ಕರ್ನಾಟಕ ಭೂ ಕಬಳಿಕೆ ನಿಷೇಧ ಕುರಿತು ಅಧಿಕಾರಿಗಳು ತಿಳಿದುಕೊಳ್ಳಬೇಕಿದೆ - ಎನ್. ಎಸ್. ಪಾಟೀಲ್
ಕೊಪ್ಪಳ, 20 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಕರ್ನಾಟಕ ಭೂ ಕಬಳಿಕೆ ನಿಷೇಧ ಅಧಿನಿಯಮ ಮತ್ತು ಸಂಬಂಧಿಸಿದ ಕಾಯ್ದೆಗಳ ಬಗ್ಗೆ ಅಧಿಕಾರಿಗಳಿಗೆ ತಿಳಿಸಲು ಈ ಕಾರ್ಯಾಗಾರ ಹಮ್ಮಿಕೊಂಡಿದ್ದು ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕೆಂದು ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ ಬೆಂಗಳೂರಿನ
ಕರ್ನಾಟಕ ಭೂ ಕಬಳಿಕೆ ನಿಷೇಧ ಕುರಿತು ಅಧಿಕಾರಿಗಳು ತಿಳಿದುಕೊಳ್ಳಬೇಕಿದೆ - ಎನ್. ಎಸ್. ಪಾಟೀಲ್


ಕರ್ನಾಟಕ ಭೂ ಕಬಳಿಕೆ ನಿಷೇಧ ಕುರಿತು ಅಧಿಕಾರಿಗಳು ತಿಳಿದುಕೊಳ್ಳಬೇಕಿದೆ - ಎನ್. ಎಸ್. ಪಾಟೀಲ್


ಕರ್ನಾಟಕ ಭೂ ಕಬಳಿಕೆ ನಿಷೇಧ ಕುರಿತು ಅಧಿಕಾರಿಗಳು ತಿಳಿದುಕೊಳ್ಳಬೇಕಿದೆ - ಎನ್. ಎಸ್. ಪಾಟೀಲ್


ಕರ್ನಾಟಕ ಭೂ ಕಬಳಿಕೆ ನಿಷೇಧ ಕುರಿತು ಅಧಿಕಾರಿಗಳು ತಿಳಿದುಕೊಳ್ಳಬೇಕಿದೆ - ಎನ್. ಎಸ್. ಪಾಟೀಲ್


ಕರ್ನಾಟಕ ಭೂ ಕಬಳಿಕೆ ನಿಷೇಧ ಕುರಿತು ಅಧಿಕಾರಿಗಳು ತಿಳಿದುಕೊಳ್ಳಬೇಕಿದೆ - ಎನ್. ಎಸ್. ಪಾಟೀಲ್


ಕರ್ನಾಟಕ ಭೂ ಕಬಳಿಕೆ ನಿಷೇಧ ಕುರಿತು ಅಧಿಕಾರಿಗಳು ತಿಳಿದುಕೊಳ್ಳಬೇಕಿದೆ - ಎನ್. ಎಸ್. ಪಾಟೀಲ್


ಕೊಪ್ಪಳ, 20 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಕರ್ನಾಟಕ ಭೂ ಕಬಳಿಕೆ ನಿಷೇಧ ಅಧಿನಿಯಮ ಮತ್ತು ಸಂಬಂಧಿಸಿದ ಕಾಯ್ದೆಗಳ ಬಗ್ಗೆ ಅಧಿಕಾರಿಗಳಿಗೆ ತಿಳಿಸಲು ಈ ಕಾರ್ಯಾಗಾರ ಹಮ್ಮಿಕೊಂಡಿದ್ದು ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕೆಂದು ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ ಬೆಂಗಳೂರಿನ ಪ್ರಭಾರಿ ಅಧ್ಯಕ್ಷರಾದ ಎನ್.ಎಸ್. ಪಾಟೀಲ ಹೇಳಿದರು.

