ಸಾರ್ವಜನಿಕ ಸೇವಕರ ಆಯ್ಕೆಯಲ್ಲಿ ಪ್ರಾಮಾಣಿಕತೆ : ರಾಷ್ಟ್ರಪತಿ
ನವದೆಹಲಿ, 19 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಸಾರ್ವಜನಿಕ ಸೇವಾ ಆಯೋಗಗಳು ಅವಕಾಶದ ಸಮಾನತೆಯ ಜೊತೆಗೆ ಫಲಿತಾಂಶಗಳ ಸಮಾನತೆಯ ಗುರಿಗೂ ಶ್ರಮಿಸಬೇಕು ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದರು. ಹೈದರಾಬಾದ್‌ನಲ್ಲಿ ನಡೆದ ಸಾರ್ವಜನಿಕ ಸೇವಾ ಆಯೋಗಗಳ ಅಧ್ಯಕ್ಷರ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸ
President


ನವದೆಹಲಿ, 19 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಸಾರ್ವಜನಿಕ ಸೇವಾ ಆಯೋಗಗಳು ಅವಕಾಶದ ಸಮಾನತೆಯ ಜೊತೆಗೆ ಫಲಿತಾಂಶಗಳ ಸಮಾನತೆಯ ಗುರಿಗೂ ಶ್ರಮಿಸಬೇಕು ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದರು.

ಹೈದರಾಬಾದ್‌ನಲ್ಲಿ ನಡೆದ ಸಾರ್ವಜನಿಕ ಸೇವಾ ಆಯೋಗಗಳ ಅಧ್ಯಕ್ಷರ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾಗರಿಕ ಸೇವಕರ ಆಯ್ಕೆಯಲ್ಲಿ ಪ್ರಾಮಾಣಿಕತೆ ಮತ್ತು ಸಮಗ್ರತೆಗೆ ಮೊದಲ ಆದ್ಯತೆ ನೀಡಬೇಕು ಎಂದು ತಿಳಿಸಿದರು.

ಕೌಶಲ್ಯ ಕೊರತೆಯನ್ನು ತರಬೇತಿಯ ಮೂಲಕ ಸರಿಪಡಿಸಬಹುದು, ಆದರೆ ಸಮಗ್ರತೆಯ ಕೊರತೆ ಗಂಭೀರ ಸವಾಲುಗಳನ್ನು ಉಂಟು ಮಾಡುತ್ತದೆ ಎಂದರು.

ಅಂಚಿನಲ್ಲಿರುವ ಹಾಗೂ ದುರ್ಬಲ ವರ್ಗಗಳಿಗಾಗಿ ಸೇವಾಭಾವನೆ, ಲಿಂಗ ಸಂವೇದನೆ ಮತ್ತು ದಕ್ಷ ಆಡಳಿತ 2047ರ ಅಭಿವೃದ್ಧಿ ಹೊಂದಿದ ಭಾರತದ ಗುರಿಗೆ ಅವಶ್ಯಕವೆಂದು ರಾಷ್ಟ್ರಪತಿ ಹೇಳಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande