ಚಿಕ್ಕನಹಳ್ಳಿ ಡೇರಿ ಅಧ್ಯಕ್ಷರಾಗಿ ಸಿ.ಅಮರೇಶ್ ಎರಡನೇ ಬಾರಿಗೂ ಅವಿರೋಧ ಆಯ್ಕೆ,
ಚಿಕ್ಕನಹಳ್ಳಿ ಡೇರಿ ಅಧ್ಯಕ್ಷರಾಗಿ ಸಿ.ಅಮರೇಶ್ ಎರಡನೇ ಬಾರಿಗೂ ಅವಿರೋಧ ಆಯ್ಕೆ,
ಚಿಕ್ಕನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ  ಅಧ್ಯಕ್ಷರಾಗಿ ಸಿ.ಅಮರೇಶ್ ಮತ್ತು ಉಪಾಧ್ಯಕ್ಷರಾಗಿ ಸಿ.ಎಂ ನರೇಶ್ ಕುಮಾರ್ ಅವರು ಅವಿರೋಧವಾಗಿ ಆಯ್ಕೆ


ಕೋಲಾರ, ೨೦ ಡಿಸೆಂಬರ್ (ಹಿ.ಸ) :

ಆ್ಯಂಕರ್ : ತಾಲೂಕಿನ ಚಿಕ್ಕನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಸತತವಾಗಿ ಎರಡನೇ ಬಾರಿಗೆ ಅಧ್ಯಕ್ಷರಾಗಿ ಸಿ.ಅಮರೇಶ್ ಮತ್ತು ಉಪಾಧ್ಯಕ್ಷರಾಗಿ ಸಿ.ಎಂ ನರೇಶ್ ಕುಮಾರ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ

ಡೇರಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಗಳಿಗೆ ಶನಿವಾರ ನಡೆದ ಚುನಾವಣೆಯಲ್ಲಿ ಎರಡು ಸ್ಥಾನಗಳಿಗೆ ಒಂದೊ0ದು ನಾಮಪತ್ರ ಮಾತ್ರ ಸಲ್ಲಿಕೆಯಾಗಿದ್ದ ಕಾರಣ, ಇಬ್ಬರ ನಾಮಪತ್ರಗಳು ಕ್ರಮ ಬದ್ಧವಾಗಿದ್ದು, ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ವೆಂಕಟೇಶ್ ಬಾಬು ತಿಳಿಸಿದರು.

ಸಂಘದ ಆಡಳಿತ ಮಂಡಳಿಯ ೫ವರ್ಷಗಳ ಅವಧಿಗೆ ನಿರ್ದೇಶಕರ ಆಯ್ಕೆಗಾಗಿ ಡಿಸೆಂಬರ್ ೧೩ ರಂದು ನಡೆದ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಸಿ.ಅಮರೇಶ್ ನೇತೃತ್ವದಲ್ಲಿ ಎಲ್ಲಾ ೧೦ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದರು.

ಅಧ್ಯಕ್ಷ ಸಿ.ಅಮರೇಶ್ ಮಾತನಾಡಿ ಹಿಂದಿನ ಐದು ವರ್ಷಗಳಲ್ಲಿ ನೂತನ ಕಟ್ಟಡ ನಿರ್ಮಾಣ ಸೇರಿದಂತೆ ಡೇರಿ ಅಭಿವೃದ್ಧಿಯೇ ಎರಡನೇ ಬಾರಿಗೂ ಅವಿರೋಧ ಆಯ್ಕೆಗೆ ಕಾರಣವಾಗಿದೆ ಅಧ್ಯಕ್ಷ ಸ್ಥಾನ ಎಂಬುದು ಅಧಿಕಾರವಲ್ಲ, ಇದೊಂದು ಜವಾಬ್ದಾರಿಯಾಗಿದೆ. ಹಾಲಿನ ಉತ್ಪಾದನೆ ಹೆಚ್ಚಳ ಮಾಡುವುದರ ಜೊತೆಗೆ, ಉತ್ಪಾದಕರಿಗೆ ಕೋಮುಲ್ ನಿಂದ ಸಿಗುವಂತಹ ಸೌಲಭ್ಯಗಳನ್ನು ತಲುಪಿಸಿ, ಅವರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವುದು ನಮ್ಮ ಮುಖ್ಯ ಗುರಿಯಾಗಿದೆ ಎಂದರು.

ಈ ಸಂದರ್ಭದಲ್ಲಿ ಕೋಮುಲ್ ವಿಸ್ತರಣಾಧಿಕಾರಿ ರಾಮಾಂಜಿನಪ್ಪ, ಡೇರಿ ಉಪಾಧ್ಯಕ್ಷ ಸಿ.ಎಂ ನರೇಶ್ ಕುಮಾರ್, ನಿರ್ದೇಶಕರಾದ ಸಿ.ಸಿ ಶ್ರೀನಿವಾಸ್, ಸಿ.ವಿ ಅಚ್ಚಪ್ಪ, ಸಿ.ನಾಗರಾಜ್, ಭಾಗ್ಯಲಕ್ಷ್ಮೀ, ಶಾರದಾದೇವಿ, ವೆಂಕಟಮ್ಮ, ಕೆ.ಸುಧಾ, ಸವಿತಾ, ಕಾರ್ಯದರ್ಶಿ ಸಿ.ಆರ್ ಗೋಪಾಲಪ್ಪ, ಇದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande