ಪ್ರತಿಕೂಲ ಹವಾಮಾನ ; ಶ್ರೀನಗರ ವಿಮಾನ ನಿಲ್ದಾಣದಿಂದ ಏಳು ವಿಮಾನ ರದ್ದು
ಅಂತಾರಾಷ್ಟ್ರೀಯ
Flight cancel


ಶ್ರೀನಗರ, 19 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಪ್ರತಿಕೂಲ ಹವಾಮಾನ ಹಾಗೂ ಕಾರ್ಯಾಚರಣಾತ್ಮಕ ಕಾರಣಗಳಿಂದಾಗಿ ಶುಕ್ರವಾರ ಶ್ರೀನಗರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕನಿಷ್ಠ ಏಳು ವಿಮಾನಗಳನ್ನು ರದ್ದುಗೊಳಿಸಲಾಗಿದೆ.

ವಿಮಾನ ನಿಲ್ದಾಣ ಅಧಿಕಾರಿಗಳ ಮಾಹಿತಿ ಪ್ರಕಾರ, ದೆಹಲಿಯಲ್ಲಿನ ಪ್ರತಿಕೂಲ ಹವಾಮಾನದಿಂದ ಏರ್ ಇಂಡಿಯಾ ವಿಮಾನಗಳು AI-3423/3424 ಮತ್ತು AI-1799/1810 ರದ್ದಾಗಿವೆ. ಅಮೃತಸರದಲ್ಲಿ ಪ್ರತಿಕೂಲ ಹವಾಮಾನ ಹಿನ್ನೆಲೆ ಇಂಡಿಗೋ ವಿಮಾನಗಳು 6E-6164/6165 ರದ್ದುಪಡಿಸಲಾಗಿದೆ. ಅದೇ ರೀತಿ, ದೆಹಲಿಯ ಹವಾಮಾನ ಕಾರಣದಿಂದ ಸ್ಪೈಸ್‌ಜೆಟ್ ವಿಮಾನಗಳು SG-661/664 ರದ್ದುಗೊಂಡಿವೆ.

ಇದಲ್ಲದೆ, ಕಾರ್ಯಾಚರಣಾತ್ಮಕ ಕಾರಣಗಳಿಂದ ಸ್ಪೈಸ್‌ಜೆಟ್ SG-180/181 ಹಾಗೂ ಇಂಡಿಗೋ ವಿಮಾನಗಳು 6E-6961/6962 (ಶ್ರೀನಗರ–ಕೋಲ್ಕತ್ತಾ) ಮತ್ತು 6E-2044 ಕೂಡ ರದ್ದಾಗಿವೆ.

ವಿಮಾನ ನಿಲ್ದಾಣಕ್ಕೆ ಹೊರಡುವ ಮೊದಲು ಪ್ರಯಾಣಿಕರು ತಮ್ಮ ವಿಮಾನದ ಸ್ಥಿತಿಯನ್ನು ಆಯಾ ವಿಮಾನಯಾನ ಸಂಸ್ಥೆಗಳೊಂದಿಗೆ ಪರಿಶೀಲಿಸಿಕೊಳ್ಳುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande