ್ತರಾದ ಜುಬೇನ್ ಮಹಾಪತ್ರ ಜಿಲಾ ಆರೋಗ್ಯ ಅಧಿಕಾರಿಗಳಾದ ಸುರೇಂದ್ರ ಬಾಬು, ಜಯಣ್ಣ, ಸಿಇಓ, ಶಾಂತಪ್ಪ, ಶಿವಮೂರ್ತಿ , ಜಯಂತರಾವ್ ಪತಂಗೆ, ಅಮರೇಗೌಡ ಹಂಚಿನಾಳ, ಬಸವರಾಜ್ ಪಾಟೀಲ್ ಸೇರಿದಂತೆ ಅನೇಕರು ಇದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande