ಅಡವಿಸೋಮಾಪೂರ ಗ್ರಾಮದಲ್ಲಿ ಪಲ್ಸ್ ಪೋಲಿಯೋ ಜಾಥಾ
ಗದಗ, 21 ಡಿಸೆಂಬರ್ (ಹಿ.ಸ.) : ಆ್ಯಂಕರ್ : 5 ವರ್ಷದ ಒಳಗಿನ ಎಲ್ಲಾ ಮಕ್ಕಳಿಗೆ ಎರಡು ಹನಿ ಪೋಲಿಯೋ ಲಸಿಕೆಯನ್ನು ತಪ್ಪದೆ ಕೋಡಿಸಿರಿ. ಮತ್ತು ಅಂಗವಿಕಲತೆ ತಡೆಗಟ್ಟೋಣ. ಎಂದು ದಿನಾಂಕ 21.12.2025 ರಿಂದ 24.12.2025 ರ ವರೆಗೆ ನಡೆಯುವ ಪೋಲಿಯೋ ಕಾರ್ಯಕ್ರಮದಲ್ಲಿ ಯಾವುದೇ ಮಗು ಪೋಲಿಯೋ ಲಸಿಕೆಯಿಂದ ವಂಚಿ
ಫೋಟೋ


ಗದಗ, 21 ಡಿಸೆಂಬರ್ (ಹಿ.ಸ.) :

ಆ್ಯಂಕರ್ : 5 ವರ್ಷದ ಒಳಗಿನ ಎಲ್ಲಾ ಮಕ್ಕಳಿಗೆ ಎರಡು ಹನಿ ಪೋಲಿಯೋ ಲಸಿಕೆಯನ್ನು ತಪ್ಪದೆ ಕೋಡಿಸಿರಿ. ಮತ್ತು ಅಂಗವಿಕಲತೆ ತಡೆಗಟ್ಟೋಣ. ಎಂದು ದಿನಾಂಕ 21.12.2025 ರಿಂದ 24.12.2025 ರ ವರೆಗೆ ನಡೆಯುವ ಪೋಲಿಯೋ ಕಾರ್ಯಕ್ರಮದಲ್ಲಿ ಯಾವುದೇ ಮಗು ಪೋಲಿಯೋ ಲಸಿಕೆಯಿಂದ ವಂಚಿತ ಆಗದಂತೆ ಮಕ್ಕಳಿಗೆ ಸಲಿಕೆ ಕೋಡಿಸಿ ಪೋಲಿಯೋ ಮುಕ್ತ ಭಾರತವನ್ನು ಮಾಡೋಣ ಎಂದು ಶಾಲಾ ಮಕ್ಕಳೊಂದಿಗೆ ಗ್ರಾಮದ ಜಾಥಾವನ್ನು ನಡೆಸಲಾಯಿತು

ಗದಗ ತಾಲೂಕಾ ಅಡವಿಸೋಮಾಪೂರ ಗ್ರಾಮದ ಮತ್ತು ತಾಂಡೆಗಳ ಬೂತ್‍ಗಳಲ್ಲಿ ಪಲ್ಸ್ ಪೋಲಿಯೋ ಮಗುವಿಗೆ ಲಸಿಕೆ ಹಾಕಿಸಿಕೊಳ್ಳಬೇಕೆಂದು ಜ್ಯಾಥಾ ಮುಖಾಂತರ ಜಾಗೃತಿಯನ್ನು ಮೂಡಿಸಲಾಯಿತು.

ಯಾವುದೇ ಕಾರ್ಯಕ್ರಮವು ಯಶಸ್ವಿ ಆಗಬೇಕಾದರೆ ಸಾರ್ವಜನಿಕರ ಸಹಕಾರ ಬಹು ಮುಖ್ಯವಾಗಿದೆ ಸರ್ಕಾರಗಳು ಸಮುದಾಯದ ಆರೋಗ್ಯಕ್ಕೆ ಹೆಚ್ಚು ವೈದ್ಯಕಿಯ ಸೌಕರ್ಯಗಳನ್ನು ನೀಡುತ್ತಿದೆ ಅದರ ಸೌಲಭ್ಯಗಳನ್ನು ಪಡೆದು ಆರೋಗ್ಯ ಸಂಪತ್ತನ್ನು ಪಡೆದುಕೊಳ್ಳಬೇಕೆಂದು ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಶಿದ್ದಪ್ಪ ಎನ್ ಲಿಂಗದಾಳ ಜಾಥಾ ಮುಖಾಂತರ ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಡಿ.ಕೆ ಕಲ್ಲೋಳ್ಳಿ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳಾದ ಸವಿತಾ ಪವಾರ ಪೋಲಿಯೋ ಮೇಲ್ವಿಚಾರಕರಾದ ಎಸ್.ಬಿ.ಗಡಾದ ಮಂಜುನಾಥ ದೊಡ್ಡಮನಿ .ಶ್ರೀಮತಿ ಎಮ್ ಸಿ ದೊಡ್ಡಮನಿ ವ್ಹಿ ವಾಯ್ ತಿರಕಣ್ಣವರ ಶ್ರೀಮತಿ ಬಿ ಬಿ ಹರ್ತಿ ಮಿನಾಕ್ಷೀ ವಡ್ಡರ ಮಾಲಾ ಮೇವುಂಡಿ ರೇಣುಕಾ ಪುರದ ಉಮಾದೇವಿ ಖಾನಾಪೂರ ಲಲಿತಾ ನಾಯಕ ಎಫ್ ಎನ್ ಅತ್ತಿಕಟ್ಟಿ ಮಂಜುಳಾ ಆರಿ. ಲಲಿತಾ ಅಂಗಡಿ ಶಿಕ್ಷಕಿಯರು ಆಶಾ ಕಾರ್ಯಕರ್ತೆಯರು ಆರೋಗ್ಯ ಇಲಾಖೆ ಸಿಬ್ಬಂದಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿ ಮಾಡಲಾಯಿತು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande