

ಬಳ್ಳಾರಿ, 19 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಹುಬ್ಬಳ್ಳಿ ವಿಭಾಗದ ವತಿಯಿಂದ ಇಂದು ರೈಲ್ವೆ ಆಫೀಸರ್ ಕ್ಲಬ್ ಹುಬ್ಬಳ್ಳಿಯಲ್ಲಿ ಸುರಕ್ಷಿತ ರೈಲು ಸಂಚಲನ ಎಂಬ ವಿಷಯದ ಕುರಿತು ಸುರಕ್ಷತಾ ಸೆಮಿನಾರ್ ವನ್ನು ಆಯೋಜಿಸಲಾಗಿತ್ತು.
ಸೆಮಿನಾರ್‌ನಲ್ಲಿ ಸ್ಟೇಷನ್ ಮಾಸ್ಟರ್‌ಗಳು ಟ್ರ್ಯಾಕ್ಷನ್ ಮೋಟರ್ ದುರಸ್ತಿ ನಿರ್ವಾಹಕ ರೈಲು ಸಂಚಾರ ಅಧಿಕಾರಿ ಹಾಗೂ ಶಂಟಿಂಗ್ ಸಿಬ್ಬಂದಿಗೆ ರೈಲು ಸಂಚಲನದಲ್ಲಿ ಸುರಕ್ಷಿತ ಕಾರ್ಯಾಚರಣೆ ಹಾಗೂ ನಿರ್ವಹಣೆ ಕುರಿತು ಜಾಗೃತಿ ಮೂಡಿಸಲು ಈ ಸೆಮಿನಾರ್ ಹಮ್ಮಿಕೊಳ್ಳಲಾಗಿತ್ತು.
ಟಿ.ವಿ.ಭೂಷಣ ವಿಭಾಗೀಯ ರೈಲ್ವೆ ಹೆಚ್ಚುವರಿ ವ್ಯವಸ್ಥಾಪಕರು ಮಾತನಾಡಿ, ಸಿಬ್ಬಂದಿಗಳು ಕಾರ್ಯ ನಿರ್ವಹಿಸುವ ಸ್ಥಳದಲ್ಲಿ ಸುರಕ್ಷತಾ ಪೋಷಾಣುಗಳನ್ನು ಧರಿಸಿ, ಶಿಸ್ತುಬದ್ಧವಾಗಿ ಕಾರ್ಯನಿರ್ವಹಿಸಬೇಕು. ತಪ್ಪದೆ ನಿಯಮಿತ ವ್ಯಾಯಾಮ, ಪೌಷ್ಟಕ ಆಹಾರ ಸೇವನೆ ಮಾಡಬೇಕು ಎಂದರು.
ತ್ರಿನೇತ್ರ ಕೆ.ಆರ್. ಹಿರಿಯ ವಿಭಾಗೀಯ ಸುರಕ್ಷತಾ ಅಧಿಕಾರಿಗಳು ಮಾತನಾಡಿ, ರೈಲ್ವೆ ಅತಿ ಹೆಚ್ಚಿನ ಸಂಪರ್ಕ ಜಾಲವನ್ನು ಹೊಂದಿರುವ ಸಾರಿಗೆ ವ್ಯವಸ್ಥೆಯಾಗಿದೆ, ಸಿಬ್ಬಂದಿಗಳು ಪರಸ್ಪರ ಸಮನ್ವಯದಿಂದ ಕೋಚಗಳ ಶೆಂಟಿಂಗ್ ಸಂದರ್ಭದಲ್ಲಿ ಹೆಚ್ಚಿನ ಜಾಗರೂಕತೆಯಿಂದ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ರೈಲ್ವೆಯು ಕಾರ್ಯಾಚರಣೆಯ ಸುರಕ್ಷತೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಈ ಸುರಕ್ಷಾ ಜಾಗೃತಿ ಸಮೀನಾರ ಆಯೋಜಿಸಲಾಗಿದೆ. ಹೆಚ್ಚುವರಿ ವಿಭಾಗೀಯ ವ್ಯವಸ್ಥಾಪಕರು ಹಾಗೂ ವಿಭಾಗದ ಹಿರಿಯ ರೈಲ್ವೆ ಅಧಿಕಾರಿಗಳು ಹಾಜರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್