ಶ್ರೀ ಗವಿಸಿದ್ಧೇಶ್ವರ ಜಾತ್ರೆ : ಸಿರುಗುಪ್ಪದ ಹೀರಾ ರಾಮಜಿ ಅರ್ಯ ಅವರಿಗೆ ಅಡುಗೆ ಎಣ್ಣೆ ಸೇವೆ
ಕೊಪ್ಪಳ, 20 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು ಎಲ್ಲಾ ಸಿದ್ಧತೆಗಳು ಭರದಿಂದ ಸಾಗಿವೆ. ಜಾತ್ರಾ ಮಹೋತ್ಸವದ ದಾಸೋಹಕ್ಕೆ ಸಿರುಗುಪ್ಪದ ಭಾಗ್ಯೋದಯ ರೈಸ್ ಇಂಡಸ್ಟ್ರೀಸ್‍ನ ಮಾಲೀಕರು ಅಡುಗೆ ಎಣ್ಣೆಯ ಸೇವೆಯನ್ನು ಸಲ್ಲಿಸಿದ್ದಾರೆ.
ಶ್ರೀ ಗವಿಸಿದ್ಧೇಶ್ವರ ಜಾತ್ರೆ : ಸಿರುಗುಪ್ಪದ ಹೀರಾ ರಾಮಜಿ ಅರ್ಯ ಅವರಿಗೆ ಅಡುಗೆ ಎಣ್ಣೆ ಸೇವೆ


ಕೊಪ್ಪಳ, 20 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು ಎಲ್ಲಾ ಸಿದ್ಧತೆಗಳು ಭರದಿಂದ ಸಾಗಿವೆ. ಜಾತ್ರಾ ಮಹೋತ್ಸವದ ದಾಸೋಹಕ್ಕೆ ಸಿರುಗುಪ್ಪದ ಭಾಗ್ಯೋದಯ ರೈಸ್ ಇಂಡಸ್ಟ್ರೀಸ್‍ನ ಮಾಲೀಕರು ಅಡುಗೆ ಎಣ್ಣೆಯ ಸೇವೆಯನ್ನು ಸಲ್ಲಿಸಿದ್ದಾರೆ.

ಸಿರುಗುಪ್ಪದ ಭಾಗ್ಯೋದಯ ರೈಸ್ ಇಂಡಸ್ಟ್ರೀಸ್‍ನ ಮಾಲೀಕರಾದ ಹೀರಾ ರಾಮ ಜಿ ಆರ್ಯ ಮತ್ತು ಕುಟುಂಬದ ಸದಸ್ಯರು - ಪ್ರತೀ ವರ್ಷ ಅಡುಗೆ ಎಣ್ಣೆಯ ದಾಸೋಹದ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

ಜಾತ್ರಾ ಮಹೋತ್ಸವ ಪ್ರಾರಂಭ ಆದಾಗಿನಿಂದ ಸಮಾರೋಪಗೊಳ್ಳುವವರೆಗೂ ಆಗುವ ಅಡುಗೆ ಎಣ್ಣೆಯ ಖರ್ಚನ್ನು ಈ ದಾನಿಗಳು ಭರಿಸಲಿದ್ದಾರೆ.

ದಾನಿಗಳು ಈ ಸೇವೆಯನ್ನು ಅವರ ತಾಯಿಯವರಾದ ಶ್ರೀಮತಿ ದಿ. ಖೇತುದೇವಿ ಜಿ ಮತ್ತು ತಂದೆಯವರಾದ ದಿ. ಧೀಪಾರಾಮ ಜಿ ಹಾಗೂ ಅವರ ಅಣ್ಣನವರಾದ ಶ್ರೀ ದಿ. ಉಮಾರಾಮ ಜಿ ಅವರ ಸ್ಮರಣಾರ್ಥ ಸೇವೆ ಮಾಡುತ್ತಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande