ಡಾ.ಡಿ.ವಿ. ಪರಮಶಿವಮೂರ್ತಿಯವರಿಗೆ ರಾಷ್ಟ್ರೀಯ ಕನ್ನಡ ರತ್ನ ಪ್ರಶಸ್ತಿ
ಹಂಪಿ, 19 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಕನ್ನಡ ನಾಡು-ನುಡಿ ಸಂಸ್ಕೃತಿಯ ಅಸ್ಮಿತೆಯನ್ನು ಹೊರನಾಡಿನಲ್ಲಿ ಉಳಿಸಿ ಬೆಳೆಸುವ ಕಾಯಕವನ್ನು ಚೆಂಬೂರು ಕರ್ನಾಟಕ ಸಂಘವು ಕಳೆದ ಏಳು ದಶಕಗಳಿಂದ ಮಾಡುತ್ತಾ ಬಂದಿದೆ. ಈ ಕಾರ್ಯಕ್ರಮದಲ್ಲಿ ರಾಷ್ಟ್ರಮಟ್ಟದಲ್ಲಿ ಗಣನೀಯ ಸಾಧನೆ ಮಾಡಿದ ಕನ್ನಡಿಗರನ್ನು ಗುರುತಿಸಿ `
ಡಾ.ಡಿ.ವಿ. ಪರಮಶಿವಮೂರ್ತಿಯವರಿಗೆ ರಾಷ್ಟ್ರೀಯ ಕನ್ನಡ ರತ್ನ ಪ್ರಶಸ್ತಿ


ಹಂಪಿ, 19 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಕನ್ನಡ ನಾಡು-ನುಡಿ ಸಂಸ್ಕೃತಿಯ ಅಸ್ಮಿತೆಯನ್ನು ಹೊರನಾಡಿನಲ್ಲಿ ಉಳಿಸಿ ಬೆಳೆಸುವ ಕಾಯಕವನ್ನು ಚೆಂಬೂರು ಕರ್ನಾಟಕ ಸಂಘವು ಕಳೆದ ಏಳು ದಶಕಗಳಿಂದ ಮಾಡುತ್ತಾ ಬಂದಿದೆ. ಈ ಕಾರ್ಯಕ್ರಮದಲ್ಲಿ ರಾಷ್ಟ್ರಮಟ್ಟದಲ್ಲಿ ಗಣನೀಯ ಸಾಧನೆ ಮಾಡಿದ ಕನ್ನಡಿಗರನ್ನು ಗುರುತಿಸಿ ``ರಾಷ್ಟ್ರೀಯ ಕನ್ನಡ ರತ್ನ’’ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

ಈ ಅಮೂಲ್ಯ ರಾಷ್ಟ್ರೀಯ ಕನ್ನಡ ರತ್ನ’’ ಪ್ರಶಸ್ತಿಗೆ ಚೆಂಬೂರು ಕರ್ನಾಟಕ ಸಂಘವು ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳು ಹಾಗೂ ಸಂಶೋಧಕರೂ ಆದ ಡಾ.ಡಿ.ವಿ. ಪರಮಶಿವಮೂರ್ತಿಯವರನ್ನು ಆಯ್ಕೆ ಮಾಡಲಾಗಿದ್ದು, ಡಿ, 20.ರಂದು ಸಂಜೆ 5ಕ್ಕೆ ಸರಿಯಾಗಿ ಚೆಂಬೂರು ಕರ್ನಾಟಕ ಹೈಸ್ಕೂಲಿನ ಸಭಾಂಗಣದಲ್ಲಿ ನಡೆಯಲಿರುವ ಸಂಘದ ಸಾಂಸ್ಕೃತಿಕ ಕಾರ್ಯಕ್ರಮ `ಸಾಹಿತ್ಯ ಸಹವಾಸ’ 2025-26ರಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಚೆಂಬೂರು ಕರ್ನಾಟಕ ಸಂಘ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande