

ಕೊಪ್ಪಳ, 19 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಸಂಸ್ಥಾನ ಶ್ರೀ ಗವಿಮಠ ಜಾತ್ರೆಯೂ ಪ್ರತಿ ವರ್ಷ ವಿಭಿನ್ನ, ವಿಶಿಷ್ಟ ರೂಪದಲ್ಲಿ ಅರ್ಥ ಪೂರ್ಣವಾಗಿ ಜರುಗುತ್ತಿದೆ. ಆಧುನಿಕತೆಯ ಸ್ಪರ್ಶದ ಜೊತೆಗೆ ಭಕ್ತರಿಗೆ 2026ರ ಮಹಾಜಾತ್ರೆಯ ಆಹ್ವಾನ ಶ್ರೀಮಠದ ಭಕ್ತರಿಗೆ ನೇರವಾಗಿ ತಲುಪಿಸುವ ಸತ್ಕಾರ್ಯದಲ್ಲಿ ತೊಡಗಿದೆ. ಅದಕ್ಕೆ ಈ ಬಾರಿಯೂ ಜನೇವರಿ 05, 06 ಹಾಗೂ 07ರಂದು ನಡೆಯುವ ಅಜ್ಜನ ಜಾತ್ರೆಗೆ ಭಕ್ತರನ್ನು ಆಹ್ವಾನಿಸುವ ಆ ದೃಶ್ಯವನ್ನು ಡ್ರೋಣ್ ಕ್ಯಾಮರಾದ ಮೂಲಕ ಸೆರೆಹಿಡಿದ ವೀಡಿಯೊದೊಂದಿಗೆ ಡಿಜಿಟಲ್ ತಂತ್ರಜ್ಞಾನವನ್ನು ಬಳಸಿಕೊಂಡು ತಯಾರಿಸಿದ ಟ್ರೇಲರ್ ಸಾಂಗ್‍ಇಂದು 19.12.2025 ರ ಸಮಯ ಬೆಳಿಗ್ಗೆ 09:00ಗಂಟೆಗೆ ಶ್ರೀಮಠದ ಸ್ವಚ್ಚತಾ ಕಾರ್ಯದಲ್ಲಿ ತೊಡಗಿಕೊಂಡು ಸೇವೆಗೈಯುತ್ತಿರುವ ನಾಗವ್ವ ಮ್ಯಾಗಳಮನಿ, ಹುಲಿಗೆವ್ವ ಅಗಳಕೇರಾ, ಶೋಭಾ ಇಟಗಿ, ಲಕ್ಷ್ಮೀ ಬೆಲ್ಲದ, ಭರಮವ್ವ ಭೋಚಹನಳ್ಳಿ, ಅಮೃತಾ, ಯಲ್ಲಮ್ಮ, ಈರಮ್ಮ, ಮಾತೆಂಗವ್ವ, ರುದ್ರಗೌಡ, ಮಲ್ಲಿಕಾರ್ಜುನಯ್ಯ ಸೇವಕರು ಇವರಿಂದ ಬಿಡುಗಡೆಗೂಳಿಸಿದ್ದು ಜಾತ್ರೆಯ ವಿಶೇಷತೆಯಾಗಿದೆ.
ಇದರಲ್ಲಿ “ಭಕ್ತಿಯ ಮನೆ ಮನಗಳಲ್ಲಿ
ಮುಕ್ತಿಯ ಕೆನೆ ನೆನಹಿನಲ್ಲಿ
ಓಂಕಾರವುಕೋಟೆಕಟ್ಟಿ
ಬೆಟ್ಟಗಳು ಧ್ಯಾನದಲಿ
ಸಿದ್ದ ಪುರುಷ ಗವಿಸಿದ್ದನೇ
ಇಷ್ಟ ಪ್ರಾಣ ಭಾವದಲ್ಲಿ
ಜಾತ್ರೋತ್ಸವ ನಮ್ಮಯಾತ್ರೋತ್ಸವ”
ಎಂಬ ಅಧಮ್ಯ, ಸುಂದರ ಭಕ್ತಿ ತುಂಬಿದ ಸಾಲುಗಳಿರುವ ಈ ಸಾಹಿತ್ಯಕೆ ್ಕಜೀವ ತುಂಬುವ ಕಂಠಸಿರಿಯ ಕೊಪ್ಪಳದ ಗಾಯಕ ಸದಾಶಿವ ಪಾಟೀಲರು ಮೈದುಂಬಿ ಹಾಡಿರುತ್ತಾರೆ. ಈ ಹಾಡಿನಲ್ಲಿ ಶ್ರೀ ಶಿವಶಾಂತವೀರ ಹಾಗೂ ಶ್ರೀ ಮರಿಶಾಂತವೀರ ಮಹಾಸ್ವಾಮಿಗಳವರ ಮೂರ್ತಿಶಿಲ್ಪ, ಭಕ್ತಿ ಸಂಗೀತ, ಚಿಕೇನಕೊಪ್ಪದ ಶರಣರ ಧೀರ್ಘದಂಡ ನಮಸ್ಕಾರ, ಜಾತ್ರಾ ಮಹಾದಾಸೋಹದ ಪ್ರಸಾದದ ಸಿದ್ಧತೆ ಮತ್ತು ಭಕ್ತರ ಸೇವನೆ, ಹಾಗೂ ಶ್ರೀ ಗವಿಮಠದ ಸೆವೆಯಲ್ಲಿ ಇತರ ಸೆವೆಯಲ್ಲಿ ತೊಡಗಿದ ವಿವಿಧ ಸೇವಕರ, ಶ್ರೀಮಠದ ಜಾತ್ರೆಯ ಚಿತ್ರಿತ ವೈಶಿಷ್ಟ್ಯಪೂರ್ಣ ಪುಣ್ಯಕಾರ್ಯಗಳು ಅಂತರ್ಗತವಾಗಿವೆ. ಇಲ್ಲಿನ ಪ್ರಾಕೃತಿಕ ಬೆಟ್ಟ-ಗುಡ್ಡಗಳ, ಕೆರೆ, ಸಹಜತೆಯ ವೈಭವ, ಹಾಗೂ ಚಿತ್ರಿತ ವೀಡಿಯೋ ಬಳಸಿ ಸಂಯೋಜನೆ ಮಾಡಿ ಚಿತ್ರೀಕರಣ ಮಾಡಿದ ವೀಡಿಯೋ ಟ್ರೇಲರ್ ಸಾಂಗ್‍ನೊಂದಿಗೆ ಶ್ರೀಮಠದ ಭಕ್ತರಿಗೆ ಈ ವರ್ಷದಜಾತ್ರೆಗೆ ಆಹ್ವಾನ ನೀಡಲಾಗಿದೆ.
• ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ ಮಹಾವೈಭವ ವಾಕ ಥ್ರೂ ವಿಡಿಯೋ
https://drive.google.com/file/d/14eUiJRKo_0xl4WclwdYxFlKmSC-3lcfp/view?usp=sharing
• ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ 2026ರ ವಿಡಿಯೋ ಆಮಂತ್ರಣ ಟ್ರೈಲರ್
https://drive.google.com/file/d/14QCE6_Enl4t5fcAlcHip82nOia3VHsy_/view?usp=sharing
ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ ಮಹಾವೈಭವ ವಾಕ ಥ್ರೂ ವಿಡಿಯೋ
https://drive.google.com/file/d/14eUiJRKo_0xl4WclwdYxFlKmSC-3lcfp/view?usp=sharing
ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ 2026ರ ವಿಡಿಯೋ ಆಮಂತ್ರಣ ಟ್ರೈಲರ್
https://drive.google.com/file/d/14QCE6_Enl4t5fcAlcHip82nOia3VHsy_/view?usp=sharing
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್