
ಕೊಪ್ಪಳ, 19 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ತೊಗರಿ ಖರೀದಿ ನೋಂದಣಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ.
ಸರ್ಕಾರದ ಆದೇಶದಂತೆ 2025-26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರವು ನಿಗದಿಪಡಿಸಿರುವ ಬೆಂಬಲ ಬೆಲೆ ದರ ಪ್ರತಿ ಕ್ವಿಂಟಾಲ್‍ಗೆ ರೂ. 8000 ರಂತೆ ಎಫ್..ಎ.ಕ್ಯೂ. ಗುಣಮಟ್ಟದ ತೊಗರಿಯನ್ನು ಕೇಂದ್ರ ಸರ್ಕಾರದ ಬೆಂಬಲ ಬೆಲೆ ಹಾಗೂ ಕೊಪ್ಪಳ ಜಿಲ್ಲೆಯ ರೈತರಿಂದ ಖರೀದಿಸುವ ಕುರಿತು ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಟಾಸ್ಕ್‍ಫೋರ್ಸ್ ಸಮಿತಿಯ ಸಭೆಯನ್ನು ಜರುಗಿಸಿ, ತೀರ್ಮಾನಿಸಿದಂತೆ ರೈತರ ನೋಂದಣಿ ಕಾಲಾವಧಿಯನ್ನು 80 ದಿನಗಳವರೆಗೆ ಹಾಗೂ ಖರೀದಿಯನ್ನು 90 ದಿನಗಳವರೆಗೆ ನಿಗದಿಪಡಿಸಿ, ಪ್ರತಿ ಎಕರೆಗೆ 4 ಕ್ವಿಂಟಾಲ್‍ನಂತೆ ಫ್ರೂಟ್ಸ್ ತಂತ್ರಾಂಶದಲ್ಲಿ ಲಭ್ಯವಾಗುವ ರೈತರು ತೊಗರಿ ಬೆಳೆದ ಜಮೀನಿನ ವಿಸ್ತೀರ್ಣಕ್ಕೆ ಅನುಗುಣವಾದ ಪ್ರಮಾಣದಲ್ಲಿ ಎಫ್.ಎ.ಕ್ಯೂ., ಗುಣಮಟ್ಟದ ತೊಗರಿ ಉತ್ಪನ್ನವನ್ನು ಖರೀದಿಸಲು ನಿಗದಿಪಡಿಸಲಾಗಿರುತ್ತದೆ. ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ತೊಗರಿ ಖರೀದಿ ನೋಂದಣಿ ಕೇಂದ್ರಗಳನ್ನು ಪ್ರಾರಂಭಿಸಲು ತೀರ್ಮಾನಿಸಲಾಗಿರುತ್ತದೆ.
ಖರೀದಿ ಕೇಂದ್ರಗಳ ವಿವರ: ಹಿರೇಸಿಂಧೋಗಿ ಖರೀದಿ ಕೇಂದ್ರ, ನವಲಿ, ಕುಕನೂರು ಕುಷ್ಟಗಿ, ಹನುಮಸಾಗರ, ತಾವರಗೇರಾ-1, ಕನಕಗಿರಿ, ಹಿರೇನಂದಿಹಾಳ, ಮುದೇನೂರ, ಹಿರೇಮನ್ನಾಪೂರ, ದೋಟಿಹಾಳ, ತಾವರಗೇರಿ-2, ಮೈಲಾಪೂರ ಹಾಗೂ ಹುಲಿಹೈದರ ಸೇರಿ ಒಟ್ಟು 14 ಖರೀದಿ ಕೇಂದ್ರಗಳಾಗಿವೆ. ಖರೀದಿ ನೋಂದಣಿ, ಖರೀದಿ ಕೇಂದ್ರ ಏಜನ್ಸಿಗಳು ಕ್ರಮವಾಗಿ ಪಿಎಸಿಎಸ್ ಹಿರೇಸಿಂಧೋಗಿ, ಪಿಎಸಿಎಸ್ ನವಲಿ, ಪಿಎಸಿಎಸ್ ಕುಕನೂರು/ ಮಸಬಹಂಚಿನಾಳ, ಪಿಎಸಿಎಸ್ ಕುಷ್ಟಗಿ, ಪಿಎಸಿಎಸ್ ಹನುಮಸಾಗರ, ಪಿಎಸಿಎಸ್ ಮೆಣೇದಾಳ, ಶ್ರೀ ಕನಕಚಾಲ ರೈತ ಉತ್ಪಾದಕ ಸಂಘ ಕನಕಗಿರಿ, ಕಪೀಲತೀರ್ಥ ಹಾರ್ಟಿಕಲ್ಚರ್ ಫಾರ್ಮರ್ಸ್ ಪ್ರಡ್ಯೂಸರ್ ಕಂಪನಿ ಲಿಂ ಹಿರೇನಂದಿಹಾಳ, ಪಿಎಸಿಎಸ್ ಮುದೇನೂರ, ಪಿಎಸಿಎಸ್ ಹಿರೇಮನ್ನಾಪೂರ, ಪಿಎಸಿಎಸ್ ನೇಗಿಲ ಒಡೆಯ ಶೇಂಗಾ ರೈತ ಉತ್ಪಾದಕರ ಸಂಘ, ಪಿಎಸಿಎಸ್ ತಾವರಗೇರಾ, ಪಿಎಸಿಎಸ್ ಮೈಲಾಪೂರ ಹಾಗೂ ಪಿಎಸಿಎಸ್ ಹುಲಿಹೈದರ ಆಗಿರುತ್ತವೆ.
ಖರೀದ ಕೇಂದ್ರಗಳ ನೋಡಲ್ ಅಧಿಕಾರಿಗಳ ವಿವರ: ಕೊಪ್ಪಳ ತಾಲ್ಲೂಕಿನ ಹಿರೇಸಿಂಧೋಗಿ ಖರೀದಿ ಕೇಂದ್ರಕ್ಕೆ ಕೊಪ್ಪಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಸಿದ್ದಯ್ಯಸ್ವಾಮಿ ಮೊ.ಸಂ: 9902224089, ಇವರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ. ಅದೇ ರೀತಿ ಕನಕಗಿರಿ ತಾಲ್ಲೂಕಿನ ನವಲಿ, ಕನಕಗಿರಿ ಹಾಗೂ ಹುಲಿಹೈದರ ಖರೀದಿ ಕೇಂದ್ರಗಳಿಗೆ ಕನಕಗಿರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಸಾವಿತ್ರಿ ಪಾಟೀಲ ಮೊ.ಸಂ: 9341978290, ಕುಕನೂರು ತಾಲ್ಲೂಕಿನ ಕುಕನೂರು ಖರೀದಿ ಕೇಂದ್ರಕ್ಕೆ ಯಲಬುರ್ಗಾ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ (ಕೇಂದ್ರ ಕಛೇರಿ ಕುಕನೂರು) ಕಾರ್ಯದರ್ಶಿ ಗುರುಸ್ವಾಮಿ ಗುಡಿ ಮೊ.ಸಂ: 9972054874, ಕುಷ್ಟಗಿ ತಾಲ್ಲೂಕಿನ ಕುಷ್ಟಗಿ, ಹನುಮಸಾಗರ, ತಾವರಗೇರಾ, ಹಿರೇನಂದಿಹಾಳ, ಮುದೇನೂರು, ಹಿರೇಮನ್ನಾಪೂರ ಹಾಗೂ ದೋಟಿಹಾಳ ಖರೀದಿ ಕೇಂದ್ರಗಳಿಗೆ ಕುಷ್ಟಗಿಂ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ಸುರೇಶ ಬಿ. ತಂಗನೂರು ಮೊ.ಸಂ: 9880886909 ಮತ್ತು ಕಾರಟಗಿ ತಾಲ್ಲೂಕಿನ ಮೈಲಾಪೂರ ಖರೀದಿ ಕೇಂದ್ರಕ್ಕೆ ಕಾರಟಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ಹರೀಶ ಪತ್ತಾರ ಮೊ.ಸಂ 9060893320 ಇವರನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ.
ಪ್ರತಿ ಎಕರೆಗೆ 4 ಕ್ವಿಂಟಾಲ್‍ನಂತೆ ಫ್ರೋಟ್ಸ್ ತಂತ್ರಾಂಶದಲ್ಲಿ ಲಭ್ಯವಾಗುವ ರೈತರು ತೊಗರಿ ಬೆಳೆದ ಜಮೀನಿನ ವಿಸ್ತೀರ್ಣಕ್ಕೆ ಅನುಗುಣವಾದ ಪ್ರಮಾಣದಲ್ಲಿ ಎಫ್.ಎ.ಕ್ಯೂ., ಗುಣಮಟ್ಟದ ತೊಗರಿ ಉತ್ಪನ್ನವನ್ನು ಖರೀದಸಲಾಗುತ್ತದೆ. ಎಫ್.ಎ.ಕ್ಯೂ. ಗುಣಮಟ್ಟದ ತೊಗರಿಯನ್ನು ಮಾತ್ರ ಖರೀದಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಶಾಖಾ ವ್ಯವಸ್ಥಾಪಕರು, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ, ಕೊಪ್ಪಳ (08539-230040) ಇವರನ್ನು ಸಂಪರ್ಕಿಸಬಹುದು ಎಂದು ಕೊಪ್ಪಳ ಕೃಷಿ ಮಾರಾಟ ಇಲಾಖೆಯ ಸಹಾಯಕ ನಿರ್ದೇಶಕರು ಹಾಗೂ ಜಿಲ್ಲಾ ಟಾಸ್ಕ್‍ಫೋರ್ಸ್ ಸಮಿತಿಯ ಸದಸ್ಯ ಕಾರ್ಯದರ್ಶಿ ಅವರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್