ಶುಕ್ರವಾರದ ರಾಶಿ ಫಲ
ಹುಬ್ಬಳ್ಳಿ, 19 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಶುಕ್ರವಾರದ ರಾಶಿ ಫಲ *ಮೇಷ ರಾಶಿ.* ಕೆಲವು ವ್ಯವಹಾರಗಳಲ್ಲಿ ಅಲ್ಪಸ್ವಲ್ಪ ಗೊಂದಲಗಳು ಉಂಟಾಗುತ್ತವೆ, ಹಣಕಾಸಿನ ಸಮಸ್ಯೆಗಳಿಂದ ಹೊಸ ಸಾಲಗಳನ್ನು ಮಾಡಲಾಗುತ್ತದೆ. ದೈವಿಕ ಸೇವೆಗಳಲ್ಲಿ ಭಾಗವಹಿಸುತ್ತೀರಿ . ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ವಿನಾಕಾರಣ
ಶುಕ್ರವಾರದ ರಾಶಿ ಫಲ


ಹುಬ್ಬಳ್ಳಿ, 19 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಶುಕ್ರವಾರದ ರಾಶಿ ಫಲ

*ಮೇಷ ರಾಶಿ.*

ಕೆಲವು ವ್ಯವಹಾರಗಳಲ್ಲಿ ಅಲ್ಪಸ್ವಲ್ಪ ಗೊಂದಲಗಳು ಉಂಟಾಗುತ್ತವೆ, ಹಣಕಾಸಿನ ಸಮಸ್ಯೆಗಳಿಂದ ಹೊಸ ಸಾಲಗಳನ್ನು ಮಾಡಲಾಗುತ್ತದೆ. ದೈವಿಕ ಸೇವೆಗಳಲ್ಲಿ ಭಾಗವಹಿಸುತ್ತೀರಿ . ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ವಿನಾಕಾರಣ ವಿವಾದಗಳು ಉದ್ಭವಿಸುತ್ತವೆ. ದೈವಿಕ ಚಟುವಟಿಕೆಗಳ ಮೇಲೆ ಕೇಂದ್ರೀಕರಿಸುತ್ತೀರಿ.

*ವೃಷಭ ರಾಶಿ.*

ಮನೆಯ ಹೊರಗೆ ಪರಿಸ್ಥಿತಿಗಳು ಅನುಕೂಲಕರವಾಗಿರುತ್ತದೆ. ಆಧ್ಯಾತ್ಮಿಕ ಸೇವಾ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ. ಕೈಗೊಂಡ ಕೆಲಸದಲ್ಲಿನ ಅಡೆತಡೆಗಳು ನಿವಾರಣೆಯಾಗುತ್ತವೆ. ಮನೆಯ ಹೊರಗೆ ಅನುಕೂಲಕರ ಪರಿಸ್ಥಿತಿಗಳಿರುತ್ತವೆ. ಸಮಾಜದಲ್ಲಿ ಪರಿಚಯಗಳು ಹೆಚ್ಚಾಗುತ್ತವೆ. ವ್ಯಾಪಾರಗಳು ಲಾಭದಾಯಕವಾಗಿರುತ್ತವೆ ಮತ್ತು ಉದ್ಯೋಗಗಳಲ್ಲಿ ಬಡ್ತಿಗಳು ಹೆಚ್ಚಾಗುತ್ತವೆ.

*ಮಿಥುನ ರಾಶಿ.*

ಬಂಧು ಮಿತ್ರರಿಂದ ಶುಭ ಕಾರ್ಯಕ್ಕೆ ಆಹ್ವಾನಗಳು ಬರುತ್ತವೆ. ಕುಟುಂಬ ಸದಸ್ಯರೊಂದಿಗೆ ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ. ಕೈಗೆತ್ತಿಕೊಂಡ ಕೆಲಸಗಳು ವೇಗಗೊಳಿಸುತ್ತೀರಿ. ನಿಮ್ಮ ಆರೋಗ್ಯ ವಿಷಯದಲ್ಲಿ ಶ್ರದ್ಧೆ ವಹಿಸುತ್ತೀರಿ. ವ್ಯಾಪಾರಗಳು ವಿಶೇಷವಾಗಿ ಲಾಭವನ್ನು ಪಡೆಯುತ್ತವೆ ಮತ್ತು ಉದ್ಯೋಗಗಳಲ್ಲಿ ಹೊಸ ಪ್ರೋತ್ಸಾಹಗಳು ದೊರೆಯುತ್ತವೆ.

*ಕಟಕ ರಾಶಿ.*

ಆತ್ಮೀಯ ಸ್ನೇಹಿತರಿಂದ ದಿಢೀರ್ ಆರ್ಥಿಕ ಲಾಭವಾಗುವ ಸೂಚನೆಗಳಿವೆ. ಸಮಾಜದ ಪ್ರಮುಖ ವ್ಯಕ್ತಿಗಳೊಂದಿಗೆ ಸಂಪರ್ಕವು ವಿಸ್ತಾರಗೊಳ್ಳುತ್ತದೆ. ಸಂಬಂಧಿಕರಿಂದ ಅಪರೂಪದ ಆಹ್ವಾನಗಳು ಬರುತ್ತವೆ. ಹೊಸ ವಾಹನ ಯೋಗವಿದೆ. ವ್ಯಾಪಾರಗಳಿಗೆ ಲಾಭ ದೊರೆಯುತ್ತದೆ. ಉದ್ಯೋಗಗಳಲ್ಲಿನ ಸಮಸ್ಯೆಗಳನ್ನು ಪರಿಹರಿಸುತ್ತೀರಿ.

*ಸಿಂಹ ರಾಶಿ.*

ಮನೆಯ ಹೊರಗಿನ ಸಮಸ್ಯೆಗಳಿಂದ ಮುಕ್ತಿ ಪಡೆಯುತ್ತೀರಿ. ಶುಭ ಕಾರ್ಯಕ್ಕೆ ಆಹ್ವಾನಗಳನ್ನು ಸ್ವೀಕರಿಸುತ್ತೀರಿ. ಕೈಗೊಂಡ ವ್ಯವಹಾರಗಳು ಅನುಕೂಲಕರವಾಗಿರುತ್ತದೆ. ದೇವಾಲಯಗಳಿಗೆ ಭೇಟಿ ನೀಡಲಾಗುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ನಿರೀಕ್ಷಿತ ಪ್ರಗತಿ ಕಂಡುಬರುತ್ತದೆ.

*ಕನ್ಯಾ ರಾಶಿ.*

ಪ್ರಮುಖ ವ್ಯವಹಾರಗಳಲ್ಲಿ ಪರಿಸ್ಥಿತಿಗಳು ಅನುಕೂಲಕರವಾಗಿರುವುದಿಲ್ಲ. ಶ್ರಮದಿಂದಲೂ ಕೆಲಸಗಳು ಪೂರ್ಣಗೊಳ್ಳುವುದಿಲ್ಲ. ಸಂಬಂಧಿಕರೊಂದಿಗೆ ಸ್ವಲ್ಪ ಭಿನ್ನಾಭಿಪ್ರಾಯ ಇರುತ್ತದೆ. ಮಕ್ಕಳ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ದೂರ ಪ್ರಯಾಣವನ್ನು ಮುಂದೂಡಲಾಗುತ್ತದೆ. ವ್ಯಾಪಾರಗಳು ನಿಧಾನವಾಗುತ್ತವೆ. ಉದ್ಯೋಗದಲ್ಲಿ ಸಮಸ್ಯೆಗಳು ಉಂಟಾಗುತ್ತವೆ.

*ತುಲಾ ರಾಶಿ.*

ಕೈಗೊಂಡ ಕೆಲಸಗಳಲ್ಲಿ ವಿಘ್ನ ಉಂಟಾಗುತ್ತದೆ. ಹೊಸ ಸಾಲದ ಪ್ರಯತ್ನಗಳು ನಡೆಯುತ್ತವೆ. ಪ್ರಯಾಣದ ಸಮಯದಲ್ಲಿ ಹೊಸ ಪರಿಚಯಗಳು ಹೆಚ್ಚಾಗುತ್ತವೆ. ಆಧ್ಯಾತ್ಮಿಕ ಸೇವಾ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ. ವ್ಯಾಪಾರಗಳು ಸ್ವಲ್ಪ ನಿಧಾನವಾಗಿರುತ್ತವೆ. ಉದ್ಯೋಗಗಳಲ್ಲಿ ಹೆಚ್ಚುವರಿ ಜವಾಬ್ದಾರಿಗಳು ಕಿರಿಕಿರಿಯನ್ನು ಉಂಟುಮಾಡುತ್ತವೆ.

*ವೃಶ್ಚಿಕ ರಾಶಿ.*

ಬಾಲ್ಯದ ಸ್ನೇಹಿತರಿಂದ ಶುಭ ಸುದ್ದಿ ಸಿಗುತ್ತದೆ. ಹಣಕಾಸಿನ ವಿಷಯಗಳು ತೃಪ್ತಿಕರವಾಗಿರುತ್ತವೆ. ಕೈಗೊಂಡ ವ್ಯವಹಾರಗಳಲ್ಲಿ ಯಶಸ್ವಿಯಾಗುತ್ತೀರಿ. ಸಮಾಜದಲ್ಲಿ ಖ್ಯಾತಿ ಹೆಚ್ಚಾಗುತ್ತದೆ. ವ್ಯಾಪಾರ ಮತ್ತು ಉದ್ಯೋಗಗಳು ಹೆಚ್ಚು ಲಾಭದಾಯಕವಾಗಿರುತ್ತದೆ. ಬಂಧು ಮಿತ್ರರಿಂದ ಬೆಂಬಲ ದೊರೆಯುತ್ತದೆ.

*ಧನುಸ್ಸು ರಾಶಿ.*

ಬಂಧುಗಳಿಂದ ಶುಭ ಸಮಾಚಾರ ಸಿಗುತ್ತದೆ. ಹಠಾತ್ ಪ್ರಯಾಣ ಸೂಚನೆಗಳಿವೆ. ಕೈಗೆತ್ತಿಕೊಂಡ ಕೆಲಸದಲ್ಲಿ ಅಪ್ರಯತ್ನ ಕಾರ್ಯ ಸಿದ್ಧತೆ ಇರುತ್ತದೆ. ಸ್ಥಿರಾಸ್ತಿ ವಿವಾದಗಳಲ್ಲಿನ ಕಿರಿಕಿರಿಗಳು ದೂರವಾಗುತ್ತವೆ. ವ್ಯಾಪಾರಗಳು ಚೆನ್ನಾಗಿ ನಡೆಯುತ್ತವೆ. ಉದ್ಯೋಗದಲ್ಲಿ ಅಧಿಕಾರಿಗಳ ಬೆಂಬಲ ಫೋರೆಯುತ್ತದೆ.

*ಮಕರ ರಾಶಿ.*

ಕೈಗೊಂಡ ವ್ಯವಹಾರಗಳಲ್ಲಿ ತೊಂದರೆಗಳು ಉಂಟಾಗುತ್ತದೆ. ಹಣಕಾಸಿನ ವಹಿವಾಟು ನಿರಾಶಾದಾಯಕವಾಗಿರುತ್ತದೆ. ಸಂಬಂಧಿಕರೊಂದಿಗೆ ಅನಿರೀಕ್ಷಿತ ಭಿನ್ನಾಭಿಪ್ರಾಯಗಳಿರುತ್ತವೆ. ದೂರ ಪ್ರಯಾಣದದಲ್ಲಿ ರಸ್ತೆ ಅಡೆತಡೆಗಳಿರುತ್ತವೆ . ದೈವಿಕ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ. ವ್ಯಾಪಾರ ಮತ್ತು ಉದ್ಯೋಗಗಳು ಸಮಸ್ಯಾತ್ಮಕವಾಗಿರುತ್ತದೆ.

*ಕುಂಭ ರಾಶಿ.*

ಹಣಕಾಸಿನ ವ್ಯವಹಾರಗಳಲ್ಲಿ ಹೆಚ್ಚಿನ ಒತ್ತಡ ಉಂಟಾಗುತ್ತದೆ. ಹಠಾತ್ ಪ್ರಯಾಣ ಸೂಚನೆಗಳಿವೆ. ಬಂಧು ಮಿತ್ರರಿಂದ ಒತ್ತಡ ಹೆಚ್ಚಾಗುತ್ತದೆ. ನಿರುದ್ಯೋಗ ಪ್ರಯತ್ನಗಳು ನಿರಾಶಾದಾಯಕವಾಗಿರುತ್ತವೆ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿನ ಸಮಸ್ಯೆಗಳಿಂದ ಮಾನಸಿಕ ನೆಮ್ಮದಿಯ ಕೊರತೆಯಿರುತ್ತದೆ.

*ಮೀನ ರಾಶಿ.*

ಪ್ರಮುಖ ಕಾರ್ಯಗಳಲ್ಲಿ ಯಶಸ್ಸು ಸಿಗುತ್ತದೆ. ನ್ಯಾಯಾಲಯದ ವಿವಾದಗಳು ಬಗೆಹರಿಯುತ್ತವೆ. ಆತ್ಮೀಯರಿಂದ ಶುಭ ಸುದ್ದಿ ದೊರೆಯುತ್ತದೆ. ಸ್ಥಿರಾಸ್ತಿ ಖರೀದಿಸುತ್ತೀರಿ. ದೈವಭಕ್ತಿ ಹೆಚ್ಚಾಗುತ್ತದೆ. ವ್ಯಾಪಾರಗಳು ವಿಸ್ತರಿಸುತ್ತವೆ. ಉದ್ಯೋಗದಲ್ಲಿ ನಿಮ್ಮ ಕಾರ್ಯಶೈಲಿಯಿಂದ ಎಲ್ಲರನ್ನೂ ಮೆಚ್ಚಿಸುತ್ತೀರಿ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande