
ಕೊಪ್ಪಳ, 21 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಕರ್ನಾಟಕ ಸರ್ಕಾರ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಕೆ.ಸಿ.ಟಿ.ಯು, ಟೆಕ್ಸಾಕ್ ಬೆಂಗಳೂರು, ಕೊಪ್ಪಳ ಜಿಲ್ಲಾ ಕೈಗಾರಿಕಾ ಕೇಂದ್ರ ಇವರ ಸಂಯುಕ್ತಾಶ್ರಯದಲ್ಲಿ ಡಿ. 22 ರಂದು ಬೆಳಿಗ್ಗೆ 10.30 ಗಂಟೆಗೆ ಗಂಗಾವತಿಯ ಗಜಾನನ ಸಾಮಿಲ್ ಹತ್ತಿರದ ಶಿವ ಟಾಕೀಸ್ ಹಿಂಬಾದಲ್ಲಿನ ಶ್ರೀ ಸಾಯಿ ಲಕ್ಷ್ಮೀ ರೆಸಿಡೆನ್ಸಿಯಲ್ಲಿ, ಎಂ.ಎಸ್.ಎಂ.ಇ.ಗಳ in ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು ಮತ್ತು ವೇಗಗೊಳಿಸುವ ಉದ್ದೇಶದಿಂದ (RAMP) ಯೋಜನೆಯಡಿಯಲ್ಲಿ ಟ್ರೇಡ್ಸ್ (TReDS) ಯೋಜನೆ ಕುರಿತು ಒಂದು ದಿನದ ಅರಿವು ಮೂಡಿಸುವ ಕಾರ್ಯಾಗಾರವನ್ನು ಆಯೊಜಿಸಲಾಗಿದೆ.
ಗಂಗಾವತಿ ರೈಸ್ ಮಿಲ್ಲರ್ಸ್ ಅಸೋಸಿಯೇಷನ್ ಅಧ್ಯಕ್ಷ ಕಲ್ಗುಡಿ ನಾಗೇಶರಾವ್ ಅವರು ಕಾರ್ಯಾಗಾರವನ್ನು ಉದ್ಘಾಟಿಸುವರು,
ಕೊಪ್ಪಳ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಮನ್ಸೂರ್ ಅವರು ಅಧ್ಯಕ್ಷತೆ ವಹಿದುವರು.
ಅತಿಥಿಗಳಾಗಿ ಬೆಂಗಳೂರು ಟೆಕ್ಸಾಕ್ ನ ಸಿ.ಇ.ಓ ಮತ್ತು ಮುಖ್ಯ ಸಲಹೆಗಾರ ಸಿದ್ಧರಾಜು, ಕೊಪ್ಪಳ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ(ಜಿ.ಪಂ)ಯ (ಖಾಗ್ರ) ಉಪ ನಿರ್ದೇಶಕರಾದ ಭಾರತಿ ಬಿದರಿಮಠ, ಕೊಪ್ಪಳ ಜಿಲ್ಲಾ ಲೀಡ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಮಾರುತಿ, ಕೊಪ್ಪಳ ಕೆ.ಎಸ್.ಎಫ್.ಸಿ ಶಾಖಾ ವ್ಯವಸ್ಥಾಪಕ ಸೋಮೇಶ ಎಂ. ಚಿಕ್ಕಮಠ, ಗಂಗಾವತಿ ರೈಸ್ ಟ್ರೇಡ್ಸ್ ಅಸೋಸಿಯೇಷನ್ ನ ಬಾಹುಬಲಿ ಎಸ್.ಜಿ ಅವರು ಉಪಸ್ಥಿತರಿರುವರು.
ಕಾರ್ಯಕ್ರಮದಲ್ಲಿ ಕೊಪ್ಪಳ ಜಿಲ್ಲಾ ಕೈಗಾರಿಕಾ ಕೇಂದ್ರದ ಉಪ ನಿರ್ದೇಶಕ(ಪ್ರಬಾರ) ಬಿ. ಕಮಲರಾಜ್, ಸಹಾಯಕ ನಿರ್ದೇಶಕ(ಪ್ರಭಾರ) ಪ್ರಕಾಶ ಬಿಸೇರೊಟ್ಟಿ ಅವರು ಉಪಸ್ಥಿತರಿರುವರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್