ಡಿ. 22 ರಿಂದ ಕೊಪ್ಪಳ ನಗರದಲ್ಲಿ ಇ-ಆಸ್ತಿ ತಂತ್ರಾಂಶದ ಶಿಬಿರ
ಕೊಪ್ಪಳ, 19 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಇ-ಆಸ್ತಿ ತಂತ್ರಾಂಶದ ಕುರಿತು ಕೊಪ್ಪಳ ನಗರಸಭೆಯಿಂದ ಇದೇ ಡಿಸೆಂಬರ್ 22 ರಿಂದ 2026ರ ಜನವರಿ 27 ರವರೆಗೆ ನಗರದ ವಿವಿಧ ವಾರ್ಡ್‍ಗಳಲ್ಲಿ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿದೆ. ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿನ ಐದು ಸ್ಥಳಗಳಲ್ಲಿ ಒಂದನೇ ಹಂತದಲ್ಲಿ ಆಸ್ತಿ
ಡಿ. 22 ರಿಂದ ಕೊಪ್ಪಳ ನಗರದಲ್ಲಿ ಇ-ಆಸ್ತಿ ತಂತ್ರಾಂಶದ ಶಿಬಿರ


ಕೊಪ್ಪಳ, 19 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಇ-ಆಸ್ತಿ ತಂತ್ರಾಂಶದ ಕುರಿತು ಕೊಪ್ಪಳ ನಗರಸಭೆಯಿಂದ ಇದೇ ಡಿಸೆಂಬರ್ 22 ರಿಂದ 2026ರ ಜನವರಿ 27 ರವರೆಗೆ ನಗರದ ವಿವಿಧ ವಾರ್ಡ್‍ಗಳಲ್ಲಿ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿದೆ.

ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿನ ಐದು ಸ್ಥಳಗಳಲ್ಲಿ ಒಂದನೇ ಹಂತದಲ್ಲಿ ಆಸ್ತಿಗಳನ್ನು ಇ-ಖಾತಾ ತಂತ್ರಾಂಶದಲ್ಲಿ ನೋಂದಣಿ ಮಾಡಲು ದಾಖಲಾತಿಗಳನ್ನು ಪಡೆದುಕೊಳ್ಳಲು ಶಿಬಿರ ಹಮ್ಮಿಕೊಳ್ಳಲಾಗಿದ್ದು, ಡಿ. 22 ರಂದು ಕೊಪ್ಪಳ ನಗರದ ಸಿರಸಪ್ಪಯ್ಯನ ಮಠದ ಹತ್ತಿರದಲ್ಲಿ, ಡಿ. 29 ರಂದು ನಗರದ ನೂರಾನಿ ಮಜೀಸ್ ಹತ್ತಿರ, 2026ರ ಜನವರಿ 12 ರಂದು ಜೆ.ಪಿ ಮಾರುಕಟ್ಟೆ ಹತ್ತಿರ, ಜನವರಿ 19 ರಂದು ಕುಂಬಾರ ಓಣಿಯಲ್ಲಿ ಮತ್ತು ಜನವರಿ 27 ರಂದು ಹೊಸಪೇಟೆ ರಸ್ತೆಯ ಈಶ್ವರ ದೇವಸ್ಥಾನದ ಪಾರ್ಕ್ ಹತ್ತಿರದಲ್ಲಿ ಶಿಬಿರ ಹಮ್ಮಿಕೊಳ್ಳಲಾಗಿದೆ.

ಈ ಶಿಬಿರಗಳಿಗೆ ಸಾರ್ವಜನಿಕರು ಭೇಟಿ ನೀಡಿ, ತಮ್ಮ ಆಸ್ತಿಗೆ ಸಂಬಂಧಪಟ್ಟ ಅಗತ್ಯ ದಾಖಲೆಗಳಾದ ನೋಂದಾಯಿತ ಖರೀದಿ ಪತ್ರ, ಹಕ್ಕುಪತ್ರ, ಖಾತಾ ನೋಂದಣಿ ಅಥವಾ ಬದಲಾವಣೆ ಪ್ರತಿ, 2025-26ನೇ ಸಾಲಿನ ಆಸ್ತಿ ಕರ ಪಾವತಿಸಿದ ರಶೀದಿಗಳು, ನಳದ ತೆರಿಗೆ ಪಾವತಿಯ ಪ್ರತಿ, ಆಸ್ತಿ ಮಾಲೀಕರ ಮತದಾರರ ಗುರುತಿನ ಚೀಟಿ, ಪ್ಯಾನ್, ಡಿ.ಎಲ್ ಅಥವಾ ಪಡಿತರ ಚೀಟಿ, ಆಸ್ತಿ ಮಾಲೀಕರ-ಭಾವಚಿತ್ರ, ಆಸ್ತಿಯ ಭಾವಚಿತ್ರ, ಎನ್.ಎ ಆದೇಶ ಪ್ರತಿ, ಅನುಮೋದಿತ ಲೇಔಟ್ ಪ್ರತಿ, ನಿವೇಶನಗಳ ಬಿಡುಗಡೆ ಆದೇಶ, ಕೆ.ಜೆ.ಪಿ ನಕ್ಷೆ (ಕಟ್ಟಡ ಇದ್ದಲ್ಲಿ), ಕಟ್ಟಡ ಪರವಾನಿಗೆ, ನಕ್ಷೆ, ಕಟ್ಟಡ ಪೂರ್ಣಗೊಂಡ ಪ್ರಮಾಣ ಪತ್ರ ಹಾಗೂ ವಿದ್ಯುತ್ ಮೀಟರ್ ಆರ್.ಆರ್ ಸಂಖ್ಯೆ ಇವುಗಳನ್ನು ಸಲ್ಲಿಸಿ ತಮ್ಮ ಆಸ್ತಿಯನ್ನು ಇ-ಆಸ್ತಿ ತಂತ್ರಾಂಶದಲ್ಲಿ ಅರ್ಹ ಆಸ್ತಿಗಳಿಗೆ ನಮೂನೆ-3ರನ್ನು ಪಡೆಯಲು ಈ ಅವಕಾಶವನ್ನು ಸಾರ್ವಜನಿಕರು, ಆಸ್ತಿ ಮಾಲೀಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕೊಪ್ಪಳ ನಗರಸಭೆ ಆಡಳಿತಾಧಿಕಾರಿಗಳು ಮತ್ತು ನಗರಸಭೆಯ ಪೌರಾಯುಕ್ತರು ಜಂಟಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande