
ಕೊಪ್ಪಳ , 19 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಆಲಮಟ್ಟಿ–ಕುಷ್ಟಗಿ ರೈಲು ಮಾರ್ಗದ ಸಮೀಕ್ಷೆಯನ್ನು ಚಿತ್ರದುರ್ಗವರೆಗೆ ವಿಸ್ತರಿಸುವಂತೆ ಒತ್ತಾಯಿಸಿ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಡಾ. ಬಸವರಾಜ ಕ್ಯಾವಟರ್ ಅವರು ದೆಹಲಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.
ಆಲಮಟ್ಟಿ–ಕುಷ್ಟಗಿ ನಡುವಿನ ರೈಲು ಮಾರ್ಗದ ಸಮೀಕ್ಷೆ ಪೂರ್ಣಗೊಂಡಿರುವ ಬಗ್ಗೆ ಮಾಹಿತಿ ದೊರೆತಿದ್ದು, ಈ ಮಹತ್ವದ ಕಾರ್ಯದ ಹಿಂದೆ ನಿಮ್ಮ ನಿರಂತರ ಪ್ರಯತ್ನವಿರುವುದು ಮೆಚ್ಚುವಂತಹದ್ದು. ಅಂತೆಯೇ ಆಲಮಟ್ಟಿ–ಕುಷ್ಟಗಿ ರೈಲು ಮಾರ್ಗವನ್ನು ಮುಂದುವರೆಸಿ ಚಿತ್ರದುರ್ಗವರೆಗೆ ವಿಸ್ತರಿಸುವಂತೆ ಮಾಡಲು ತಾವು ಪ್ರಯತ್ನ ಮಾಡಬೇಕು.
ಈ ನಿಟ್ಟಿನಲ್ಲಿ ಕೇಂದ್ರ ರೈಲ್ವೆ ಸಚಿವರನ್ನು ಮನವೊಲಿಸಿ, ಕಾರ್ಯಗತವಾಗುವಂತೆ ಮಾಡಬೇಕು. ಈಗಾಗಲೇ ರೈಲ್ವೆ ಸಚಿವರು, ನಿಮಗೆ ಕಳುಹಿಸಿರುವ ಪತ್ರದಲ್ಲಿಯೂ ಆಲಮಟ್ಟಿ–ಕುಷ್ಟಗಿ ನಡುವಿನ ಸಮೀಕ್ಷೆ ಪೂರ್ಣಗೊಂಡಿದೆ ಎಂದು ಉಲ್ಲೇಖಿಸಲಾಗಿದೆ.
ಈ ರೈಲು ಮಾರ್ಗವನ್ನು ಚಿತ್ರದುರ್ಗವರೆಗೆ ವಿಸ್ತರಿಸಿದಲ್ಲಿ ವಿಜಯಪುರ (ಬಿಜಾಪುರ) ಮತ್ತು ಬೆಂಗಳೂರು ನಡುವಿನ ದೂರವು ಸುಮಾರು 170 ಕಿಲೋಮೀಟರ್‌ಗಳಷ್ಟು ಕಡಿಮೆಯಾಗುತ್ತದೆ. ಇದರಿಂದ ಉತ್ತರ ಕರ್ನಾಟಕದ ಜನರಿಗೆ ಬೆಂಗಳೂರಿಗೆ ವೇಗವಾದ ಹಾಗೂ ಸುಲಭ ಪ್ರಯಾಣ ಸಾಧ್ಯವಾಗಲಿದೆ. ಜತೆಗೆ ವ್ಯಾಪಾರ, ಸಂಪರ್ಕ ವ್ಯವಸ್ಥೆ ಮತ್ತು ಒಟ್ಟಾರೆ ಆರ್ಥಿಕ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಲಿದೆ.
ಆದ್ದರಿಂದ ದಯವಿಟ್ಟು ಆಲಮಟ್ಟಿ–ಕುಷ್ಟಗಿ ರೈಲು ಮಾರ್ಗವನ್ನು ಚಿತ್ರದುರ್ಗವರೆಗೆ ವಿಸ್ತರಿಸುವುದನ್ನು ಪರಿಗಣಿಸಿ, ಮುಂದಿನ ಬಜೆಟ್ ಅಧಿವೇಶನದಲ್ಲಿ ಅಗತ್ಯ ಅನುದಾನವನ್ನು ಮಂಜೂರು ಮಾಡಲು ಕ್ರಮವಾಗುವಂತೆ ತಾವುಗಳು ಇಚ್ಛಾಶಕ್ತಿ ವಹಿಸಬೇಕೆಂದು ವೈದ್ಯ ಕ್ಯಾವಟರ್ ಅವರು ಮನವಿ ಮಾಡಿದರು.
ಆಲಮಟ್ಟಿ-ಕುಷ್ಟಗಿ ರೈಲು ಮಾರ್ಗದ ಸಮೀಕ್ಷೆಯನ್ನು ಚಿತ್ರದುರ್ಗವರೆಗೆ ವಿಸ್ತರಿಸುವಂತೆ ಒತ್ತಾಯಿಸಿ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ. ಬಸವರಾಜ ಕ್ಯಾವಟರ್ ಅವರು ಗುರುವಾರ ದೆಹಲಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್