ಡಿ.23 ರಂದು ವಿಶೇಷ ಚೇತನ ಮಕ್ಕಳಿಗೆ ವೈದ್ಯಕೀಯ ಮೌಲ್ಯಾಂಕನ ಶಿಬಿರ
ಹೊಸಪೇಟೆ, 19 ಡಿಸೆಂಬರ್ (ಹಿ.ಸ.) : ಆ್ಯಂಕರ್ : 2025-26 ನೇ ಸಾಲಿನ ಂಐIಒಅಔ ಸಂಸ್ಥೆ ಸಹಯೋಗದಲ್ಲಿ ಹೊಸಪೇಟೆ ತಾಲೂಕಿನಲ್ಲಿ 1 ರಿಂದ 12 ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿರುವ ವಿಶೇಷ ಚೇತನ ಮಕ್ಕಳ (ದೃಷ್ಟಿ ದೋಷ, ದೈಹಿಕ ನೂನ್ಯತೆ, ಬೌದ್ಧಿಕ ವಿಕಲತೆ, ಸೆರಬ್ರಲ್ ಪಾಲ್ಸಿ, ಬಹುವಿದ ವಿಕಲತೆ, ಆಟಿಸಂ,
ಡಿ.23 ರಂದು ವಿಶೇಷ ಚೇತನ ಮಕ್ಕಳಿಗೆ ವೈದ್ಯಕೀಯ ಮೌಲ್ಯಾಂಕನ ಶಿಬಿರ


ಹೊಸಪೇಟೆ, 19 ಡಿಸೆಂಬರ್ (ಹಿ.ಸ.) :

ಆ್ಯಂಕರ್ : 2025-26 ನೇ ಸಾಲಿನ ಂಐIಒಅಔ ಸಂಸ್ಥೆ ಸಹಯೋಗದಲ್ಲಿ ಹೊಸಪೇಟೆ ತಾಲೂಕಿನಲ್ಲಿ 1 ರಿಂದ 12 ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿರುವ ವಿಶೇಷ ಚೇತನ ಮಕ್ಕಳ (ದೃಷ್ಟಿ ದೋಷ, ದೈಹಿಕ ನೂನ್ಯತೆ, ಬೌದ್ಧಿಕ ವಿಕಲತೆ, ಸೆರಬ್ರಲ್ ಪಾಲ್ಸಿ, ಬಹುವಿದ ವಿಕಲತೆ, ಆಟಿಸಂ, ಹಾಗೂ ಶ್ರವಣದೋಷ) ವೈದ್ಯಕೀಯ ಮೌಲ್ಯಾಂಕನ ಶಿಬಿರವನ್ನು ಡಿ.23 ರಂದು ಬೆಳಿಗ್ಗೆ 10 ಗಂಟೆಗೆ ಕ್ಷೇತ್ರ ಸಮನ್ವಯಾಧಿಕಾರಿಗಳ (ಬಿಆರ್‍ಸಿ) ಕಚೇರಿಯಲ್ಲಿ ಗುರುಭವನ ಹಿಂದಗಡೆ, ಬಳ್ಳಾರಿ ರಸ್ತೆ ಹೊಸಪೇಟೆಯಲ್ಲಿ ವೈದ್ಯಕೀಯ ಮೌಲ್ಯಾಂಕನ ಶಿಬಿರವನ್ನು ಆಯೋಜಿಸಿದ್ದು, ತಾಲೂಕಿನಲ್ಲಿರುವ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ, ಪ್ರೌಢ ಹಾಗೂ ಕಾಲೇಜಿನಲ್ಲಿ ಅಭ್ಯಾಸ ಮಾಡುತ್ತಿರುವ ವಿಶೇಷ ಚೇತನ ಮಕ್ಕಳು ಶಿಬಿರದಲ್ಲಿ ಪಾಲ್ಗೊಂಡು ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಶೇಖರಪ್ಪ ಹೊರಪೇಟೆ ಅವರು ತಿಳಿಸಿದ್ದಾರೆ.

ಶಿಬಿರಕ್ಕೆ ಹಾಜರಾಗುವ ಮಕ್ಕಳ ದಾಖಲಾತಿ : ಪೋಟೋ, ಶಾಲಾ ದೃಢೀಕರಣ, ಯುಡಿಐಡಿ ಕಾರ್ಡ್, ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಪಾಲಕರ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್ ಬುಕ್ ತಪ್ಪದೇ ಶಿಬಿರಕ್ಕೆ ತರಬೇಕು. ಹೆಚ್ಚಿನ ಮಾಹಿತಿಗಾಗಿ ಮೊ.9480695078, 9449409488, 7411832070 ಸಂಖ್ಯೆಗಳಿಗೆ ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande