
ಕೋಲಾರ, ೨೦ ಡಿಸೆಂಬರ್ (ಹಿ.ಸ) :
ಆ್ಯಂಕರ್ : ಕಾರ್ಯಪಾಲಕ ಇಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯಯ ವಿಭಾಗ ಕೋಲಾರ ಇಲ್ಲಿ ನೀರಿನ ಪ್ರಯೋಗಾಲಕ್ಕೆ ಅವಶ್ಯವಿರುವ ಒಬ್ಬರು ಕಿರಿಯ ವಿಶೇಷಕರು ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.
ಬಿ.ಎಸ್ಸಿ ಪದವಿಯಲ್ಲಿ ಕೆಮಿಯೇ ಒಂದು ವಿಷಯವಾಗಿರಬೇಕು. ಕನಿಷ್ಠ, ಶೇ ೬೦ ಅಂಕಗಳನ್ನು ಪಡೆದಿರಬೇಕು. ೫ ವರ್ಷ ನೀರಿನ ಗುಣಮಟ್ಟ ಪ್ರಯೋಗಾಲಯದಲ್ಲಿ ಅನುಭವವಿರುವವರಿಗೆ ಕನಿಷ್ಠ ಶೇ ೫೦ ಅಂಕಗಳಿಗೆ ವಿನಾಯಿತಿ ಇರುತ್ತದೆ. ವಯೋಮಿತಿ ೪೫ ವರ್ಷ ಮೀರಿರಬಾರದು, ೨ ವರ್ಷ ನೀರಿನ ಗುಣಮಟ್ಟ ಪರೀಕ್ಷೆ ಹಾಗೂ ಕಂಪ್ಯೂಟರ್‌ನಲ್ಲಿ ಎಂ.ಎಸ್ ಆಫೀಸ್ ಪರಿಣಿತಿ ಹೊಂದಿರಬೇಕು. ಅರ್ಹತೆಯುಳ್ಳ ಅಭ್ಯರ್ಥಿಗಳು ಜನವರಿ ೦೬, ೨೦೨೬ ರೊಳಗಾಗಿ ತಮ್ಮ ಅನುಭವ ಪ್ರಮಾಣ ಪತ್ರ, ಮಾಸಿಕ ವೇತನ ಸ್ಲಿಪ್ ಮತ್ತು ವಿದ್ಯಾರ್ಹತೆಗೆ ಸಂಬ0ಧಪಟ್ಟ ಎಸ್.ಎಸ್.ಎಲ್.ಸಿ. ಪಿ.ಯು.ಸಿ, ಪದವಿ ಪ್ರಮಾಣ ಪತ್ರಗಳು ಅಂಕಪಟ್ಟಿಗಳು ಹಾಗೂ ಇತರೆ ಅಗತ್ಯ ದಾಖಲೆಗಳ ದೃಢೀಕೃತ ಜೆರಾಕ್ಸ್ ಪತಿಗಳೊಂದಿಗೆ ಕಾರ್ಯಪಾಲಕ ಇಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಕೋಲಾರ, ಜಿಲ್ಲಾಡಳಿತ ಭವನ-೫೬೩೧೦೧, ಕೊಠಡಿ ಸಂಖ್ಯೆ ಎಸ್ ೧೧ಗೆ ಆನ್-ಲೈನ್ ಮುಖಾಂತರ/ಅAಚೆ ಮುಖೇನ ಅರ್ಜಿಗಳನ್ನು ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಮೊ.ಸಂ:೯೪೮೩೩೩೧೦೪೨ ಯನ್ನು ಈ ಕಛೇರಿ ಸಮಯದಲ್ಲಿ ಬೇಟಿ ಮಾಡಬಹುದೆಂದು ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್