ಅವರು ಶನಿವಾರ ಕೊಪ್ಪಳ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯಗಳು, ಬೆಂಗಳೂರು, ಕಂದಾಯ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಕೊಪ್ಪಳ ಜಿಲ್ಲಾಡಳಿತ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ಭೂ ಕಬಳಿಕೆ ನಿಷೇಧ ಅಧಿನಿಯಮ ಮತ್ತು ಸಂಬಂಧಿಸಿದ ಕಾಯ್ದೆಗಳ ಕುರಿತಾದ ಒಂದು ದಿನದ ಕಾರ್ಯಾಗಾರ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಸರಕಾರಿ ಭೂಮಿ ಉಳಿಸಬೇಕಾದರೆ ಭೂ ಕಬಳಿಕೆ ತಪ್ಪಿಸಬೇಕಿದೆ. ಅದಕ್ಕಾಗಿ ಇಂದು ಎಲ್ಲಾ ಅಧಿಕಾರಿಗಳೊಂದಿಗೆ ಚರ್ಚೆ ಮಾಡಲು ತಮ್ಮನ್ನು ಇಲ್ಲಿಗೆ ಕರೆದಿದ್ದೆವೆ. ಭೂ ಕಬಳಿಕೆಯಾದರೆ ಏನು ಮಾಡಬೇಕು. ಹೇಗೆ ಕೇಸ್ ಹಾಕಬೇಕು ಎಂಬುದರ ಕುರಿತು ಮಾಹಿತಿ ನೀಡಲು ಸಂಪನ್ಮೂಲ ವ್ಯಕ್ತಿಗಳು ಬಂದಿದ್ದಾರೆ. ಇದರಲ್ಲಿ ತಮ್ಮ ಅಭಿಪ್ರಾಯ ತಿಳಿಸುವುದು ಬಹಳ ಮುಖ್ಯ ಇದೆ. ಭೂ ಕಬಳಿಕೆ ನಿಷೇಧ ಕಾನೂನಿನ ಕುರಿತು ಅಧಿಕಾರಿಗಳಿಗೆ ಪರಿಪೂರ್ಣ ಮಾಹಿತಿ ಇರಬೇಕು. 2016 ರಿಂದ ಇಲ್ಲಿಯವರೆಗೆ 23,849 ಪ್ರಕರಣಗಳನ್ನು ತಿದ್ದುಪಡಿ ಆಧಾರದ ಮೇಲೆ ಇತ್ಯರ್ಥಪಡಿಸಲಾಗಿದೆ. 4786 ಪ್ರಕರಣಗಳು ಬಾಕಿ ಇದ್ದು, 4585 ಎಕರೆ 6 ಗುಂಟೆ ಸರಕಾರಿ ಜಮೀನಿನ ಒತ್ತುವರಿಯನ್ನು ತೆರವುಗೊಳಿಸಲಾಗಿದೆ. 133 ಜನರಿಗೆ ಶಿಕ್ಷೆಯಾಗಿ ಕಾರಾಗೃಹವಾಸ ಮತ್ತು ದಂಡ ವಿಧಿಸಲಾಗಿದೆ ಎಂದು ಹೇಳಿದರು.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಅಧ್ಯಕ್ಷರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕೊಪ್ಪಳದ ಸಿ. ಚಂದ್ರಶೇಖರ ಅವರು ಮಾತನಾಡಿ, ಭೂ ಕಬಳಿಕೆ, ಅದರ ವ್ಯಾಖ್ಯಾನ ಸಾರ್ವಜನಿಕರಲ್ಲಿ ಸೀಮಿತವಾಗಿದೆ. ಕೆರೆ, ಅರಣ್ಯ, ನದಿ ಒತ್ತುವರಿಯು ಆಗಿದೆ. ಭೂ ಕಬಳಿಕೆಯಾದ ನಂತರ ಯಾವ ಕ್ರಮ ತೆಗೆದುಕೊಳ್ಳುಬೇಕು. ಭೂ ಕಬಳಿಕೆಯಾದರೆ ಶಿಕ್ಷೆ ವಿಧಿಸುವ ಮತ್ತು ಅದನ್ನು ವಾಪಸ್ ಪಡೆಯಲು ಕಾನೂನಿನಲ್ಲಿ ಅವಕಾಶ ಇದೆ. ಭೂ ಕಬಳಿಕೆ ಚಟುವಟಿಕೆ ನಿಷೇಧ ಹಾಗೂ ಭಾದಿತರನ್ನು ರಕ್ಷಿಸಿ ಮರಳಿ ಅವರಿಗೆ ನೀಡುವುದು ಮತ್ತು ಅಕ್ರಮ ಸಂಪತ್ತಿನ ಸಂಗ್ರಹ ತಡೆಯುವದಾಗಿದೆ ಎಂದರು.

ಕೊಪ್ಪಳ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಖಿನ್ನಾಳ ಗ್ರಾಮವನ್ನು ದತ್ತು ಸ್ವೀಕರಿಸಿ ಜಿಲ್ಲಾಡಳಿತ ದಿಂದ ಸೌಲಭ್ಯಗಳನ್ನು ಒದಗಿಸಿಕೊಡುವ ಕೆಲಸ ಮಾಡುತ್ತಿದ್ದೆವೆ. ಅಲ್ಲಿಯೂ ಕೆಲವು ಕಡೆ ಭೂ ಕಬಳಿಕೆಯಾಗಿದ್ದು ಸ್ವಯಂ ಪ್ರಕರಣ ದಾಖಲಿಸಿ ಕೆಲವು ಪ್ರಕರಣಗಳಲ್ಲಿ ಸೊಮೊಟೊ ತೆಗೆದುಕೊಳ್ಳುತ್ತಿದ್ದೆವೆ. ನಿಮ್ಮ ವ್ಯಾಪ್ತಿಯಲ್ಲಿ ಭೂ ಕಬಳಿಕೆ ನಿಷೇಧ ಕಾಯ್ದೆಯ ಬಗ್ಗೆ ಸರಿಯಾಗಿ ತಿಳಿದುಕೊಳ್ಳಬೇಕೆಂದರು.

ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಅವರು ಮಾತನಾಡಿ, ನ್ಯಾಯಾಧೀಶರ ಒತ್ತಾಸೆಯ ಮೇರೆಗೆ ಇಂದು ಈ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ಭೂ ಕಬಳಿಕೆ ಸರಕಾರಿ ಜಮೀನು ಮಾತ್ರವಲ್ಲದೆ, ಮುಜರಾಯಿ, ವಕ್ಪ್ ಎಲ್ಲದಕ್ಕು ಅನ್ವಯ ಆಗುತ್ತದೆ. ನಮ್ಮ ಅಧಿಕಾರಿಗಳು ಈ ಕಾರ್ಯಾಗಾರದ ಸದುಪಯೋಗ ಪಡೆದುಕೊಳ್ಳಬೇಕು. ನಮ್ಮ ಭೂಮಿ ತಂತ್ರಾಂಶದಲ್ಲಿ ದಾಖಲೆಯನ್ನು ಅಪಲೋಡ ಮಾಡುವಾಗ ಬಹಳಷ್ಟು ಲೋಪಗಳು ಕಂಡು ಬರುತ್ತಿದ್ದು ಅವುಗಳನ್ನು ಸರಿಪಡಿಸುವ ಕೆಲಸ ಮಾಡುತ್ತಿದ್ದೆವೆ. ಭೂ ಸುರಕ್ಷಾದಲ್ಲಿ ಈಗಾಗಲೇ ಕಾರಟಗಿ. ಕನಕಗಿರಿ. ಮತ್ತು ಯಲಬುರ್ಗಾ ತಾಲ್ಲೂಕಿನ ದಾಖಲೆಗಳ ಸ್ಕ್ಯಾನ ಮಾಡುವ ಕೆಲಸ ಆಗಿದೆ ಉಳಿದ ತಾಲ್ಲೂಕುಗಳನ್ನು ಈ ಮಾಹೆಯಲ್ಲಿ ಮಾಡುತ್ತೆವೆ. ಇದರಿಂದ ಸಾರ್ವಜನಿಕರಿಗೆ ಮಾಹಿತಿ ಆನಲೈನಲ್ಲಿ ದೊರೆಯುವಂತಾಗುತ್ತದೆ. ಸರಕಾರಿ ಭೂಮಿ ರಕ್ಷಿಸುವ ಜವಾಬ್ದಾರಿ ನಮ್ಮ ಆದ್ಯ ಕರ್ತವ್ಯವಾಗಲಿ ಎಂದು ಹೇಳಿದರು.

ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದ ಕಂದಾಯ ಸದಸ್ಯರಾದ ಕೆ.ಹೆಚ್.ಅಶ್ವತ್ಥ ನಾರಾಯಣಗೌಡ ಅವರು ``ಕರ್ನಾಟಕ ಭೂ ಕಬಳಿಕೆ ನಿಷೇಧ ಅಧಿನಿಯಮ 2011ರ'' ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಈ ಕಾಯ್ದೆಯು 2014ರ ಅಕ್ಟೋಬರ್ 9ರಂದು ರಾಷ್ಟ್ರಪತಿಯವರ ಅನುಮೋದನೆಯನ್ನು ಪಡೆಯಲಾಗಿದೆ. ಇದು ಸರ್ಕಾರಕ್ಕೆ, ವಕ್ಫ್ ಅಥವಾ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳಿಗೆ, ಸ್ಥಳೀಯ ಸಂಸ್ಥೆಗಳಿಗೆ, ಅಥವಾ ಸರ್ಕಾರದ ಒಡೆತನದಲ್ಲಿರುವ ಹಾಗೂ ನಿಯಂತ್ರಣದಲ್ಲಿರುವ ಅಥವಾ ವ್ಯವಸ್ಥಾಪನೆಯಲ್ಲಿರುವ ಶಾಸನಬದ್ಧ ಅಥವಾ ಶಾಸನಬದ್ಧವಲ್ಲದ ಸಂಸ್ಥೆಗಳಿಗೆ ಸೇರಿದ, ಭೂಮಿಗಳನ್ನು ಕಬಳಿಸಲು ಮಾಡಲಾಗುವ ಸಂಘಟಿತ ಪ್ರಯತ್ನಗಳನ್ನು ತಡೆಗಟ್ಟಲು ಕ್ರಮಕೈಗೊಳ್ಳುವುದಕ್ಕಾಗಿ ಉಪಬಂಧ ಕಲ್ಪಿಸಲು ಒಂದು ಅಧಿನಿಯಮವಾಗಿದೆ ಎಂದು ವಿವರವಾಗಿ ಮಾತನಾಡಿದರು.

ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದ ಕಂದಾಯ ಸದಸ್ಯರಾದ ಎಸ್.ಪಾಲಯ್ಯ ಅವರು ``ಕರ್ನಾಟಕ ಭೂ ಕಂದಾಯ ಅಧಿನಿಯಮ ಕಲಂ 192(ಎ) ಮತ್ತು ಕರ್ನಾಟಕ ಭೂ ಕಬಳಿಕೆ ನಿಷೇಧ ಅಧಿನಿಯಮ ತಿದ್ದುಪಡಿ ಕಾಯ್ದೆ 2025ರ'' ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಕಲಂ 192-ಎ ಕಾಯ್ದೆಯಲ್ಲಿ ಏನೇ ಒಳಗೊಂಡಿದ್ದರೂ ಅಥವಾ ನಿಯಮಗಳು ಏನೇ ಇದ್ದರೂ ಯಾವನೊಬ್ಬ ವ್ಯಕ್ತಿ, ಸರ್ಕಾರಿ ಸ್ವತ್ತನ್ನು ಅಕ್ರಮವಾಗಿ ಆಕ್ರಮಿಸಿ, ಸರ್ಕಾರಿ ಸ್ವತ್ತೆಂದು ಗೊತ್ತಿದ್ದು ಅದನ್ನು ಹೊಂದಿದ್ದರೆ, ಸರ್ಕಾರಿ ಸ್ವತ್ತನ್ನು ಮಾರಾಟ ಮಾಡಲು, ಆಡಮಾನ ಮಾಡಲು ಮತ್ತು ದಾನದ ಮೂಲಕ ಹಸ್ತಾಂತರಿಸಲು ದಸ್ತಾವೇಜುಗಳನ್ನು ಸೃಷ್ಟಿಸಿ ವಂಚಿಸಿದ್ದರೆ ಅವರಿಗೆ ನ್ಯಾಹಿಕ ದಂಡಾಧಿಕಾರಿಗಳು ಪ್ರಥಮ ದರ್ಜೆಯವರಿಂದ ವಿಚಾರಣೆ ನಡೆಸಿ ಕ್ರಮವಾಗಿ ಒಂದು ವರ್ಷ ಕಾರಾವಾಸ ಮತ್ತು 5000 ರೂ.ಗಳ ಜುಲ್ಮಾನೆ, 3 ವರ್ಷಗಳ ಕಾರಾವಾಸ ಮತ್ತು 10,000 ರೂ.ಗಳ ಜುಲ್ಮಾನೆ ಹಾಕಲಾಗುತ್ತದೆ ಎಂದು ವಿವರಿಸಿದರು.

ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಕೊಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಮಹಾಂತೇಶ್ ಎಸ್. ದರಗದ್ ಅವರು ``ಕೆರೆ ಒತ್ತುವರಿ ಮತ್ತು ತೆರವುಗೊಳಿಸಲು ಇರುವ ಕಾನೂನು ಪ್ರಕ್ರಿಯೆಗಳ'' ಕುರಿತು ಉಪನ್ಯಾಸ ನೀಡಿ ಮಾತನಾಡಿ, ನೀರಿನ ಹಕ್ಕು, ಭಾರತ ಸಂವಿಧಾನದ 21ನೇ ಅನುಚ್ಛೇದದ ಮೂಲಕ ಖಾತರಿ ನೀಡಲಾದ ಜೀವ ಸಂರಕ್ಷಣೆ ಹಕ್ಕಿನ ಒಂದು ಭಾಗವಾಗಿದೆ. ತೀವ್ರ ನಗರೀಕರಣ, ಕೈಗಾರಿಕೀಕರಣ ಮತ್ತು ಜನಸಂಖ್ಯಾ ಸ್ಪೋಟದಿಂದಾಗಿ ಕೆರೆಗಳು ಮತ್ತು ಕೊಳಗಳಂಥ ಜಲಮೂಲಗಳ ಒಡ್ಡುಗಳನ್ನು ಒಡೆದು ಮತ್ತು ನೀರನ್ನು ಹೊರಗೆ ಹರಿಬಿಟ್ಟು, ನಗರ ಮತ್ತು ಕೈಗಾರಿಕಾ ಪ್ರದೇಶವಾಗಿ ಭೂ ಬಳಕೆಗಾಗಿ ಪರಿವರ್ತಿಸಲಾಗುತ್ತಿದೆ. ಇದನ್ನು ನಿಲ್ಲಸುವುದು ತುಂಬಾ ಮುಖ್ಯ ಇಲ್ಲವಾದರೆ, ರಾಜ್ಯದಲ್ಲಿ ಕೆರೆಗಳೆ ಇಲ್ಲದಂತಾಗುತ್ತದೆ ಎಂದು ಅವರು ವಿವರವಾಗಿ ತಿಳಿಸಿದರು.

ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದ ವಿಲೇಖನಾಧಿಕಾರಿಗಳಾದ ಹೆಚ್.ಕೆ. ನವೀನ್ ಅವರು ``ಸ್ಥಳೀಯ ಸಂಸ್ಥೆಗಳು, ಅರಣ್ಯ ಇಲಾಖೆ, ಮುಜರಾಯಿ ಇಲಾಖೆ, ವಕ್ಫ್ ಆಸ್ತಿಗಳು ಒತ್ತುವರಿ ಮತ್ತು ತೆರವುಗೊಳಿಸಲು ಇರುವ ಕಾನೂನು ಪ್ರಕ್ರಿಯೆಗಳ'' ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಕರ್ನಾಟಕ ಪಂಚಾಯಿತಿ ರಾಜ್ ಕಾಯ್ದೆ 1993ರ ಕಲಂ 71 ಮತ್ತು 72 ರನ್ವಯ ಸಾರ್ವಜನಿಕ ಬೀದಿಗಳು, ಪಂಚಾಯಿತಿಗೆ ಸಂಬಂಧಿಸಿದ ಕಟ್ಟಡಗಳು, ನಿವೇಶನ, ಜಾಗ, ರಸ್ತೆ, ಚರಂಡಿ, ಕಾಲುವೆ, ಬೇಲಿ, ಗೋಡೆ, ಕಂಭ ಇತ್ಯಾದಿಗಳು ಗ್ರ‍್ರಾಮ ಪಂಚಾಯಿತಿ ಆಸ್ತಿಗಳಾಗಿವೆ ಎಂದರು.

ಕರ್ನಾಟಕ ಮುನಿಸಿಪಾಲಿಟಿ ಕಾಯ್ದೆ, ಕಲಂ 81 ಅನ್ವಯ ಸ್ವತ್ತುಗಳು, ಪುರಸಭಾ ಮತ್ತು ಪಟ್ಟಣ ಪಂಚಾಯಿತಿ ಪರಿಮಿತಿಯಲ್ಲಿ ಹೊಂದಿರುವ ಸ್ವತ್ತುಗಳು, ಎಲ್ಲ ಸಾರ್ವಜನಿಕ ಪಟ್ಟಣ ಗೋಡೆಗಳು, ಗೇಟುಗಳು, ಮಾರುಕಟ್ಟೆಗಳು, ಕಸಯಿಕನೆಗಳು, ಗೊಬ್ಬರ ಮತ್ತು ಮರದ ಡಿಪೋಗಳು, ಎಲ್ಲ ಸಾರ್ವಜನಿಕ ತೋರೆಗಳು, ಕೆರೆಗಳು, ಜಲಶಯಗಳು, ನೀರು ತೊಟ್ಟಿಗಳು, ಬಾವಿಗಳು, ಸೇತುವೆಗಳು, ಕಟ್ಟಡಗಳು, ಎಲ್ಲ ಚರಂಡಿಗಳು, ಬೀದಿಗಳು. ಸಾರ್ವಜನಿಕ ಉದೇಶಕ್ಕಾಗಿ ದಾನ ನೀಡಿದ ಎಲ್ಲ ಭೂಮಿ ಮತ್ತು ಕಟ್ಟಡಗಳು ಪುರಸಭಾ ಮತ್ತು ಪಟ್ಟಣ ಪಂಚಾಯಿತಿ ಸ್ವತ್ತುಗಳಾಗಿವೆ. ಕರ್ನಾಟಕ ನಗರ ಪಾಲಿಕೆಗಳ ಅಧಿನಿಯಮ 1976ರ ಕಲಂ 174 ಮತ್ತು 287 ಅನ್ವಯ ಸಾರ್ವಜನಿಕ ಉದ್ಯಾನ ವನಗಳು, ಆಟದ ಮೈದಾನಗಳು ಮತ್ತು ವಾಯು ಸಂಚಾರಕ್ಕೆ ಕಾಯ್ದಿರಿಸಿದ ಎಲ್ಲ ಬಯಲು ಸ್ಥಳಗಳು, ನಗರ ಪಾಲಿಕೆಗೆ ವರ್ಗಾಯಿಸಿದ ಎಲ್ಲ ಸ್ವತ್ತುಗಳು ನಗರ ಪಾಲಿಕೆಗಳ ಸ್ವತ್ತುಗಳಾಗಿರುತ್ತವೆ. ಕರ್ನಾಟಕ ಅರಣ್ಯ ಅಧಿನಿಯಮ 1963ರನ್ವಯ ಅರಣ್ಯ ಇಲಾಖೆಯ ಸ್ವತ್ತು, ಎಲ್ಲ ಬಗೆಯ ಅರಣ್ಯಗಳು, ಸರ್ಕಾರದಿಂದ ಅಧಿಸೂಚನೆಯ ಮೂಲಕ ನೀಡಲಾದ ಎಲ್ಲ ರೀತಿಯ ಗೋಷಿತ ಪ್ರದೇಶಗಳು ಅರಣ್ಯ ಇಲಾಖೆಯ ಸ್ವತ್ತುಗಳಾಗಿವೆ ಎಂದು ವಿವರವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್ ಅರಸಿದ್ದಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ನಿರ್ಮಲಾ, ಅಪರ ಜಿಲ್ಲಾಧಿಕಾರಿ ಸಿದ್ದರಾಮೇಶ್ವರ, ನ್ಯಾಯಾಧೀಶರುಗಳಾದ ಡಿ.ಕೆ. ಕುಮಾರ, ಸರಸ್ವತಿದೇವಿ, ಮಲಕರಿ ರಾಮಪ್ಪ ಒಡಿಯರ್, ಭಾಗಲಕ್ಷ್ಮೀ ಮತ್ತು ತ್ರಿವೇಣಿ ಈಳಿಗೇರ, ಕೊಪ್ಪಳ ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಟಿ.ಕೃಷ್ಣ ಮೂರ್ತಿ ಸೇರಿದಂತೆ ಇತರ ಇಲಾಖೆಗಳ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande